ಬೆಂಗಳೂರು: ಸಲ್ಮಾನ್ ಖಾನ್ ಒಬ್ಬ ಸ್ಯಾಡಿಸ್ಟ್. ಒಬ್ಬ ಹಿಂಸ್ರಪಶು: ಹೀಗೆ ನೇರಾನೇರ ಶಬ್ದಗಳಲ್ಲಿ ನಿಂದಿಸಿದ್ದಾರೆ ಪಾಕಿಸ್ತಾನಿ ನಟಿ ಸೋಮಿ ಅಲಿ. ಈಗ ಸಾಮಾಜಿಕ ಕಾರ್ಯಕರ್ತೆಯಾಗಿರುವ ಸೋಮಿ ಅಲಿ ಸಲ್ಮಾನ್ ಖಾನ್ (Salman Khan) ಅವರ ಮಾಜಿ ಗೆಳತಿ ಕೂಡ ಆಗಿದ್ದಾರೆ.
ಸುಮಾರು ಎಂಟು ವರ್ಷ ಕಾಲ ಸಲ್ಮಾನ್ ಗೆಳತಿಯಾಗಿದ್ದ ಸೋಮಿ ಅಲಿ ಒಟ್ಟಿಗೆ ಇದ್ದಾಗ ಸಲ್ಮಾನ್ ಖಾನ್ ಅವರಿಂದ ಅನುಭವಿಸಿದ ಯಾತನೆಗಳನ್ನು ಬಿಚ್ಚಿಟ್ಟಿದ್ದಾರೆ. ಸಲ್ಮಾನ್ ಖಾನ್‌ನಿಂದಾಗಿ ತಾನು ಅನುಭವಿಸಿದ ಕೌಟುಂಬಿಕ ಹಿಂಸೆಯ ಬಗ್ಗೆ ಸೋಮಿ ಅಲಿ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಆದರೆ ಈ ಹಿಂದೆ ಹೇಗೋ ಆ ಪೋಸ್ಟ್‌ಗಳನ್ನು ಡಿಲೀಟ್ ಮಾಡಿದ್ದರು. ಆದರೆ ಈಗ ಆ ಪೋಸ್ಟ್‌ಗಳನ್ನು ಡಿಲೀಟ್ ಮಾಡಿದ್ದಕ್ಕೆ ಕಾರಣಗಳನ್ನೂ ನೀಡಿದ್ದಾರೆ.
ಅವರು ತಮ್ಮ ಪೋಸ್ಟ್‌ನಲ್ಲಿ ʻʻಸಲ್ಮಾನ್ ಖಾನ್ ಜತೆ ಕಳೆದ ಎಂಟು ವರ್ಷಗಳು ನನ್ನ ಇಡೀ ಜೀವನದ ಅತ್ಯಂತ ಕೆಟ್ಟ ವರ್ಷಗಳು ಎಂದು ಹೇಳಿಕೊಂಡಿದ್ದಾರೆʼʼ. ʻʻಅವರು ನನ್ನನ್ನು ಕೊಳಕು, ಮೂರ್ಖ ಎಂದು ಕರೆಯುವ ಮೂಲಕ ನಿರಂತರವಾಗಿ ಕೀಳಾಗಿ ನೋಡುತ್ತಿದ್ದರು. ನನ್ನನ್ನು ಸಾರ್ವಜನಿಕವಾಗಿ ತನ್ನ ಗೆಳತಿ ಎಂದು ವರ್ಷಗಳವರೆಗೆ ಒಪ್ಪಿಕೊಳ್ಳಲಿಲ್ಲ. ಸ್ನೇಹಿತರ ಮುಂದೆ ತುಂಬ ಕೀಳಾಗಿ ನೋಡುತ್ತಿದ್ದರು. ನನ್ನನ್ನು ಹೇಗೆ ನಡೆಸಿಕೊಳ್ಳುತ್ತಾರೆ ಎಂದು ಹೇಳಲು ನನಗೆ ಯಾವುದೇ ಸಂಕೋಚವಿಲ್ಲ. ಆತ ಸಿಗರೇಟ್‌ನಿಂದ ಸುಟ್ಟು ಖುಷಿಪಡುತ್ತಿದ್ದ ಬ್ಯಾಡ್ ಬಾಯ್. ಸಲ್ಮಾನ್ ಖಾನ್ ನನ್ನ ಮೇಲೆ ಮದ್ಯವನ್ನು ಸುರಿದಿದ್ದರು. ಮುಂಬೈನಲ್ಲಿದ್ದಾಗ ನನ್ನ ಮೇಲೆ ಸಲ್ಲು ಹಲ್ಲೆ ನಡೆಸಿದ್ದರು. ಅವರ ಹೊಡೆತದಿಂದ ಗಾಯಗಳಾಗಿದ್ದವು. ಆದ ಗಾಯಗಳನ್ನು ಮೇಕಪ್‌ನಿಂದ ಮುಚ್ಚಿಕೊಳ್ಳುತಿದ್ದೆ. ನಾನು ಸ್ಟುಡಿಯೋಗೆ ಹೋದಾಗ ನಿರ್ಮಾಪಕರು ಗಮನಿಸಿ ಅದನ್ನು ಸರಿಪಡಿಸಲು ಮೇಕಪ್ ಕಲಾವಿದ ಅಜಯ್ ಶೆಲಾರ್ಗೆ ಸೂಚಿಸುತ್ತಿದ್ದರುʼʼ ಎಂದಿದ್ದಾರೆ.
ಇದನ್ನೂ ಓದಿ | Salman Khan | ಬರ್ತ್ಡೇ ದಿನ ಮಾಜಿ ಪ್ರಿಯತಮೆಗೆ ಮುತ್ತಿಟ್ಟ ಸಲ್ಮಾನ್ ಖಾನ್; ಯಾರವರು?
ಇತ್ತೀಚಿಗೆ ತಮ್ಮ ‘ಫೈಟ್ ಅಂಡ್ ಫ್ಲೈಟ್’ ವೆಬ್ ಸೀರಿಸ್‌ನ ಬ್ಯಾನ್ ಮಾಡಲು ಸಲ್ಲಾನ್ ಖಾನ್ ಪ್ರಯತ್ನಿಸಿದ್ದಾರೆ. ನಾನು ಪಬ್ಲಿಸಿಟಿ ಗಿಮಿಕ್ ಮಾಡುತ್ತಿಲ್ಲ, ಸತ್ಯ ಜನರಿಗೆ ಗೊತ್ತಾಗಬೇಕು. ಸಲ್ಮಾನ್ ಬಹಿರಂಗವಾಗಿ ಕ್ಷಮೆ ಕೇಳಬೇಕು. ಅವರು ಅಹಂಕಾರಿ, ಸಲ್ಮಾನ್ ಖಾನ್ ಇನ್ನು ಮುಂದೆ ನನ್ನನ್ನು ಭಯಪಡಿಸಲು ಸಾಧ್ಯವಿಲ್ಲʼʼ ಎಂದಿದ್ದಾರೆ.
ಸೋಮಿ ಅಲಿ ನಂತರ, ಸಲ್ಮಾನ್ ಖಾನ್ ಅವರು ಸಂಗೀತಾ ಬಿಜಲಾನಿ, ಕತ್ರಿನಾ ಕೈಫ್ ಮತ್ತು ಐಶ್ವರ್ಯಾ ರೈ ಅವರಂತಹ ನಟಿಯರೊಂದಿಗೆ ಅಫೇರ್ ಹೊಂದಿದ್ದರು ಎನ್ನಲಾಗಿದೆ. ಐಶ್ವರ್ಯ ಅವರು ಕೂಡಾ ಸಲ್ಮಾನ್ ನೀಡುತ್ತಿದ್ದ ಹಿಂಸೆಯಿಂದ ತುಂಬಾ ನೊಂದಿದ್ದರು. ಸಲ್ಮಾನ್ ಖಾನ್ ಪ್ರಸ್ತುತ ಮಾಡೆಲ್ ಯೂಲಿಯಾ ವಂತೂರ್ ಜತೆ ಡೇಟಿಂಗ್ ನಡೆಸುತ್ತಿದ್ದಾರೆ ಎಂಬ ವದಂತಿಗಳಿವೆ.
ಇದನ್ನೂ ಓದಿ | Suniel Shetty | ʻಬಾಲಿವುಡ್ ಬಾಯ್ಕಾಟ್ ಟ್ರೆಂಡ್ʼ ತೆಗೆದು ಹಾಕುವಂತೆ ಸಹಾಯ ಕೋರಿದ ಸುನೀಲ್ ಶೆಟ್ಟಿ