Site icon Vistara News

War 2: ವಾರ್‌ 2ನಲ್ಲಿ ಸಲ್ಮಾನ್‌, ಶಾರುಖ್‌, ಹೃತಿಕ್ ಒಟ್ಟಿಗೆ ತೆರೆಗೆ!

Salman Khan, Shah Rukh Khan, Hrithik Roshan

ಬೆಂಗಳೂರು: ಯಶ್‌ರಾಜ್‌ ಫಿಲ್ಮ್ಸ್‌ ಸ್ಪೈ ಯೂನಿವರ್ಸ್‌ (War 2: ) ಅಭಿಮಾನಿಗಳು ಆದಿತ್ಯ ಚೋಪ್ರಾ ರಚಿಸಿದ ಫ್ರಾಂಚೈಸ್‌ನ ಕೆಲವು ಪ್ರಮುಖ ಸ್ಪೈಸ್‌ಗಳನ್ನು ವಾರ್ 2ನಲ್ಲಿ ಒಟ್ಟಿಗೆ ನೋಡಬಹುದು. ವರದಿಯ ಪ್ರಕಾರ, ಅಯಾನ್ ಮುಖರ್ಜಿ ಅವರು ಸಲ್ಮಾನ್ ಖಾನ್, ಶಾರುಖ್ ಖಾನ್ ಮತ್ತು ಹೃತಿಕ್ ರೋಷನ್ ಅವರನ್ನು ವಾರ್‌ 2 ಮೂಲಕ ಒಟ್ಟಿಗೆ ಕರೆತರಲಿದ್ದಾರೆ. ಅಯಾನ್ ಅಕ್ಟೋಬರ್‌ನಲ್ಲಿ ವಾರ್‌ 2 ಚಿತ್ರೀಕರಣವನ್ನು ಪ್ರಾರಂಭಿಸುತ್ತಾರೆ ಎಂದು ವರದಿಯಾಗಿದೆ. ವಾರ್ 2ನಲ್ಲಿ ಜ್ಯೂನಿಯರ್‌ ಎನ್‌ಟಿಆರ್‌, ಕಿಯಾರಾ ಆಡ್ವಾಣಿ ಕೂಡ ಕಾಣಿಸಿಕೊಳ್ಳಲಿದ್ದಾರೆ. ಇದರಲ್ಲಿ ಹೃತಿಕ್ ಪ್ರಮುಖ ಪಾತ್ರದಲ್ಲಿದ್ದಾರೆ ಎಂತಲೂ ವರದಿಯಾಗಿದೆ.

ವಾರ್‌ 2 ಸಿನಿಮಾದ ಚಿತ್ರದ ಶೂಟಿಂಗ್ ಈ ತಿಂಗಳಲ್ಲೇ ಆರಂಭಿಸಲು ಅಯಾನ್ ನಿರ್ಧರಿಸಿದ್ದಾರೆ ಎನ್ನಲಾಗಿದೆ. ಹೃತಿಕ್ ರೋಷನ್ ಪ್ರಸ್ತುತ ಫೈಟರ್‌ ಚಿತ್ರಕ್ಕಾಗಿ ಇಟಲಿಯಲ್ಲಿದ್ದಾರೆ. ಶೀಘ್ರದಲ್ಲೇ ವಾರ್‌ 2 ಚಿತ್ರೀಕರಣವನ್ನು ಪ್ರಾರಂಭಿಸಲು ಹಿಂತಿರುಗುತ್ತಾರೆ. ವಾರ್ 2ರಲ್ಲಿ, ಹೃತಿಕ್ ರೋಷನ್ ಹಾಗೂ ಸಲ್ಮಾನ್‌. ಶಾರುಖ್‌ ಅವರನ್ನು ಒಟ್ಟಿಗೆ ತರುವ ಯೋಜನೆಯಲ್ಲಿ ಅಯಾನ್ ಇದ್ದಾರೆ ಎನ್ನಲಾಗಿದೆ. “ಈ ಚಿತ್ರವು ಹಲವಾರು ಕಾರಣಗಳಿಗಾಗಿ ರೋಮಾಂಚನಕಾರಿಯಾಗಿದೆ. ಆದರೆ ಅಯಾನ್ ಅವರ ನಿರ್ದೇಶನವು YRF ಸ್ಪೈ ಯೂನಿವರ್ಸ್‌ನಲ್ಲಿ ಮೂರು ಮೆಗಾಸ್ಟಾರ್‌ಗಳನ್ನು ಒಟ್ಟಿಗೆ ತರುವ ಮೊದಲ ಚಿತ್ರವಾಗಿದೆʼʼಎನ್ನಲಾಗಿದೆ.

ಇದನ್ನೂ ಓದಿ: Jr NTR: ʻವಾರ್‌-2ʼ ಸಿನಿಮಾದಲ್ಲಿ ಜ್ಯೂನಿಯರ್‌ ಎನ್‌ಟಿಆರ್‌ ನಿರ್ವಹಿಸುತ್ತಿರುವ ಪಾತ್ರವೇನು?

ವರದಿಯ ಪ್ರಕಾರ, ಜ್ಯೂನಿಯರ್‌ ಎನ್‌ಟಿಆರ್‌ ವಿಲನ್‌ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. “ಅಂತಿಮ ಸ್ಕ್ರಿಪ್ಟ್ ಇನ್ನೂ ತಯಾರಾಗಿಲ್ಲ. ವಾರ್ 2ನಲ್ಲಿ ಜ್ಯೂನಿಯರ್‌ ಎನ್‌ಟಿಆರ್‌ ಪಾತ್ರವು ಕೆಲವು ನೆಗೆಟಿವ್‌ ಶೇಡ್‌ ಹೊಂದಿರಲಿದೆʼʼ ಎನ್ನಲಾಗಿದೆ. ವಾರ್ 2 ನವೆಂಬರ್‌ನಲ್ಲಿ ಚಿತ್ರೀಕರಣವನ್ನು ಪ್ರಾರಂಭಿಸಲಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ. ಹೃತಿಕ್ ರೋಷನ್ ಒಂದು ತಿಂಗಳ ಬಳಿಕ ಸೆಟ್‌ಗೆ ಬರಲಿದ್ದಾರೆ ಎನ್ನಲಾಗಿದೆ.

ಬ್ರಹ್ಮಾಸ್ತ್ರ ಸಿನಿಮಾ ಬಳಿಕ ಆದಿತ್ಯ ಚೋಪ್ರಾ ಅವರು ಅಯನ್ ಮುಖರ್ಜಿ ಅವರ ನಿರ್ದೇಶಕ್ಕೆ ಮನಸೋತು, ಈ ಸಿನಿಮಾ ಮಾಡಲು ಅವಕಾಶ ನೀಡಿದ್ದಾರೆ ಎನ್ನಲಾಗಿದೆ. ಜ್ಯೂನಿಯರ್‌ ಎನ್‌ಟಿಆರ್‌ ಇತ್ತೀಚಿನ ಬ್ಲಾಕ್‌ಬಸ್ಟರ್ ಆರ್‌ಆರ್‌ಆರ್‌ ಸಿನಿಮಾಗಾಗಿ 45 ಕೋಟಿ ರೂ. ಪಡೆದಿದ್ದರು. ವಾರ್‌ 2 ಸಿನಿಮಾಗಾಗಿ 100 ಕೋಟಿ ರೂ. ಸಂಭಾವನೆ ಪಡೆಯುತ್ತಿದ್ದಾರೆ ಎನ್ನಲಾಗಿದೆ.

ಸಿದ್ದಾರ್ಥ್ ಆನಂದ್ ಅವರು ‘ವಾರ್’ ಚಿತ್ರವನ್ನು ನಿರ್ದೇಶನ ಮಾಡಿದ್ದರು. ಈ ಚಿತ್ರ ಬಾಕ್ಸ್ ಆಫೀಸ್​ನಲ್ಲಿ ಯಶಸ್ಸು ಕಂಡಿತು. ಈ ಚಿತ್ರದಲ್ಲಿ ಹೃತಿಕ್ ರೋಷನ್ ಹಾಗೂ ಟೈಗರ್ ಶ್ರಾಫ್ ನಟಿಸಿದ್ದರು. ಮೊದಲ ಪಾರ್ಟ್​​ನಲ್ಲಿ ಟೈಗರ್ ಶ್ರಾಫ್ ಪಾತ್ರ ಕೊನೆಗೊಂಡಿದೆ. ಹೀಗಾಗಿ ‘ವಾರ್-2’ ಚಿತ್ರದಲ್ಲಿ ಹೃತಿಕ್ ಮಾಡಿರುವ ಕಬೀರ್ ಪಾತ್ರ ಮುಂದುವರಿಯುತ್ತಿದೆ. ಜ್ಯೂನಿಯರ್‌ ಎನ್‌ಟಿಆರ್‌ ಅವರು ತಮ್ಮ ಮೊದಲ ಬಾಲಿವುಡ್​ ಚಿತ್ರಕ್ಕೆ ಇಷ್ಟು ದೊಡ್ಡ ಮೊತ್ತದ ಸಂಭಾವನೆ ಪಡೆಯುತ್ತಿರುವುದು ವಿಶೇಷ. ವಾರ್‌-2 ಪ್ಯಾನ್ ಇಂಡಿಯಾ ಚಲನಚಿತ್ರವಾಗಿದ್ದು, ಉತ್ತರ ಮತ್ತು ದಕ್ಷಿಣ ಭಾಗದ ಸೂಪರ್‌ಸ್ಟಾರ್‌ಗಳನ್ನು ಹೊಂದಿದೆ.

 ʻಈಗಾಗಲೇ ಯಶ್‌ ರಾಜ್‌ ಫಿಲ್ಮ್ಸ್‌ 2012 ರಲ್ಲಿ ಏಕ್ ಥಾ ಟೈಗರ್ ನಂತರ ಟೈಗರ್ ಜಿಂದಾ ಹೈ (2017), ವಾರ್ (2019), ಮತ್ತು ಪಠಾಣ್‌ (2023) ಸಿನಿಮಾವನ್ನು ನೀಡಿತ್ತು. ಎಲ್ಲವೂ ಹಿಟ್‌ ಚಿತ್ರಗಳೇ ಆಗಿದೆ. ಟೈಗರ್ 3 ನವೆಂಬರ್‌ನಲ್ಲಿ ಹಿಂದಿ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ಈ ತಿಂಗಳ ಆರಂಭದಲ್ಲಿ, ಸಲ್ಮಾನ್ ಖಾನ್ ಮತ್ತು ಕತ್ರಿನಾ ಕೈಫ್, ಚಿತ್ರದ ಹೊಸ ಪೋಸ್ಟರ್‌ನೊಂದಿಗೆ ಸುದ್ದಿಯನ್ನು ಹಂಚಿಕೊಂಡಿದ್ದರು.

Exit mobile version