Site icon Vistara News

Somy Ali | ಸಲ್ಮಾನ್‌ ಖಾನ್‌ ವಿಕೃತ ಲೈಂಗಿಕಾಸಕ್ತ, ಪರೋಕ್ಷವಾಗಿ ಕುಟುಕಿದ ಮಾಜಿ ಪ್ರೇಯಸಿ

somy ali

ಮುಂಬಯಿ : ಬಾಲಿವುಡ್‌ ಸ್ಟಾರ್‌ ಸಲ್ಮಾನ್‌ ಖಾನ್‌ ಕುರಿತು ಅವರ ಮಾಜಿ ಪ್ರೇಯಸಿ ಸೋಮಿ ಅಲಿ (Somy Ali) ಪರೋಕ್ಷವಾಗಿ ಗಂಭೀರ ಆರೋಪವೊಂದನ್ನು ಮಾಡಿದ್ದಾರೆ. ಎಲ್ಲರೂ ಆರಾಧಿಸುವ ಈ ವ್ಯಕ್ತಿ ವಿಕೃತ ಲೈಂಗಿಕತೆಯನ್ನು ಬಯಸುವವರು ಹಾಗೂ ಮಹಿಳೆಗೆ ಹೊಡೆಯುವವರು ಎಂದು ಟೀಕೆ ಮಾಡಿದ್ದಾರೆ. ಆದರೆ, ನಟಿ ಎಲ್ಲಿಯೂ ಸಲ್ಮಾನ್‌ ಖಾನ್‌ ಅವರ ಹೆಸರನ್ನು ಉಲ್ಲೇಖಿಸಿಲ್ಲ. ಆದರೆ, ಸಲ್ಮಾನ್‌ ಅವರ ಸೂಪರ್‌ ಹಿಟ್‌ ಚಿತ್ರ ಮೈನೆ ಪ್ಯಾರ್‌ ಕಿಯಾದ ಪೋಸ್ಟರ್‌ ಹಾಕಿ ಮೇಲಿನಂತೆ ಕಮೆಂಟ್‌ ಮಾಡಿದ್ದಾರೆ.

ಸಲ್ಮಾನ್‌ ಖಾನ್‌ ಅವರ ಹಲವಾರು ಪ್ರೇಯಸಿಗಳ ಪೈಕಿ ಸೋಮಿ ಕೂಡ ಒಬ್ಬರು. ಆರಂಭದಲ್ಲಿ ಸಲ್ಮಾನ್‌ ಅಭಿಮಾನಿಯಾಗಿದ್ದ ಸೋಮಿ, ಬಳಿಕ ಸಿನಿಮಾವೊಂದರಲ್ಲಿ ತೆರೆ ಹಂಚಿಕೊಂಡಿದ್ದರು. ಬಳಿಕ ಅವರಿಬ್ಬರು ಡೇಟಿಂಗ್ ಮಾಡಿ ಬೇರ್ಪಟ್ಟಿದ್ದರು. ಇದೀಗ ಹಲವು ವರ್ಷಗಳ ಬಳಿಕ ಸೋಮಿ ಸಲ್ಮಾನ್‌ ಅವರನ್ನು ಟೀಕೆಗೆ ಗುರಿಪಡಿಸಿದ್ದಾರೆ.

ಮೈನೆ ಪ್ಯಾರ್‌ ಕಿಯಾ ಪೋಸ್ಟರ್‌ನ ಕೆಳಗಡೆ “ಮಹಿಳೆಯರಿಗೆ ಹೊಡೆಯುವ ವ್ಯಕ್ತಿ, ನನಗೊಬ್ಬಳಿಗೆ ಅಲ್ಲ. ಹಲವರಿಗೆ. ದಯವಿಟ್ಟು ಇಂಥವರನ್ನು ಆರಾಧಿಸುವುದನ್ನು ಬಿಟ್ಟುಬಿಡಿ. ಅವರು ವಿಕೃತ ಲೈಂಗಿಕತೆಯ ಆಸಕ್ತರು. ನಿಮಗೆ ಯಾರಿಗೂ ಅರಿವಿಲ್ಲ,” ಎಂದು ಸೋಮಿ ಇನ್‌ಸ್ಟಾಗ್ರಾಮ್‌ನಲ್ಲಿ ಬರೆದುಕೊಂಡಿದ್ದಾರೆ. ಆದರೆ, ಸೋಮಿಯ ಹೇಳಿಕೆ ಬಹಿರಂಗೊಂಡ ಸ್ವಲ್ಪ ಹೊತ್ತಿನಲ್ಲಿ ಅವರು ಅದನ್ನು ಡಿಲೀಟ್‌ ಮಾಡಿದ್ದು, ಅದೀಗ ಲಭ್ಯವಿಲ್ಲ. ಆದರೆ, ಲಕ್ಷಾಂತರ ಮಂದಿ ಅದರ ಸ್ಕ್ರಿನ್‌ ಶಾಟ್‌ ತೆಗೆದಿಟ್ಟುಕೊಂಡಿದ್ದಾರೆ.

ಪಾಕಿಸ್ತಾನ ಮೂಲದ ಅಮೆರಿಕ ನಿವಾಸಿಯಾಗಿರುವ ಸೋಮಿ ಅಲಿ, ಅಭಿಮಾನಿಯಾಗಿ ಪರಿಚಯಗೊಂಡು ಬಳಿಕ ಅವರ ಜತೆಯೇ ಸಿನಿಮಾ ಮಾಡಿದ್ದರು. ಅಲ್ಲಿಂದ ಅವರ ರೊಮ್ಯಾಂಟಿಕ್‌ ಡೇಟಿಂಗ್‌ನಲ್ಲಿ ಆರಂಭಗೊಂಡಿತ್ತು. ಅವರ ನಡುವೆ ಬ್ರೇಕಪ್‌ ಅದ ಬಳಿಕ ಸೋಮಿ ಅಮೆರಿಕಕ್ಕೆ ವಾಪಸಾಗಿದ್ದರು. ಇವೆಲ್ಲವೂ ೯೦ರ ದಶಕದಲ್ಲಿ ನಡೆದ ಘಟನೆಗಳಾಗಿವೆ.

ಮೋಸಗಾರ ಎಂದು ಟೀಕೆ

ಈ ಹಿಂದೆ ಜರ್ನಲ್‌ ಒಂದಕ್ಕೆ ಸಂದರ್ಶನ ನೀಡಿದ್ದ ಸೋಮಿ ಅಲಿ, ಸಲ್ಮಾನ್‌ ಬಗ್ಗೆ ಟೀಕೆಗಳನ್ನು ಮಾಡಿದ್ದರು. ರಿಲೇಷನ್‌ಶಿಪ್‌ನಲ್ಲಿದ್ದ ನಾನು ಅವರನ್ನು ಮದುವೆಯಾಗುವಂತೆ ಕೋರಿಕೊಂಡಿದ್ದೆ. ಆದರೆ ಅವರು ನನಗೆ ಗರ್ಲ್‌ ಫ್ರೆಂಡ್ ಇದ್ದಾರೆ ಎಂದರು. ಅದಕ್ಕೂ ನಾನು ಒಪ್ಪಿದರೂ ನನಗೆ ಮೋಸ ಮಾಡಿದರು ಎಂದು ಹೇಳಿಕೆ ನೀಡಿದ್ದರು.

ಮತ್ತೊಂದು ಸಂದರ್ಶನದಲ್ಲಿ ಸಲ್ಮಾನ್ ಅವರ ಕುಟುಂಬವನ್ನು ಹೊಗಳಿದ್ದರು. ಅವರ ಮನೆ ಎಲ್ಲರಿಗೂ ಮುಕ್ತವಾಗಿದ್ದ ಜಾಗ. ಅಲ್ಲಿ ಯಾರಿಗೂ ತಾರತಮ್ಯ ಮಾಡುತ್ತಿರಲಿಲ್ಲ ಎಂದು ಹೇಳಿದ್ದರು.

ಇದನ್ನೂ ಓದಿ | ಸಲ್ಮಾನ್‌ ಖಾನ್‌ಗೆ ಸಿಕ್ತು ಬಂದೂಕು ಲೈಸೆನ್ಸ್‌; ಬುಲೆಟ್‌ ಪ್ರೂಫ್‌ ಕಾರು ಕೂಡ ಖರೀದಿಸಿದ ಬಾಲಿವುಡ್‌ ನಟ

Exit mobile version