Site icon Vistara News

Samantha: ಸಮಂತಾ ಮುಂಬೈನಲ್ಲಿ ಖರೀದಿಸಿದ ದುಬಾರಿ ಫ್ಲ್ಯಾಟ್ ಬೆಲೆ ಎಷ್ಟು?

Samantha buys a luxurious sea-facing apartment

ಬೆಂಗಳೂರು: ಈಗಾಗಲೇ ದಕ್ಷಿಣದಲ್ಲಿ ದೊಡ್ಡ ಹೆಸರು ಮಾಡಿರುವ ಸಮಂತಾ ರುತ್ ಪ್ರಭು (Samantha) ಬಾಲಿವುಡ್‌ಗೆ ಕಾಲಿಡಲು ಸಜ್ಜಾಗಿದ್ದಾರೆ. ಇದೀಗ ನಟಿ ಮುಂಬೈನಲ್ಲಿ ಐಷಾರಾಮಿ ಫ್ಲ್ಯಾಟ್ ಖರೀದಿಸಿದ್ದಾರೆ. ಮುಂಬೈನಲ್ಲಿ 3 ಬೆಡ್‌ರೂಮ್ ಮನೆ ಖರೀದಿಸಿದ್ದಾರೆ. 15 ಕೋಟಿ ರೂ. ಬೆಲೆ ಬಾಳುವ ಮನೆಯನ್ನ ಕೊಂಡುಕೊಂಡಿದ್ದಾರೆ. ಈ ಬಗ್ಗೆ ಹಿಂದಿ ಮಾಧ್ಯಮಗಳಲ್ಲಿ ವರದಿ ಆಗಿದೆ.

ಭಾನುವಾರದಂದು, ಸಮಂತಾ ಬೆಳಕಿಗೆ ಮುಖ ಒಡ್ಡಿರುವ ಫೋಟೊವನ್ನು ಹಂಚಿಕೊಂಡಿದ್ದಾರೆ. ಪೋಸ್ಟ್‌ಗೆ “ಬೆಳಕನ್ನು ಹುಡುಕಿ” ಎಂದು ಶೀರ್ಷಿಕೆ ನೀಡಿದ್ದಾರೆ. ʻಸಿಟಾಡೆಲ್ʼ ವೆಬ್‌ ಸಿರೀಸ್‌ ಮೂಲಕ ಸಮಂತಾ ಬಾಲಿವುಡ್‌ಗೆ ಪದಾರ್ಪಣೆ ಮಾಡಿದ್ದಾರೆ. ರಾಜ್ ನಿಡಿಮೋರು ಮತ್ತು ಕೃಷ್ಣ ಡಿಕೆ ನಿರ್ದೇಶನದ ರೂಸೋ ಬ್ರದರ್ಸ್ ಸಿಟಾಡೆಲ್‌ನಲ್ಲಿ ವರುಣ್ ಧವನ್ ಜತೆ ಸಮಂತಾ ರುತ್ ಪ್ರಭು ಸೇರಿಕೊಂಡಿದ್ದಾರೆ. ಇದು ರಾಜ್ ಮತ್ತು ಡಿಕೆ ಜೊತೆ ವರುಣ್ ಅವರ ಮೊದಲ ಮತ್ತು ಸಮಂತಾ ಅವರ ಎರಡನೇ ಸಹಯೋಗವಾಗಿದೆ. ಚಲನಚಿತ್ರ ನಿರ್ಮಾಪಕರು ಈ ಹಿಂದೆ ದಿ ಫ್ಯಾಮಿಲಿ ಮ್ಯಾನ್ 2 ನಲ್ಲಿ ನಟಿಯೊಂದಿಗೆ ಕೆಲಸ ಮಾಡಿದ್ದಾರೆ.

ಇದನ್ನೂ ಓದಿ: Samantha: ಡಬ್ಬೂ ರತ್ನಾನಿ ಫೋಟೊಶೂಟ್‌ನಲ್ಲಿ ಮಿಂಚಿದ ಸಮಂತಾ

ಇದನ್ನೂ ಓದಿ: Samantha: `ಪಠಾಣ್‌’ ಎಫೆಕ್ಟ್‌ನಿಂದ ಬಿಡುಗಡೆ ಮುಂದೂಡಿದ ಸಮಂತಾ ಅಭಿನಯದ ಶಾಕುಂತಲಂ?

ಸಮಂತಾ ನಟನೆಯ `ಶಾಕುಂತಲಂ’ ಸಿನಿಮಾ ಫೆ.17ರಂದು ರಿಲೀಸ್ ಆಗಬೇಕಿತ್ತು. ಆದರೆ ಕಾರಣಾಂತರಗಳಿಂದ ಇನ್ನೂ 10 ದಿನ ರಿಲೀಸ್ ಡೇಟ್ ಮುಂದಕ್ಕೆ ಹೋಗಿದೆ. ಈ ಬಗ್ಗೆ ಅಭಿಮಾನಿಗಳು ಬೇಸರ ಹೊರಹಾಕಿದ್ದಾರೆ. ಗುಣಶೇಖರ್ ನಿರ್ದೇಶನದ ಈ ಚಿತ್ರದಲ್ಲಿ ದೇವ್ ಮೋಹನ್, ಅಲ್ಲು ಅರ್ಹ, ಮೋಹನ್ ಬಾಬು ಮುಂತಾದವರು ನಟಿಸಿದ್ದಾರೆ. ಸಮಂತಾ ರುತ್ ಪ್ರಭು ಈಗಾಗಲೇ ಹಲವು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಸಮಂತಾ ಹಾಗೂ ವಿಜಯ್‌ ದೇವರಕೊಂಡ ಅಭಿನಯದ ʻಖುಷಿʼ ಚಿತ್ರ ತೆರೆಗೆ ಬರಲು ಸಜ್ಜಾಗುತ್ತಿದೆ.

Exit mobile version