Site icon Vistara News

Samantha: ಡಬ್ಬೂ ರತ್ನಾನಿ ಫೋಟೊಶೂಟ್‌ನಲ್ಲಿ ಮಿಂಚಿದ ಸಮಂತಾ

Samantha BTS video from Dabboo Ratnani's photoshoot

ಬೆಂಗಳೂರು: ಸಮಂತಾ ರುತ್ ಪ್ರಭು (Samantha) ಯುವ ಪೀಳಿಗೆಗೆ ಸ್ಫೂರ್ತಿಯಾಗಿದ್ದಾರೆ. ನಟಿ ಪ್ರಸ್ತುತ ಮೈಯೋಸಿಟಿಸ್‌ನಿಂದ ಚೇತರಿಸಿಕೊಂಡಿದ್ದಾರೆ. ಮತ್ತೆ ಕೆಲಸಕ್ಕೆ ಉತ್ಸಾಹದಿಂದ ಮರಳಿದ್ದಾರೆ. ಫೆಬ್ರವರಿ 1 ರಂದು, ಬಾಲಿವುಡ್ ನಟ ವರುಣ್ ಧವನ್ ಜತೆ ನಟಿ ಸಮಂತಾ ಸಿಟಾಡೆಲ್ ಸೀರಿಸ್ ಮಾಡುವ ಕುರಿತು ಖಚಿತಪಡಿಸಿದ್ದಾರೆ. ಇದರ ಬೆನ್ನಲ್ಲೇ ಸೆಲೆಬ್ರಿಟಿ ಫೋಟೊಗ್ರಾಫರ್ ಡಬ್ಬೂ ರತ್ನಾನಿ ಅವರು ಸಮಂತಾ ಅವರ ಫೋಟೊಶೂಟ್‌ ಮಾಡಿರುವ ಫೋಟೊಗಳನ್ನು ಶೇರ್‌ ಮಾಡಿಕೊಂಡಿದ್ದಾರೆ. ಫೋಟೊಶೂಟ್‌ ಒಳಗೊಂಡ ವಿಡಿಯೊವನ್ನು ಇನ್‌ಸ್ಟಾದಲ್ಲಿ ಹಂಚಿಕೊಂಡಿದ್ದಾರೆ.

ಸಮಂತಾ ಟ್ರ್ಯಾಂಪೊಲೈನ್ ಮೇಲೆ ಜಿಗಿದು ವಿವಿಧ ಭಂಗಿಯ ಪೋಸ್‌ಗಳನ್ನು ನೀಡಿದ್ದಾರೆ. ರಾಜ್ ಮತ್ತು ಡಿಕೆ ನಿರ್ದೇಶನದ ಸಿಟಾಡೆಲ್‌ ಸಿರೀಸ್‌ನಲ್ಲಿ ಅವರು ವರುಣ್ ಧವನ್ ಜತೆ ತೆರೆ ಹಂಚಿಕೊಳ್ಳಲಿದ್ದಾರೆ. ಫೆಬ್ರವರಿ 1ರಂದು, ಛಾಯಾಗ್ರಾಹಕ ದಬ್ಬೂ ರತ್ನಾನಿ ಅವರು ಸಮಂತಾ ಅವರನ್ನು ಒಳಗೊಂಡ ಥ್ರೋಬ್ಯಾಕ್ ವೀಡಿಯೊವನ್ನು ಇನ್‌ಸ್ಟಾದಲ್ಲಿ ಶೇರ್‌ ಮಾಡಿದ್ದಾರೆ. ಹಳದಿ ಬಣ್ಣದ ಗೌನ್ ಧರಿಸಿ ಸಮಂತಾ ಮಿಂಚಿದ್ದಾರೆ.

ಇದನ್ನೂ ಓದಿ: Citadel: ರುಸ್ಸೋ ಬ್ರದರ್ಸ್ ಶೋ ಭಾರತೀಯ ಅವತರಣಿಕೆಯಲ್ಲಿ ವರುಣ್‌ ಧವನ್‌ ಜತೆ ಸಮಂತಾ

ಇದನ್ನೂ ಓದಿ: Samantha: `ಪಠಾಣ್‌’ ಎಫೆಕ್ಟ್‌ನಿಂದ ಬಿಡುಗಡೆ ಮುಂದೂಡಿದ ಸಮಂತಾ ಅಭಿನಯದ ಶಾಕುಂತಲಂ?

ಸಮಂತಾ ತಮ್ಮ ಮುಂಬರುವ ಚಿತ್ರ ಶಾಕುಂತಲಂ ಬಿಡುಗಡೆಗಾಗಿ ಕಾಯುತ್ತಿದ್ದಾರೆ. ಫೆಬ್ರವರಿ 17ರಂದು ಬಿಡುಗಡೆಯಾಗಬೇಕಿದ್ದ ಚಿತ್ರ ಈಗ ಮುಂದೂಡಲ್ಪಟ್ಟಿದೆ. ಸಮಂತಾ ರುತ್ ಪ್ರಭು ಈಗಾಗಲೇ ಹಲವು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಸಮಂತಾ ಹಾಗೂ ವಿಜಯ್‌ ದೇವರಕೊಂಡ ಅಭಿನಯದ ʻಖುಷಿʼ ಚಿತ್ರ ತೆರೆಗೆ ಬರಲು ಸಜ್ಜಾಗುತ್ತಿದೆ.

Exit mobile version