Site icon Vistara News

Salman Khan: ಈಗೆಲ್ಲ ಸಿನಿಮಾಗಳಿಗೆ 100 ಕೋಟಿ ಯಾವ ಲೆಕ್ಕ? ಬೆಂಚ್​ಮಾರ್ಕ್ ಬಗ್ಗೆ ಸಲ್ಲು ಹೇಳಿದ್ದೇನು?

Salman Khan

ಬೆಂಗಳೂರು: ಗಿಪ್ಪಿ ಗ್ರೆವಾಲ್ (Gippy Grewal) ಅಭಿನಯದ ಮುಂಬರುವ ಪಂಜಾಬಿ ಚಿತ್ರ ʼಮೌಜಾನ್ ಹಿ ಮೌಜಾನ್‌ʼನ (Maujaan Hi Maujaan) ಟ್ರೈಲರ್‌ ಬಿಡುಗಡೆ ಸಮಾರಂಭದಲ್ಲಿ ಸಲ್ಮಾನ್ ಖಾನ್ (Salman Khan) ಭಾಗಿಯಾಗಿದ್ದರು. ಈ ವೇಳೆ ನಟ ಇತ್ತೀಚಿನ ದಿನಗಳಲ್ಲಿ ಸಿನಿಮಾಗಳಿಗೆ 100 ಕೋಟಿ ರೂ. ಕ್ಲಬ್ ಎನ್ನುವುದು ಸಣ್ಣ ವಿಚಾರ ಎಂದು ಹೇಳಿದ್ದಾರೆ. ಪಂಜಾಬಿ ಇಂಡಸ್ಟ್ರಿ, ಹಿಂದಿ ಇಂಡಸ್ಟ್ರಿ, ಪ್ರತಿಯೊಂದು ಇಂಡಸ್ಟ್ರಿಯಲ್ಲಿ ಈಗ ಎಲ್ಲ ಸಿನಿಮಾಗಳು 400-500-600 ಕೋಟಿ ರೂ. ಬ್ಯುಸಿನೆಸ್‌ ಮಾಡುತ್ತಿವೆ. ಮರಾಠಿ ಚಿತ್ರಗಳು ಕೂಡ ಈ ಸಾಲಿಗೆ ಸೇರಿವೆ. ಈಗ 100 ಕೋಟಿ ರೂ. ಕ್ಲಬ್ ಸೇರುವುದು ದೊಡ್ಡ ವಿಚಾರ ಅಲ್ಲ. ಹೀಗಾಗಿ, 1000 ಕೋಟಿ ರೂಪಾಯಿ ಎನ್ನುವುದನ್ನು ಬೆಂಚ್​ಮಾರ್ಕ್​ ಮಾಡಬೇಕುʼʼ ಎಂದರು.

ಈ ಇವೆಂಟ್‌ನಲ್ಲಿ, ಗಿಪ್ಪಿ ಗ್ರೆವಾಲ್ ಅವರು ಮಾತನಾಡಿ ʻʻ ನನ್ನ ಮುಂಬರುವ ಸಿನಿಮಾ ʼಮೌಜಾನ್ ಹಿ ಮೌಜಾನ್ʼ ಅಕ್ಟೋಬರ್ 20ರಂದು ಬಿಡುಗಡೆಯಾಗಲಿದೆ. ಅಷ್ಟೇ ಅಲ್ಲದೇ ಬಾಕ್ಸ್‌ ಆಫೀಸ್‌ನಲ್ಲಿ ಒಳ್ಳೆಯ ಗಳಿಕೆ ಕಾಣಲಿದೆʼʼ ಎಂದರು.

ವರದಿಯ ಪ್ರಕಾರ ಸಲ್ಮಾನ್‌ ಅವರ ಕೊನೆಯ ಚಿತ್ರ ʼಕಿಸಿ ಕಾ ಭಾಯ್ ಕಿಸಿ ಕಿ ಜಾನ್ʼ ಭಾರತದಲ್ಲಿ ಸುಮಾರು 132 ಕೋಟಿ ರೂ. ಗಳಿಸಿತ್ತು. ಸಲ್ಮಾನ್ ಖಾನ್ ಅವರ ಈಗಿನ ಹೇಳಿಕೆಯನ್ನು ಅನೇಕರು ಒಪ್ಪಿದ್ದಾರೆ. ಶಾರುಖ್ ಖಾನ್ ನಟನೆಯ ‘ಪಠಾಣ್’ ಸಿನಿಮಾ ಸಾವಿರ ಕೋಟಿ ರೂಪಾಯಿ ಕ್ಲಬ್ ಸೇರಿದೆ. ರಜನಿಕಾಂತ್ ನಟನೆಯ ‘ಜೈಲರ್’, ಸನ್ನಿ ಡಿಯೋಲ್ ನಟನೆಯ ‘ಗದರ್ 2’ ಚಿತ್ರಗಳು ಕೂಡ ಗೆದ್ದಿದೆ. ಅನೇಕ ಹಿಂದಿ ಚಲನಚಿತ್ರಗಳು ಈ ವರ್ಷ ಬಾಕ್ಸ್ ಆಫೀಸ್ ದಾಖಲೆಗಳನ್ನು ಮುರಿದಿವೆ. 2018ರಲ್ಲಿ ಬಿಡುಗಡೆಯಾದ ರಜನಿಕಾಂತ್ ಮತ್ತು ಅಕ್ಷಯ್ ಕುಮಾರ್ ಅಭಿನಯದ 2.0 ನಂತರ 600 ಕೋಟಿ ರೂ. ಕ್ಲಬ್‌ಗೆ ಪ್ರವೇಶಿಸಿದ ಎರಡನೇ ತಮಿಳು ಚಲನಚಿತ್ರ ಜೈಲರ್‌ ಆಗಿದೆ.

ಇದನ್ನೂ ಓದಿ: Salman Khan: ಶಾರುಖ್‌-ನಯನತಾರಾ ಜೋಡಿ ಬಳಿಕ ಸಲ್ಮಾನ್‌ ಜತೆ ಫೇಮಸ್‌ ಸೌತ್‌ ನಟಿ ರೊಮ್ಯಾನ್ಸ್‌!

ಸಲ್ಮಾನ್ ಖಾನ್ ಅವರ ‘ಟೈಗರ್ 3’ ಸಿನಿಮಾ ರಿಲೀಸ್​ಗೆ ರೆಡಿ ಇದೆ. ಈ ಚಿತ್ರಕ್ಕೆ ಕತ್ರಿನಾ ಕೈಫ್ ನಾಯಕಿ. ಯಶ್ ರಾಜ್ ಫಿಲ್ಮ್ಸ್ ಚಿತ್ರವನ್ನು ನಿರ್ಮಾಣ ಮಾಡುತ್ತಿದೆ. ದೀಪಾವಳಿ ಸಂದರ್ಭದಲ್ಲಿ ಈ ಸಿನಿಮಾ ರಿಲೀಸ್ ಆಗುತ್ತಿದೆ. ಕರಣ್ ಜೋಹರ್ ಅವರ ಧರ್ಮ ಪ್ರೊಡಕ್ಷನ್ಸ್ ನಿರ್ಮಿಸುವ ಮುಂಬರುವ ಚಿತ್ರದಲ್ಲಿ ಸಮಂತಾ ರುತ್ ಪ್ರಭು ಮತ್ತು ಸಲ್ಮಾನ್ ಖಾನ್ ರೊಮ್ಯಾನ್ಸ್ ಮಾಡುವ ಸಾಧ್ಯತೆಯಿದೆ ಎಂದು ವರದಿಯಾಗಿದೆ.

Exit mobile version