Site icon Vistara News

Sam Bahadur Box Office: ʻಅನಿಮಲ್‌ʼ ಭರ್ಜರಿ ಓಪನಿಂಗ್‌; ವಿಕ್ಕಿ ಕೌಶಲ್ ಸಿನಿಮಾದ ವೇಗಕ್ಕೆ ಬ್ರೇಕ್‌

Sam Bahadur box office tough competition from Animal

ಬೆಂಗಳೂರು: ವಿಕ್ಕಿ ಕೌಶಲ್ ಅವರ ‘ಸ್ಯಾಮ್ ಬಹದ್ದೂರ್’ ಡಿಸೆಂಬರ್ 1ರಂದು (Sam Bahadur Box Office) ಬಿಡುಗಡೆಯಾಗಿದೆ. ಮೇಘನಾ ಗುಲ್ಜಾರ್ ನಿರ್ದೇಶನದ ಚಿತ್ರ, ರಣಬೀರ್ ಕಪೂರ್ ಅವರ ‘ಅನಿಮಲ್‌ ಸಿನಿಮಾ ಜತೆ ಕ್ಲಾಶ್‌ ಆಗಿದೆ. ‘ವಿಕ್ಕಿ ಹೊರತುಪಡಿಸಿ, ಚಿತ್ರದಲ್ಲಿ ಸನ್ಯಾ ಮಲ್ಹೋತ್ರಾ ಮತ್ತು ಫಾತಿಮಾ ಸನಾ ಶೇಖ್ ಪ್ರಮುಖ ಪಾತ್ರಗಳಲ್ಲಿದ್ದಾರೆ. ಅನಿಮಲ್‌ ಸಿನಿಮಾ ಬಾಕ್ಸ್‌ ಆಫೀಸ್‌ನಲ್ಲಿ ಭಾರಿ ಓಪನಿಂಗ್ ಕಂಡರೆ, ‘ಸ್ಯಾಮ್ ಬಹದ್ದೂರ್’ ಕಲೆಕ್ಷನ್‌ನಲ್ಲಿ ಭಾರಿ ಸೋಲುಂಡಿದೆ. ಆರಂಭಿಕ ಅಂದಾಜಿನ ಪ್ರಕಾರ, ಚಿತ್ರವು ತನ್ನ ಮೊದಲ ದಿನದಂದು 5.50 ಕೋಟಿ ರೂ. ಗಳಿಸಿದೆ ಎಂದು ವರದಿಯಾಗಿದೆ.

ದೇಶದ ಮೊದಲ ಫೀಲ್ಡ್‌ ಮಾರ್ಷಲ್‌ ಕಥೆ ಇದು. ಈ ಸಿನಿಮಾ 1971ರ ಭಾರತ ಮತ್ತು ಪಾಕಿಸ್ತಾನ ಯುದ್ಧದ ಸಮಯದಲ್ಲಿ ಭಾರತೀಯ ಸೇನೆಯ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ ಸ್ಯಾಮ್‌ ಮಾಣೆಕ್‌ ಶಾ ಅವರ ನಿಜಜೀವನದ ಘಟನೆಗಳನ್ನು ಆಧರಿಸಿದೆ. ವಿಕ್ಕಿ ಕೌಶಲ್ ಅಭಿನಯದ ಸ್ಯಾಮ್ ಬಹದ್ದೂರ್ ದೇಶದ ಮೊದಲ ಫೀಲ್ಡ್‌ ಮಾರ್ಷಲ್‌ ಕಥೆ ಇದು. ಈ ಸಿನಿಮಾ 1971ರ ಭಾರತ ಮತ್ತು ಪಾಕಿಸ್ತಾನ ಯುದ್ಧದ ಸಮಯದಲ್ಲಿ ಭಾರತೀಯ ಸೇನೆಯ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ ಸ್ಯಾಮ್‌ ಮಾಣೆಕ್‌ ಶಾ ಅವರ ನಿಜಜೀವನದ ಘಟನೆಗಳನ್ನು ಆಧರಿಸಿದೆ. ಸ್ಯಾಮ್‌ ಮಾಣೆಕ್‌ ಶಾ ಅವರು ಫೀಲ್ಡ್‌ ಮಾರ್ಷಲ್‌ ಹುದ್ದೆಗೇರಿದ ಮೊದಲ ಭಾರತೀಯ ಸೇನಾ ಅಧಿಕಾರಿ. ಎರಡನೇ ವಿಶ್ವ ಯುದ್ಧದ ಸಮಯದಲ್ಲಿ ತಮ್ಮ ಮಿಲಿಟರಿ ವೃತ್ತಿಜೀವನವನ್ನು ಪ್ರಾರಂಭಿಸಿ, ನಾಲ್ಕು ದಶಕಗಳ ಕಾಲ. ಸೇನೆಯಲ್ಲಿ ಸೇವೆ ಸಲ್ಲಿಸಿದ್ದರು. ಐದು ಯುದ್ಧಗಳಲ್ಲಿ ಕರ್ತವ್ಯ ನಿರ್ವಹಿಸಿದ್ದಾರೆ.

ಇದನ್ನೂ ಓದಿ: Sam Bahadur: ವಿಕ್ಕಿ ಕೌಶಲ್ ʻಸ್ಯಾಮ್ ಬಹದ್ದೂರ್ʼ ಫಸ್ಟ್‌ ರಿವ್ಯೂ ಔಟ್‌!

ರಣಬೀರ್ ಕಪೂರ್ ಅವರ ‘ಅನಿಮಲ್‌’ ಸಿನಿಮಾ ಜತೆಗೆ ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ಕಾರಣ ಈ ಚಿತ್ರದ ಕಲೆಕ್ಷನ್‌ನಲ್ಲಿ ಭಾರಿ ಹೊಡೆತವಾಗಿದೆ. ವಾರಾಂತ್ಯದಲ್ಲಿ ಚಿತ್ರ ಗಲ್ಲಾಪೆಟ್ಟಿಗೆಯಲ್ಲಿ ಉತ್ತಮ ಪ್ರದರ್ಶನ ನೀಡುವ ನಿರೀಕ್ಷೆಯಿದೆ.

ಅನಿಮಲ್‌ ಸಿನಿಮಾ ಆರಂಭಿಕ ಅಂದಾಜಿನ ಪ್ರಕಾರ ಭಾರತದಲ್ಲಿ ಒಟ್ಟೂ ಎಲ್ಲಾ ಭಾಷೆಗಳಲ್ಲಿ 61 ಕೋಟಿ ರೂಪಾಯಿ ಗಳಿಸಿದೆ. ಹಿಂದಿ ಬೆಲ್ಟ್‌ಗಳಲ್ಲಿ 50.50 ಕೋಟಿ ರೂ. ಕಲೆಕ್ಷನ್ ಮಾಡಿದ್ದರೆ, ಚಿತ್ರದ ತೆಲುಗು ಆವೃತ್ತಿಯೂ 10 ಕೋಟಿ ರೂ. ಗಳಿಸಿದೆ. ಇದರೊಂದಿಗೆ ಅನಿಮಲ್ ಸಿನಿಮಾ ಮೂಲಕ ರಣಬೀರ್ ಕಪೂರ್ ಮತ್ತೊಮ್ಮೆ ದೊಡ್ಡ ಓಪನರ್ ಆಗಿ ಹೊರಹೊಮ್ಮಿದ್ದಾರೆ.

Exit mobile version