ಬೆಂಗಳೂರು: ಪೂಜಾ ಹೆಗ್ಡೆ (pooja hegde) ಒಂದು ದಶಕದ ಹಿಂದೆಯೇ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ಹಿಂದಿ ಮತ್ತು ತೆಲುಗು ಚಲನಚಿತ್ರೋದ್ಯಮದಲ್ಲಿ ಅಗ್ರ ತಾರೆಗಳೊಂದಿಗೆ ಕೆಲಸ ಮಾಡಿದ್ದಾರೆ. ಇದೀಗ ಸಲ್ಮಾನ್ ಖಾನ್ (Salman Khan) ಅವರ ಜತೆ ಕಿಸಿ ಕಾ ಭಾಯ್ ಕಿಸಿ ಕಿ ಜಾನ್ (KKBKKJ) ಸಿನಿಮಾದಲ್ಲಿ ತೆರೆ ಹಂಚಿಕೊಳ್ಳುತ್ತಿದ್ದಾರೆ. ಮಹೇಶ್ ಬಾಬು ಅವರ ಜತೆ SSMB28 ಸಹ ಹೊಂದಿದ್ದಾರೆ. ಸಂದರ್ಶನವೊಂದರಲ್ಲಿ ನಟಿ ಸಲ್ಮಾನ್ ಖಾನ್ ಜತೆ ಕೆಲಸ ಮಾಡಿರುವ ಅನುಭವವನ್ನು ಹಂಚಿಕೊಂಡಿದ್ದಾರೆ.
ನಟಿ ಮಾತನಾಡಿ ʻʻಈ ಚಿತ್ರದಲ್ಲಿ ಕೆಲಸ ಮಾಡುವಾಗ ನಾನು ತುಂಬಾ ಖುಷಿಪಟ್ಟಿದ್ದೇನೆ. 2023ನನಗೆ ಉತ್ತಮ ಆರಂಭವನ್ನು ನೀಡಿದೆ. ಸಲ್ಮಾನ್ ಖಾನ್‌ರಿಂದ ಜೀವನದ ಪಾಠ ಕಲಿತೆ. ಸಲ್ಮಾನ್ ಖಾನ್ ಅವರ ಕುರಿತು ಹೇಳುವುದೇನೆಂದರೆ ಅವರು ತನ್ನ ತನ್ನ ಮನಸ್ಸಿನಲ್ಲಿರುವುದನ್ನು ನೇರವಾಗಿ ಹೇಳುತ್ತಾರೆ. ಅವರು ತುಂಬಾ ನೈಜ ಯೋಚಿಸಿದ್ದನ್ನು ಅವರು ನೇರವಾಗಿ ಹೇಳುತ್ತಾರೆ. ಒಬ್ಬ ನಟನಾಗಿ, ನೀವು ಸ್ವಯಂಪ್ರೇರಿತರಾಗಿರಬೇಕೆಂದು ಅವರು ಬಯಸುತ್ತಾರೆ. ನೀವು ಎಷ್ಟೇ ತಯಾರಿಯಲ್ಲಿದ್ದರೂ ನೀವು ನಿಮ್ಮ ಕಾಲಿನ ಮೇಲೆ ನಿಂತು ಯೋಚಿಸಲು ಕಲಿಯಬೇಕು. ಇದು ಉತ್ತಮ ಕಲಿಕೆಯ ಅನುಭವ” ಎಂದು ಪೂಜಾ ಬಹಿರಂಗಪಡಿಸಿದರು.
ನಟಿ ಮಾತು ಮಂದುವರಿಸಿ ʻ ಸಲ್ಮಾನ್ ಖಾನ್ ತಮ್ಮ ಜೀವನವನ್ನು ನಡೆಸುವ ರೀತಿಯಲ್ಲಿ ಸರಳವಾಗಿದ್ದಾರೆ ಎಂದು ನಾನು ಭಾವಿಸುತ್ತೇನೆ. ಬೀಯಿಂಗ್ ಹ್ಯೂಮನ್ ಟಿ-ಶರ್ಟ್‌ಗಳನ್ನು ಧರಿಸುತ್ತಾರೆ. ತಾನು ದೊಡ್ಡ ಸ್ಟಾರ್ ಎಂದು ಅವರು ತೊರಿಸಿಕೊಳ್ಳುವುದಿಲ್ಲ. ನೈಜವಾಗಿ ಉಳಿಯಲು ಇದು ಅತ್ಯಗತ್ಯ,” ಎಂದು ಪೂಜಾ ಹೇಳಿದರು.
ಇದನ್ನೂ ಓದಿ: Salman Khan: ʻಕಿಸಿ ಕಾ ಭಾಯ್ ಕಿಸಿ ಕಿ ಜಾನ್ʼ ಸಿನಿಮಾದ ನೈಯೋ ಲಗ್ಡಾ ಸಾಂಗ್ ಟೀಸರ್ ಔಟ್
ಏಪ್ರಿಲ್ 21ರಂದು ʻಕಿಸಿ ಕಾ ಭಾಯ್ ಕಿಸಿ ಕಿ ಜಾನ್ʼ ಸಿನಿಮಾ ತೆರೆಗೆ
ಈ ಸಿನಿಮಾ ಕೂಡ ತಮಿಳಿನ ‘ವೀರಂ’ ಸಿನಿಮಾದ ರಿಮೇಕ್. ಬಾಲಿವುಡ್‌ಗೆ ನೇಟಿವಿಟಿಗೆ ತಕ್ಕಂತೆ ಒಂದಷ್ಟು ಬದಲಾವಣೆ ಮಾಡಿಕೊಂಡು ಸಲ್ಮಾನ್ ಈ ಸಿನಿಮಾವನ್ನು ಮಾಡುತ್ತಿದ್ದಾರೆ. ವಿಶೇಷವೆಂದರೆ, ದಕ್ಷಿಣ ಭಾರತದ ವಿಕ್ಟರಿ ವೆಂಕಟೇಶ್, ಜಗಪತಿ ಬಾಬು ಈ ಸಿನಿಮಾದಲ್ಲಿ ಬಣ್ಣ ಹಚ್ಚಿದ್ದಾರೆ.
ಸಲ್ಮಾನ್ ಖಾನ್ ಫಿಲ್ಮ್ಸ್ ಪ್ರೊಡಕ್ಷನ್, ಸ ಕಿಸಿ ಕಾ ಭಾಯ್ ಕಿಸಿ ಕಿ ಜಾನ್ ಸಿನಿಮಾವನ್ನು ಫರ್ಹಾದ್ ಸಾಮ್ಜಿ ನಿರ್ದೇಶಿಸಿದ್ದಾರೆ. ಚಿತ್ರದಲ್ಲಿ ಸಲ್ಮಾನ್ ಖಾನ್, ವೆಂಕಟೇಶ್ ದಗ್ಗುಬಾಟಿ, ಪೂಜಾ ಹೆಗ್ಡೆ, ಜಗಪತಿ ಬಾಬು, ಭೂಮಿಕಾ ಚಾವ್ಲಾ, ವಿಜೇಂದರ್ ಸಿಂಗ್, ಅಭಿಮನ್ಯು ಸಿಂಗ್, ರಾಘವ್ ಜುಯಲ್, ಸಿದ್ಧಾರ್ಥ್ ನಿಗಮ್, ಜಸ್ಸಿ ಗಿಲ್, ಶೆಹನಾಜ್ ಗಿಲ್, ಪಾಲಕ್ ತಿವಾರಿ ಮತ್ತು ವಿನಾಲಿ ಭಟ್ನಾಗರ್ ಚಿತ್ರದಲ್ಲಿ ಬಣ್ಣ ಹಚ್ಚಿದ್ದಾರೆ.