ಬೆಂಗಳೂರು: ಬಾಲಿವುಡ್ ನಟ ಸಲ್ಮಾನ್ ಖಾನ್ (Salman Khan) ತಮ್ಮ ಸಿನಿ ಜರ್ನಿಯಲ್ಲಿ ಹಲವಾರು ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ಹಿಂದೊಮ್ಮೆ ಪ್ರಶಸ್ತಿ ಸಮಾರಂಭದಲ್ಲಿ ತನಗೆ ಆದ ಅವಮಾನವನ್ನು ಹಾಗೇ ತಾನು ಪ್ರಶಸ್ತಿಗಳಿಗೆ ಹೆಚ್ಚು ಪ್ರಾಮುಖ್ಯತೆ ನೀಡಿಲ್ಲ ಎಂದು ಹೇಳಿಕೊಂಡಿದ್ದಾರೆ. ʻನಾವು ಅವಾರ್ಡ್ ಟ್ರೋಫಿಗಳನ್ನು ಬಾಗಿಲು ಕೀಲು ಮುರಿದಾಗ ಅದಕ್ಕೆ ಆಧಾರವಾಗಿ ಇಡುತ್ತೇವೆ. ಕೆಲವೊಮ್ಮೆ ಪ್ರಶಸ್ತಿಗಳನ್ನು ಇತರರಿಗೆ ನೀಡುತ್ತೇವೆʼʼ ಎಂದು ವ್ಯಂಗ್ಯವಾಗಿ ಹೇಳಿಕೊಂಡಿದ್ದಾರೆ. ಅಲ್ಲದೇ ಅವಾರ್ಡ್‌ಕಿಂತ ರಿವಾರ್ಡ್(ಗಳಿಕೆ) ಮುಖ್ಯ ಎಂದು ಸಲ್ಮಾನ್ ಖಾನ್ ಕುಹುಕವಾಗಿ ಹೇಳಿದ್ದಾರೆ.
ಸಲ್ಮಾನ್ ಖಾನ್, ಪ್ರಶಸ್ತಿಗಳಿಗಿಂತ ಅಭಿಮಾನಿಗಳ ಪ್ರೀತಿ ಮತ್ತು ಗೌರವವನ್ನು ಸಂಪಾದಿಸುವುದು ನನಗೆ ಮುಖ್ಯವಾಗಿದೆ ಎಂದು ಹೇಳಿದರು. “ಮನೆಯಲ್ಲಿ ಹಲವಾರು ಪ್ರಶಸ್ತಿಗಳಿವೆ. ನನ್ನ ತಂದೆ ಇಷ್ಟು ದಿನ ಕೆಲಸ ಮಾಡಿದ್ದಾರೆ. ನನ್ನ ಪ್ರಕಾರ ನಾವು ಟ್ರೋಫಿಗಳನ್ನು ಬಾಗಿಲ ಕೀಲು ಮುರಿದಾಗ ಅದಕ್ಕೆ ಆಧಾರವಾಗಿ ಇಡುತ್ತೇವೆ. ಕೆಲವೊಮ್ಮೆ ಪ್ರಶಸ್ತಿಗಳನ್ನು ಇತರರಿಗೆ ನೀಡುತ್ತೇವೆ. ನಾನು ಪ್ರಶಸ್ತಿ ಕಾರ್ಯಕ್ರಮಗಳಿಗೆ ಬರುತ್ತೇನೆ, ಪ್ರದರ್ಶನ ನೀಡಿ, ಹೋಸ್ಟ್ ಮಾಡುತ್ತೇನೆ. ಮತ್ತು ಉಳಿದದ್ದನ್ನು ಪ್ರೇಕ್ಷಕರಿಗೆ ಬಿಡುತ್ತೇನೆ. ಯುವ ಪೀಳಿಗೆ ಈ ಪ್ರಶಸ್ತಿಗಳನ್ನು ಪಡೆಯಬೇಕು ಎಂದು ನಾನು ಭಾವಿಸುತ್ತೇನೆ. ಅದು ಅವರ ಪ್ರಯಾಣ ಹಾಗೂ ಅವರನ್ನು ಪ್ರೇರೇಪಿಸುವಂತೆ ಮಾಡುತ್ತದೆʼʼ ಎಂದರು.
ಇದನ್ನೂ ಓದಿ: Salman Khan: ಸಲ್ಮಾನ್ ಖಾನ್‌ಗೆ ಮತ್ತೆ ಜೀವ ಬೆದರಿಕೆ, ಗ್ಯಾಂಗ್‌ಸ್ಟರ್ ಬಿಷ್ಣೋಯಿ ವಿರುದ್ಧ ಎಫ್‌ಐಆರ್
ಹಣ ನೀಡಿ ಪ್ರದರ್ಶನ ಕೊಡುವುದು ಶುರುವಾಗಿದ್ದೇ ನನ್ನಿಂದ
68ನೇ ಫಿಲ್ಮ್‌ಫೇರ್ ಅವಾರ್ಡ್ಸ್‌ನ ಪ್ರಾರಂಭದಲ್ಲಿ, ಸಲ್ಮಾನ್ ಖಾನ್ ಅವರು ಮೈನೆ ಪ್ಯಾರ್ ಕಿಯಾಗೆ ನಾಮನಿರ್ದೇಶನಗೊಂಡ ಸಮಯದ ಬಗ್ಗೆ ಹೇಳಿಕೊಂಡಿದ್ದಾರೆ. ʻʻಪ್ರಶಸ್ತಿಯನ್ನು ನೀಡುವುದಾಗಿ ಪ್ರದರ್ಶಕರು ನನಗೆ ಭರವಸೆ ನೀಡಿದ್ದರು. ನಾನು ನನ್ನ ಕುಟುಂಬದೊಂದಿಗೆ ಅಲ್ಲಿಗೆ ಹೋಗಿದ್ದೆ. ಆದರೆ ಪ್ರಶಸ್ತಿ ಗೆದ್ದದ್ದು ಮಾತ್ರ ಜಾಕಿ ಶ್ರಾಫ್. ಆ ರಾತ್ರಿ ನಾನು ಕೂಡ ಪ್ರದರ್ಶನ ನೀಡಬೇಕಾಗಿತ್ತು. ಪ್ರದರ್ಶಕರು ಈ ಮೂಲಕ ಸುಳ್ಳು ಹೇಳಿ ನನ್ನನ್ನು ಕರೆಸಿಕೊಂಡಿದ್ದರು. ಸುಳ್ಳು ಹೇಳಿ ಕರೆಸಿಕೊಂಡಿದ್ದಕ್ಕೆ ನಾನು ಅಂದು ಪ್ರದರ್ಶನ ನೀಡಲು ನಿರಾಕರಿಸಿದೆ. ಆಗ ಪ್ರದರ್ಶಕರು ನನಗೆ ಹಣವನ್ನು ನೀಡಲು ಬಂದರು. ಹೆಚ್ಚು ಬೇಡಿಕೆಯಿಟ್ಟರೂ ಮತ್ತು ಅಂತಿಮವಾಗಿ ಅವರು ಹೇಳಿದ್ದಕ್ಕಿಂತಲೂ ಐದು ಪಟ್ಟು ಕಡಿಮೆ ಕೊಟ್ಟರು. ಈ ರೀತಿ ಹಣ ಪಡೆದು ಪ್ರದರ್ಶನ ಕೊಡುವುದು ಶುರುವಾಗಿದ್ದೇ ನನ್ನಿಂದʼʼಎಂದು ಹೇಳಿಕೊಂಡರು.
ಈವೆಂಟ್‌ನಲ್ಲಿ, ಸಲ್ಮಾನ್ ಖಾನ್ ಬಹಳಷ್ಟು ನಟರ ಬಗ್ಗೆಯೂ ಮಾತನಾಡಿದರು. ಹಲವಾರು ನಟರು ಈಗ ಮುಂದೆ ಬರುತ್ತಿದ್ದಾರೆ. ಇದರಿಂದ ನಿಮಗೆ ಸ್ಪರ್ಧಿಗಳು ಹುಟ್ಟಿಕೊಳ್ಳುತ್ತಿದ್ದಾರೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಸಲ್ಲು ʻʻಶಾರುಖ್ ಖಾನ್, ಅಕ್ಷಯ್ ಕುಮಾರ್, ಆಮೀರ್ ಖಾನ್ ಮತ್ತು ಅಜಯ್ ದೇವಗನ್ ಹೀಗೆ ಇವರೆಲ್ಲರ ಮುಂದೆ ಎಂತಹ ಕಿರಿಯ ನಟರೇ ಮುಂದೆ ಬಂದರೂ ನಮ್ಮ ಡಿಮ್ಯಾಂಡ್ ಇನ್ನೂ ಹೆಚ್ಚುತ್ತಲೇ ಇರುತ್ತದೆʼʼ ಎಂದು ಹೇಳಿದ್ದಾರೆ. ಮಾತು ಮುಂದುವರಿಸಿ ʻʻನಾನು ಯಾವಗಲೇ ಸೋತಿದ್ದೇನೆ. ನನಗೆ ಅವಾರ್ಡ್ ಮುಖ್ಯವಲ್ಲ. ನನಗೆ ರಿವಾರ್ಡ್ ಮುಖ್ಯʼʼಎಂದು ಹೇಳಿದ್ದಾರೆ.