ಮುಂಬೈ : ಪಂಜಾಬಿ ಜನಪ್ರಿಯ ಗಾಯಕ ಸಿಧು ಮೂಸೆವಾಲಾ ಹತ್ಯೆಗೆ ಸಂಬಂಧಿಸಿದಂತೆ ಲಾರೆನ್ಸ್ ಬಿಷ್ಣೋಯಿ ಪ್ರಮುಖ ಆರೋಪಿಯಾಗಿರುವ ಹಿನ್ನೆಲೆಯಲ್ಲಿ ಬಾಲಿವುಡ್ ನಟ ಸಲ್ಮಾನ್ ಖಾನ್ ಭದ್ರತೆಯನ್ನು ಹೆಚ್ಚಿಸಲಾಗಿದೆ ಎಂದು ವರದಿಯಾಗಿದೆ.
ʼಬೆದರಿಕೆ ಮಟ್ಟವನ್ನು ಗಮನದಲ್ಲಿಟ್ಟುಕೊಂಡು ಸಲ್ಮಾನ್ ಖಾನ್‌ಗೆ ಭದ್ರತೆಯನ್ನು ಹೆಚ್ಚಸಲಾಗಿದೆ, ಸುರಕ್ಷತೆಯ ದೃಷ್ಟಿಯಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆʼ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
‘ಸಲ್ಮಾನ್ ಖಾನ್ ಅವರ ಭದ್ರತೆಯನ್ನು ಹೆಚ್ಚಿಸಿದ್ದೇವೆ. ರಾಜಸ್ಥಾನದ ಗ್ಯಾಂಗ್‌ನಿಂದ ಯಾವುದೇ ಅಹಿತಕರ ಚಟುವಟಿಕೆ ನಡೆಯದಂತೆ ನೋಡಿಕೊಳ್ಳಲು ಸಲ್ಮಾನ್ ಅವರ ಅಪಾರ್ಟ್‌ಮೆಂಟ್ ಸುತ್ತ ಪೊಲೀಸರು ಗಸ್ತು ತಿರುಗುತ್ತಿರುತ್ತಾರೆʼ ಎಂದು ಪೊಲೀಸರು ಅಧಿಕಾರಿ ಒಬ್ಬರು ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ.
ಇದನ್ನೂ ಓದಿ | ಕಲ್ ಯಾದ್ ಆಯೇಂಗೇ ಯೇ ಫಲ್ ಎಂದು ಹಾಡಿ ಬಾಳ ಪಯಣ ಮುಗಿಸಿದ ಗಾಯಕ ಕೆಕೆ
ಕೃಷ್ಣ ಮೃಗ ಭೇಟೆಗೆ ಸಂಬಂಧಿಸಿದಂತೆ ಸಲ್ಮಾನ್ ಖಾನ್ ಅವರನ್ನು ಹತ್ಯೆ ಮಾಡಲು ಬಿಷ್ಣೋಯಿ ಸಂಚು ರೂಪಿಸಿದ್ದರು. ಕೃಷ್ಣ ಮೃಗ ಪವಿತ್ರ ಜೀವಿ ಎಂಬುದು ಬಿಷ್ಣೋಯ್‌ಗಳ ನಂಬಿಕೆಯಾಗಿದೆ. ಸಲ್ಮಾನ್ ಖಾನ್, ಕೃಷ್ಣ ಮಗ ಬೇಟೆ ಪ್ರಕರಣದ ಆರೋಪಿಯಾಗಿರುವುದರಿಂದ ಹಲವು ಬಾರಿ ಬೆದರಿಕೆ ಹಾಕಲಾಗಿತ್ತು.
ಸಲ್ಮಾನ್‌ರನ್ನು ಕೊಲುತ್ತೇನೆ ಎಂದು 2018ರಲ್ಲಿ ನ್ಯಾಯಾಲಯದ ಹೊರಗೆ ಲಾರೆನ್ಸ್ ಬಿಷ್ಣೋಯಿ ಹೇಳಿದ್ದ. ಬಿಷ್ಣೋಯಿ ನಿಕತಟವರ್ತಿ ರಾಹುಲ್ ಅಲಿಯಾಸ್ ಸುನ್ನಿಯನ್ನು 2020ರಲ್ಲಿ ಕೊಲೆ ಆರೋಪದಲ್ಲಿ ಬಂಧಿಸಲಾಗಿತ್ತು. ಅವನು ಸನ್ಮಾನ್ ಖಾನ್ ಅವರನ್ನು ಹತ್ಯೆ ಮಾಡಲು ಸಂಚು ರೂಪಿಸಿದ್ದ ಎಂಬ ಮಾಹಿತಿ ಇರುವುದಾಗಿ ಪೊಲೀಸರು ತಿಳಿಸಿದ್ದರು.
ಇದನ್ನೂ ಓದಿ | ʼದೇವರ ಪುತ್ರಿʼ ಬಾಲಿವುಡ್ ಎಂಟ್ರಿ?: ಸಾರಾ ತೆಂಡೂಲ್ಕರ್ ಸಿನಿಮಾ ಚರ್ಚೆ