ಬೆಂಗಳೂರು: ಆಮೀರ್ ಖಾನ್ ಅವರ ಪುತ್ರಿ ಇರಾ ಖಾನ್ (Ira Khan Nupur Reception) ಅವರು ತಮ್ಮ ಬಹುಕಾಲದ ಗೆಳೆಯ, ಫಿಟ್ನೆಸ್ ತರಬೇತುದಾರ ನೂಪುರ್ ಶಿಖರೆ ಅವರನ್ನು ಜನವರಿ 3ರಂದು ವಿವಾಹವಾದರು. ಈ ಯುವಜೋಡಿ ರಿಜಿಸ್ಟರ್ ಮದುವೆಯಾಗಿದೆ. ಮದುವೆಯಲ್ಲಿ ಕುಟುಂಬದವರು ಹಾಗೂ ಸ್ನೇಹಿತರು ಮಾತ್ರ ಭಾಗವಹಿಸಿದ್ದರು. ಸಮಾರಂಭದ ನಂತರ, ಜನವರಿ 3ರಂದು ಮುಂಬೈನ ತಾಜ್ ಲ್ಯಾಂಡ್ಸ್ ಎಂಡ್‌ನಲ್ಲಿ ಆಪ್ತರಿಗೆ ಹಾಗೂ ಸಿನಿಮಾ ಗಣ್ಯರಿಗೆ ಆರತಕ್ಷತೆಯನ್ನು ಏರ್ಪಡಿಸಲಾಗಿತ್ತು. ಜನವರಿ 8ರಂದು ಉದಯ್‌ಪುರದಲ್ಲಿ ಇಬ್ಬರ ಮದುವೆ ಅದ್ಧೂರಿಯಾಗಿ ನಡೆಯಲಿದೆ. ಇದಾದ ಅದರ ನಂತರ ಜನವರಿ 13 ರಂದು ಮುಂಬೈನಲ್ಲಿ ಅದ್ಧೂರಿ ಆರತಕ್ಷತೆ ನಡೆಯಲಿದೆ. ಸಲ್ಮಾನ್ ಖಾನ್ ಮತ್ತು ಶಾರುಖ್ ಖಾನ್ ಆರತಕ್ಷತೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ವರದಿಯಾಗಿದೆ.
ಜನವರಿ 13 ರಂದು, ಬಿಕೆಸಿ ಜಿಯೋ ಸೆಂಟರ್‌ನಲ್ಲಿ ಅದ್ಧೂರಿ ಆರತಕ್ಷತೆಯನ್ನು ಆಯೋಜಿಸಿದ್ದಾರೆ ಎನ್ನಲಾಗಿದೆ. ಅನೇಕ ಗಣ್ಯರನ್ನು ಇನ್ವೈಟ್ ಮಾಡಿದ್ದಾರೆ ಎನ್ನಲಾಗಿದೆ. ಸಲ್ಮಾನ್ ಖಾನ್, ಶಾರುಖ್ ಖಾನ್, ಅಜಯ್ ದೇವಗನ್, ಅಮಿತಾಭ್ ಬಚ್ಚನ್, ಕರಣ್ ಜೋಹರ್, ಅಕ್ಷಯ್ ಕುಮಾರ್, ಕರೀನಾ ಕಪೂರ್ ಖಾನ್, ರಾಜ್ ಕುಮಾರ್ ಹಿರಾನಿ, ಅಶುತೋಷ್ ಗೋವಾರಿಕರ್, ಜೂಹಿ ಚಾವ್ಲಾ, ರಾಕೇಶ್ ಓಂಪ್ರಕಾಶ್ ಮೆಹ್ರಾ, ಇತರರು ಸಮಾರಂಭದಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ ಎಂದು ವರದಿಯಾಗಿದೆ. ಆಮಿರ್ ಅಂಬಾನಿ ಕುಟುಂಬಕ್ಕೂ ಆಹ್ವಾನ ನೀಡಿದ್ದಾರೆ. ಜನವರಿ 3 ರಂದು ನಡೆದ ಆರತಕ್ಷತೆಯಲ್ಲಿ ಅಂಬಾನಿ ಕುಟುಂಬ ಉಪಸ್ಥಿತಿ ಇತ್ತು. ಇದರೊಂದಿಗೆ ಮುಂಬೈನಲ್ಲಿ ನಡೆದ ಅದ್ಧೂರಿ ಆರತಕ್ಷತೆಗೆ ದಕ್ಷಿಣ ಚಿತ್ರರಂಗದ ಸೆಲೆಬ್ರಿಟಿಗಳಿಗೂ ಆಹ್ವಾನ ನೀಡಲಾಗಿದೆ.
ಇನ್ನು ವಿವಾಹದ ಸಂದರ್ಭದಲ್ಲಿ ನೂಪರ್ ತಮ್ಮ ವಿಚಿತ್ರ ವರ್ತನೆಯಿಂದಾಗಿ ಗಮನ ಸೆಳೆದಿದ್ದಾರೆ. ಮದುಮಗ ಸಾಮಾನ್ಯವಾಗಿ ಸುಂದರ ಬಟ್ಟೆಗಳನ್ನು ಧರಿಸಿಕೊಂಡು ಮಿಂಚುತ್ತಾನೆ. ಆದರೆ, ನೂಪುರ್ ಶಿಖರೆ ಅವರು, ಜಾಗಿಂಗ್ ಬಟ್ಟೆಯಲ್ಲಿ ಮದುವೆ ಮನೆಯ ತನಕ ಓಡಿಕೊಂಡು ಬಂದಿದ್ದರು. ವಿಶೇಷ ಎಂದರೆ, ಮದುವೆ ನೋಂದಣಿ ಸಮಯದಲ್ಲೂ ಅದೇ ಡ್ರೆಸ್‌ನಲ್ಲಿ ಅಂದರೆ ಜಾಗಿಂಗ್ ಉಡುಪಿನಲ್ಲಿ ಅವರಿದ್ದರು. ಈ ಕಾರಣಕ್ಕಾಗಿ ಮದುವೆ ವಿಶೇಷ ಗಮನ ಸೆಳೆದಿತ್ತು.
ಇದನ್ನೂ ಓದಿ: Ira Khan-Nupur Shikhare Wedding: ಆಮೀರ್ ಖಾನ್ ಮಗಳ ಮದುವೆ ಸಂಭ್ರಮದ ಫೋಟೊಗಳಿವು!
New pic Sooooo beautiful so cute Aamir Khan ji Imran khan
— Sudha Ajmera (@SudhaAjmera13) January 4, 2024
Ira Khan & Nupur Shikhare 💕🙌#IraKhanWedding #AamirKhan #Imrankhan #Zaynkhan @AKPPL_Official pic.twitter.com/A5WodCnLGG
ಇರಾ ಖಾನ್ ಮತ್ತು ನೂಪರ್ ಅವರ ವಿವಾಹ ನಿಶ್ಚಿತಾರ್ಥ ಕಳೆದ ವರ್ಷ ನೆರವೇರಿತ್ತು. ಖಾಸಗಿಯಾಗಿ ನಡೆದ ಈ ಸಮಾರಂಭದ ಬಳಿಕ ಇಬ್ಬರೂ ಮುಂಬೈಯಲ್ಲಿ ಪಾರ್ಟಿ ಆಯೋಜಿಸಿದ್ದರು. ಈ ಹಿಂದೆ ಮಾಧ್ಯಮದೊಂದಿಗೆ ಮಾತನಾಡಿದ್ದ ಆಮೀರ್ ಖಾನ್ ತಮ್ಮ ಮಗಳ ಮದುವೆ ಬಗ್ಗೆ ಮಾಹಿತಿ ನೀಡಿದ್ದರು.