Site icon Vistara News

Salman Khan | ನಟ ಸಲ್ಮಾನ್​ ಖಾನ್​ಗೆ ಡೆಂಗ್ಯೂ; ಬಿಗ್​ಬಾಸ್​, ಸಿನಿಮಾ ಚಿತ್ರೀಕರಣದಿಂದ ದೂರ

Salman Khan receives threat on e-mail, FIR registered by Mumbai Police

ಸಲ್ಮಾನ್‌ ಖಾನ್

ಮುಂಬಯಿ: ಬಾಲಿವುಡ್ ನಟ ಸಲ್ಮಾನ್​ ಖಾನ್​ ಡೆಂಗ್ಯೂ ಜ್ವರದಿಂದ ಬಳಲುತ್ತಿದ್ದು, ಸ್ವಲ್ಪ ದಿನಗಳ ಮಟ್ಟಿಗೆ ಶೂಟಿಂಗ್​ ಸೆಟ್​​ನಿಂದ ಹೊರಗೆ ಉಳಿಯಲಿದ್ದಾರೆ. ವೈದ್ಯರ ಸಲಹೆ ಮೇರೆಗೆ ವಿಶ್ರಾಂತಿ ಪಡೆಯಬೇಕಿರುವ ಕಾರಣ, ಈ ವೀಕೆಂಡ್​​​ನಲ್ಲಿ ಬಿಗ್​ಬಾಸ್​ ನಿರೂಪಣೆಗೂ ಅವರು ಆಗಮಿಸುತ್ತಿಲ್ಲ. ಸಲ್ಮಾನ್​ ಬದಲು ಕರಣ್​ ಜೋಹಾರ್​ ನಿರೂಪಣೆ ಇರಲಿದೆ ಎನ್ನಲಾಗಿದೆ.

ಸಲ್ಮಾನ್​ ಖಾನ್​ ಅವರು ಕಳೆದ ಎರಡು ವಾರಗಳಿಂದ ತಮ್ಮ ಮುಂಬರುವ ಚಿತ್ರ ‘ಕಿಸಿ ಕಾ ಭಾಯ್​, ಕಿಸಿ ಕಾ ಜಾನ್​’ ಶೂಟಿಂಗ್​​ನಲ್ಲಿ ತೊಡಗಿದ್ದರು. ಸದ್ಯ ಆ ಸಿನಿಮಾ ಶೂಟಿಂಗ್​​ಗೂ ಅವರು ಲಭ್ಯ ಇರುವುದಿಲ್ಲ. ಡೆಂಗ್ಯೂದಿಂಚ ಚೇತರಿಸಿಕೊಳ್ಳುತ್ತಿದ್ದು, ಅಕ್ಟೊಬರ್ 25ರಿಂದ ಸಿನಿಮಾ ಚಿತ್ರೀಕರಣಕ್ಕೆ ಅವರು ಆಗಮಿಸಲಿದ್ದಾರೆ ಎಂದು ಹೇಳಲಾಗಿದೆ. ಸದ್ಯ ಚಿತ್ರತಂಡ ಸಲ್ಮಾನ್​ ಖಾನ್​ ಭಾಗವನ್ನು ಹೊರತು ಪಡಿಸಿ, ಉಳಿದ ಭಾಗದ ಚಿತ್ರೀಕರಣ ಮಾಡಿಕೊಳ್ಳುತ್ತಿದೆ. ಸಾಮಾನ್ಯವಾಗಿ ದೀಪಾವಳಿ ಹಬ್ಬದ ನಿಮಿತ್ತ ಅವರ ಸ್ನೇಹಿತ ವಲಯದವರು ಹಮ್ಮಿಕೊಳ್ಳುವ ಎಲ್ಲ ಪಾರ್ಟಿಗಳಿಗೂ ಸಲ್ಮಾನ್ ಖಾನ್ ಹೋಗುತ್ತಿದ್ದರು. ಸದ್ಯ ಡೆಂಗ್ಯೂ ಕಾರಣಕ್ಕೆ ಅವರು ಎಲ್ಲ ಪಾರ್ಟಿಗಳಿಂದಲೂ ದೂರವೇ ಉಳಿದಿದ್ದಾರೆ.

ಸಲ್ಮಾನ್​ಖಾನ್​ಗೆ ಡೆಂಗ್ಯೂ ಜ್ವರ ಎಂದು ಗೊತ್ತಾಗುತ್ತಿದ್ದಂತೆ ಅಭಿಮಾನಿಗಳು ಅವರಿಗೆ ‘ಶೀಘ್ರ ಗುಣಮುಖರಾಗಿ’ ಎಂದು ಹಾರೈಸುತ್ತಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಕಮೆಂಟ್ ಹಾಕುತ್ತಿದ್ದಾರೆ. ಅಂದಹಾಗೇ, ಸಲ್ಮಾನ್​ ಖಾನ್​ ಅವರ ಕಿಸಿ ಕಾ ಭಾಯ್​ ಕಿಸಿ ಕಾ ಜಾನ್​ ಸಿನಿಮಾ ಇದೇ ವರ್ಷ ಡಿಸೆಂಬರ್​​ನಲ್ಲಿ ಬಿಡುಗಡೆಯಾಗಲಿದ್ದು, ಪೂಜಾ ಹೆಗ್ಡೆ, ಶೆಹನಾಜ್​ ಗಿಲ್​ ಇತರರು ಅಭಿನಯಿಸಿದ್ದಾರೆ.

ಇದನ್ನೂ ಓದಿ: Pooja Hegde | ಕೇಕ್‌ ತಿನ್ನಿಸಲು ಹೋದ ಪೂಜಾ ಹೆಗ್ಡೆಗೆ ʻಸೀನಿಯರ್‌ ಫಸ್ಟ್‌ʻ ಅಂದ್ರು ಸಲ್ಮಾನ್‌ ಖಾನ್‌: ವಿಡಿಯೊ ವೈರಲ್‌!

Exit mobile version