ಜವಾನ್ನಲ್ಲಿ ಶಾರುಖ್ ಖಾನ್ ( Shah Rukh Khan) ಮತ್ತು ನಯನತಾರಾ (Nayanthara) ಅವರ ಆನ್-ಸ್ಕ್ರೀನ್ ಕೆಮಿಸ್ಟ್ರಿಯನ್ನು ಪ್ರೇಕ್ಷಕರು ಮೆಚ್ಚಿದ್ದಾರೆ. ಇದೀಗ ಇನ್ನೊಬ್ಬ ಬಾಲಿವುಡ್ ಸೂಪರ್ಸ್ಟಾರ್ ಶೀಘ್ರದಲ್ಲೇ ದಕ್ಷಿಣ ಭಾರತ ಖ್ಯಾತ ನಟಿಯ ಜತೆ ತೆರೆ ಹಂಚಿಕೊಳ್ಳಲು ಸಿದ್ಧರಾಗಿದ್ದಾರೆ. ಈ ಜೋಡಿ ಬೇರೆ ಯಾರೂ ಅಲ್ಲ, ಸಲ್ಮಾನ್ ಖಾನ್ (Salman Khan) ಮತ್ತು ಸಮಂತಾ ರುತ್ ಪ್ರಭು (Samantha Ruth Prabh). ಕರಣ್ ಜೋಹರ್ ಅವರ ಧರ್ಮ ಪ್ರೊಡಕ್ಷನ್ಸ್ ನಿರ್ಮಿಸುವ ಮುಂಬರುವ ಚಿತ್ರದಲ್ಲಿ ಸಮಂತಾ ರುತ್ ಪ್ರಭು ಮತ್ತು ಸಲ್ಮಾನ್ ಖಾನ್ ರೊಮ್ಯಾನ್ಸ್ ಮಾಡುವ ಸಾಧ್ಯತೆಯಿದೆ ಎಂದು ವರದಿಯಾಗಿದೆ.
ಈ ಚಿತ್ರಕ್ಕಾಗಿ ನಿರ್ದೇಶಕ ವಿಷ್ಣುವರ್ಧನ್ ಅವರೊಂದಿಗೆ ಸಮಂತಾ ಮಾತುಕತೆ ನಡೆಸುತ್ತಿದ್ದಾರೆ ಎಂದು ವರದಿಯಾಗಿದೆ. ವರದಿಯ ಪ್ರಕಾರ ಈ ಸಿನಿಮಾಗೆ ಸಮಂತಾ ಜತೆಗೆ ತ್ರಿಶಾ ಮತ್ತು ಅನುಷ್ಕಾ ಶೆಟ್ಟಿ ಕೂಡ ಇರಲಿದ್ದಾರೆ ಎಂದು ಹೇಳಲಾಗಿದೆ. ಸದ್ಯಕ್ಕೆ ಚಿತ್ರತಂಡದಿಂದ ಯಾವುದೇ ಅಧಿಕೃತ ಮಾಹಿತಿ ಬಂದಿಲ್ಲ.
ಸಲ್ಮಾನ್ ಖಾನ್ ಮತ್ತು ಕರಣ್ ಜೋಹರ್ ಒಟ್ಟಿಗೆ ಮತ್ತೆ ಸಿನಿಮಾ ಮಾಡಲಿದ್ದಾರೆ ಎಂದು ಈ ಮುಂಚೆಯೇ ಗಾಸಿಪ್ಗಳು ಹಬ್ಬಿತ್ತು. 1998ರಲ್ಲಿ ಕುಚ್ ಕುಚ್ ಹೋತಾ ಹೈನಲ್ಲಿ ಸಲ್ಮಾನ್ ಕಾಣಿಸಿಕೊಂಡ ನಂತರ ಬರೋಬ್ಬರಿ 25 ವರ್ಷಗಳ ಬಳಿಕ ಕರಣ್ ಜತೆ ಕೈ ಜೋಡಿಸುತ್ತಿದ್ದಾರೆ ಸಲ್ಮಾನ್. 2023ರ ನವೆಂಬರ್ನಲ್ಲಿ ಈ ಸಿನಿಮಾ ಸೆಟ್ಟೇರಲಿದೆ ಎಂದು ಹೇಳಲಾಗುತ್ತಿದೆ. ಪ್ರಿ-ಪ್ರೊಡಕ್ಷನ್ ಕೆಲಸವು ಆಗಸ್ಟ್ 2023ರಿಂದ ಶುರುವಾಗಲಿದೆ ಎಂದೂ ವರದಿಯಾಗಿದೆ.
ಇದನ್ನೂ ಓದಿ: Salman Khan: ಸೋಮಿ ಅಲಿ ಅಪಾರ್ಟ್ಮೆಂಟ್ನಲ್ಲಿ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿದ್ದ ಸಲ್ಮಾನ್; ಮುರಿದು ಬಿತ್ತು ಮದುವೆ!
#Samantha and #TrishaKrishnan are the front runners for playing female lead in Megastar #SalmanKhan's next film with Vishnu Vardhan.
— Sahil Saifi (@Sahilsa29) September 18, 2023
Your Favourite?
RT Must jaruri na pic.twitter.com/uodAcWa2jp
ಸಲ್ಮಾನ್ ಖಾನ್ ಅವರ ಬಹುನಿರೀಕ್ಷಿತ ಚಿತ್ರ ಟೈಗರ್ 3 ಬಿಡುಗಡೆಗೆ ಸಜ್ಜಾಗುತ್ತಿದೆ. ಇದು ಈ ವರ್ಷ ದೀಪಾವಳಿಯಂದು ಥಿಯೇಟರ್ಗಳಲ್ಲಿ ಬರಲಿದೆ. ಅಷ್ಟೇ ಅಲ್ಲದೇ ಯಶ್ ರಾಜ್ ಅವರ ʼಟೈಗರ್ ವರ್ಸಸ್ ಪಠಾಣ್ʼ ಸಿನಿಮಾ ಕೂಡ ಹೊಂದಿದ್ದಾರೆ. ಮತ್ತೊಂದೆಡೆ, ಸಮಂತಾ ಇತ್ತೀಚೆಗೆ ವಿಜಯ್ ದೇವರಕೊಂಡ ಜತೆ ʼಖುಷಿʼ ಚಿತ್ರದಲ್ಲಿ ಕಾಣಿಸಿಕೊಂಡರು. ಬಿಡುಗಡೆಗೊಂಡು ಯಶಸ್ವಿ ಪ್ರದರ್ಶನ ಕಂಡಿತು. ಸಮಂತಾ ಅವರಿಗೆ ವಿಜಯ್ ದೇವರಕೊಂಡ ಅವರ ಜತೆ ಇದು ಎರಡನೇ ಸಿನಿಮಾವಾಗಿದೆ. ಈ ಹಿಂದೆ 2018ರಲ್ಲಿ ನಟಿ ವಿಜಯ್ ಅವರೊಂದಿಗೆ ‘ಮಹಾನಟಿ’ ಸಿನಿಮಾದಲ್ಲಿ ಜತೆಯಾಗಿ ಕಾಣಿಸಿಕೊಂಡಿದ್ದರು. ಶೀಘ್ರದಲ್ಲೇ ಸಿಟಾಡೆಲ್ನ ಭಾರತೀಯ ಆವೃತ್ತಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ, ಇದರಲ್ಲಿ ವರುಣ್ ಧವನ್ ಸಹ ನಟಿಸಿದ್ದಾರೆ.