Site icon Vistara News

Tiger 3: ಕುವೈತ್, ಕತಾರ್‌ನಲ್ಲಿ ಟೈಗರ್‌ 3 ಬ್ಯಾನ್‌ ! ಏನು ಕಾರಣ?

Salman Khan's Tiger 3 banned

ಬೆಂಗಳೂರು: ನವೆಂಬರ್‌ 12ರಂದು ಟೈಗರ್‌ 3 (Tiger 3) ವಿಶ್ವಾದ್ಯಂತ ರಿಲೀಸ್‌ ಆಗಿದೆ. ಸಲ್ಮಾನ್‌ ಖಾನ್ ಅವರ ಅಭಿನಯವನ್ನು ಆರಂಭಿಕ ವಿಮರ್ಶೆಗಳಲ್ಲಿ ವಿಮರ್ಶಕರು ಶ್ಲಾಘಿಸಿದ್ದಾರೆ. ಆದರೆ ಕುವೈತ್ ಮತ್ತು ಕತಾರ್ ರಾಷ್ಟ್ರಗಳಲ್ಲಿ ಸಿನಿಮಾ ನಿಷೇಧಿಸಲಾಗಿದೆ ಎಂದು ವರದಿಯಾಗಿದೆ. ಮುಸ್ಲಿಂ ಪಾತ್ರಗಳ ನೆಗೆಟಿವ್‌ ಚಿತ್ರಣದಿಂದಾಗಿ ಚಿತ್ರದ ನಿಷೇಧದ ಹಿಂದೆ ಪ್ರಮುಖ ಅಂಶವಾಗಿರಬಹುದು ಎಂದು ವರದಿಯಾಗಿದೆ. ಇತರ ವರದಿಗಳ ಪ್ರಕಾರ ಕಥೆಯಲ್ಲಿ ಭಾರತ-ಪಾಕಿಸ್ತಾನದ ನಿರೂಪಣೆಯು ನಿಷೇಧದ ಹಿಂದಿನ ಕಾರಣವಾಗಿರಬಹುದು ಎಂತಲೂ ವರದಿಯಾಗಿದೆ.

2012ರಲ್ಲಿ ಬಿಡುಗಡೆಯಾದ “ಏಕ್ ಥಾ ಟೈಗರ್” ಮತ್ತು 2017ರಲ್ಲಿ ಬಿಡುಗಡೆಯಾದ “ಟೈಗರ್ ಜಿಂದಾ ಹೈ” ನಂತರ “ಟೈಗರ್ 3” ಫ್ರ್ಯಾಂಚೈಸ್‌ನಲ್ಲಿ ಮೂರನೇ ಕಂತಾಗಿದೆ. ಎರಡೂ ಚಲನಚಿತ್ರಗಳು ಗಲ್ಲಾಪೆಟ್ಟಿಗೆಯಲ್ಲಿ ಬ್ಲಾಕ್‌ಬಸ್ಟರ್ ಆಗಿದ್ದವು. ಇದರಲ್ಲಿ ಅಶುತೋಷ್ ರಾಣಾ ಮತ್ತು ರೇವತಿ ಪೋಷಕ ಪಾತ್ರಗಳಲ್ಲಿದ್ದಾರೆ.

ಸಲ್ಮಾನ್ ಖಾನ್ ಮತ್ತು ಕತ್ರಿನಾ ಕೈಫ್ ಅವರ ಚಿತ್ರ ಟೈಗರ್ 3 (Tiger 3 box office collection) ಮೊದಲ ದಿನ ಒಳೆಯ ಕಲೆಕ್ಷನ್‌ ಮಾಡಿದೆ. ಮನೀಶ್ ಶರ್ಮಾ ಅವರು ನಿರ್ದೇಶಿಸಿದ ಸ್ಪೈ-ಥ್ರಿಲ್ಲರ್ ಸಿನಿಮಾ ನ. 12ರಂದು ರಿಲೀಸ್‌ ಆಗಿದ್ದು, ವರದಿಯ ಪ್ರಕಾರ ಭಾರತದಲ್ಲಿ 44.5 ಕೋಟಿ ರೂ. ಗಳಿಕೆ ಕಂಡಿದೆ. ಸಲ್ಮಾನ್ ಮತ್ತು ಕತ್ರಿನಾ ಜತೆಗೆ, ಚಿತ್ರದಲ್ಲಿ ಇಮ್ರಾನ್ ಹಶ್ಮಿ ಕೂಡ ಪ್ರಮುಖ ಪ್ರತಿಸ್ಪರ್ಧಿಯಾಗಿದ್ದಾರೆ.

ಈ ಚಿತ್ರವು 2019ರಲ್ಲಿ ಅಲಿ ಅಬ್ಬಾಸ್ ಜಾಫರ್ ಅವರ ಭಾರತ್ (42.30 ಕೋಟಿ ರೂ.) ಮತ್ತು 2015 ರಲ್ಲಿ ಸೂರಜ್ ಬರ್ಜಾತ್ಯಾ ಅವರ ಪ್ರೇಮ್ ರತನ್ ಧನ್ ಪಾಯೋ (40.35 ಕೋಟಿ ರೂ.) ಸಿನಿಮಾಗಳ ದಾಖಲೆಯನ್ನು ಉಡೀಸ್‌ ಮಾಡಿದೆ. ಚಿತ್ರವು ಭಾನುವಾರ ಬಿಡುಗಡೆಯಾದಾಗ ಒಟ್ಟಾರೆ 41.33 ಪ್ರತಿಶತದಷ್ಟು ಹಿಂದಿ ಆಕ್ಯುಪೆನ್ಸಿಯನ್ನು ಹೊಂದಿತ್ತು.

ಇದನ್ನೂ ಓದಿ: Tiger 3 box office collection: ಸಲ್ಮಾನ್ ಖಾನ್ -ಕತ್ರಿನಾ ಚಿತ್ರ ಟೈಗರ್ 3 ಮೊದಲ ದಿನದ ಕಲೆಕ್ಷನ್‌ ಎಷ್ಟು?

ಈ ವರ್ಷದ ಎರಡನೇ ದಿನದ ಅತ್ಯಧಿಕ ಪ್ರಿ ಬುಕ್ಕಿಂಗ್‌ನಲ್ಲಿ 32.10 ಕೋಟಿ ರೂ.ನೊಂದಿಗೆ ಶಾರುಖ್ ಖಾನ್ ಅವರ ಪಠಾಣ್‌ಗೆ ದಾಖಲೆ ಉಳಿದಿದೆ, 21.62 ಕೋಟಿ ರೂ.ಯೊಂದಿಗೆ ಜವಾನ್ ನಂತರದ ಸ್ಥಾನದಲ್ಲಿದೆ. ಟೈಗರ್ 3 ಪ್ರಿ ಬುಕ್ಕಿಂಗ್‌ನಲ್ಲಿನಲ್ಲಿ 17.48 ಕೋಟಿ ರೂ. ಗಳಿಸುವ ಮೂಲಕ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ.

ಮನೀಶ್ ಶರ್ಮಾ ನಿರ್ದೇಶನದ ಈ ಆಕ್ಷನ್ ಥ್ರಿಲ್ಲರ್ ಸಿನಿಮಾ ಬಗ್ಗೆ ನೋಡುಗರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಟೈಗರ್ 3ನಲ್ಲಿ ಶಾರುಖ್ ಖಾನ್ ಅವರು ವಿಶೇಷ ಅತಿಥಿ ಪಾತ್ರವನ್ನು ಸಹ ಹೊಂದಿದ್ದಾರೆ.3 ನಿಮಿಷದ ಟ್ರೈಲರ್‌ನಲ್ಲಿ ಆ್ಯಕ್ಷನ್ ಪ್ಯಾಕ್ಡ್‌ ಸೀಕ್ವೆನ್ಸ್ ಹೊಂದಿತ್ತು ಟ್ರೈಲರ್‌ನಲ್ಲಿ ಸಲ್ಮಾನ್ ದೇಶವನ್ನು ಉಳಿಸುವತ್ತ ಹೋರಾಟ ಮತ್ತು ಕುಟುಂಬವನ್ನು ರಕ್ಷಿಸಲು ಪ್ರಯತ್ನಿಸುತ್ತಿರುವ ಕತ್ರಿನಾ ಕೈಫ್ ಬಗ್ಗೆ ಇರುವಂತಿದೆ. ಸಲ್ಮಾನ್‌ ಖಾನ್‌ (Salman Khan ) ಅವರು ಯಶ್‌ರಾಜ್‌ಫಿಲ್ಮ್ಸ್‌ ಸ್ಪೈ ಯುನಿವರ್ಸ್‌ನಲ್ಲಿ ಏಜೆಂಟ್‌ ಟೈಗರ್‌ ಆಗಿ ಮರಳಿದ್ದಾರೆ.

ಅಮೆಜಾನ್ ಪ್ರೈಮ್ ಟೈಗರ್ 3 ಒಟಿಟಿ ಹಕ್ಕುಗಳನ್ನು ಬರೋಬ್ಬರಿ 200 ಕೋಟಿ ರೂ.ಗೆ ಪಡೆದುಕೊಂಡಿದೆ.ವರದಿಯ ಪ್ರಕಾರ, ಅಮೆಜಾನ್ ಪ್ರೈಮ್ ವಿಡಿಯೊ ಟೈಗರ್ 3 ಡಿಜಿಟಲ್ ಹಕ್ಕುಗಳನ್ನು ಪಡೆದುಕೊಂಡಿದೆ. ಶಾರುಖ್ ಖಾನ್ ಅವರ ಜವಾನ್ ಸಿನಿಮಾವನ್ನು ನೆಟ್‌ಫ್ಲಿಕ್ಸ್ ಸ್ವಾಧೀನಪಡಿಸಿಕೊಂಡಂತೆಯೇ ಇದೂ ಒಪ್ಪಂದವನ್ನು ಮಾಡಿದೆ.

Exit mobile version