ಬೆಂಗಳೂರು: ಸಮಂತಾ ರುತ್ ಪ್ರಭು (Samantha Ruth Prabhu) ಅವರು ಮೈಯೋಸಿಟಿಸ್ ಕಾಯಿಲೆ ವಿರುದ್ಧ ಹೋರಾಟ ಮಾಡುತ್ತಲೇ ಇದ್ದಾರೆ. ಆಸ್ಪತ್ರೆಯಲ್ಲಿ ಇಂದಿಗೂ ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆ. ಇದೀಗ ಸಮಂತಾ ಮತ್ತೆ ಅಡ್ಮಿಟ್ ಆಗಿದ್ದಾರೆ. ಆಸ್ಪತ್ರೆಯಲ್ಲಿ ಡ್ರಿಪ್ಸ್ ಹಾಕಿಸಿಕೊಳ್ಳುತ್ತಿರುವ ಫೋಟೊವನ್ನು ಅವರು ಇನ್‌ಸ್ಟಾ ಸ್ಟೋರಿಯಲ್ಲಿ ಹಂಚಿಕೊಂಡಿದ್ದಾರೆ. ಇದರಿಂದ ತಮಗೆ ಆಗುತ್ತಿರುವ ಪ್ರಯೋಜನಗಳ ಬಗ್ಗೆ ವಿವರಗಳನ್ನು ಹಂಚಿಕೊಂಡಿದ್ದಾರೆ.
ಸಮಂತಾ ಕೆಲವು ತಿಂಗಳುಗಳಿಂದ ನಟನೆಯಿಂದ ಬ್ರೇಕ್ ತೆಗೆದುಕೊಂಡಿದ್ದಾರೆ. ವೆಕೇಶನ್, ಪ್ರವಾಸ ಎಂದು ಸಮಂತಾ ಸಮಯ ಕಳೆಯುತ್ತಿದ್ದಾರೆ. ಹಾಗೇ ಅವರ ಆರೋಗ್ಯದ ಬಗ್ಗೆ ಗಮನ ಹರಿಸುತ್ತಿದ್ದಾರೆ. ಇದೀಗ ತಾವು ಆಸ್ಪತ್ರೆಯಲ್ಲಿ ಅಡ್ಮಿಟ್ ಆಗಿರುವ ಫೋಟೊವನ್ನು ಹಂಚಿಕೊಂಡಿದಾರೆ. ಈ ಚಿತ್ರವನ್ನು ಹಂಚಿಕೊಂಡ ಸಮಂತಾ, `ಬಿಳಿ ರಕ್ತ ಕಣಗಳನ್ನು ಹೆಚ್ಚಿಸುವುದು, ಹೃದಯದ ಆರೋಗ್ಯವನ್ನು ಸುಧಾರಿಸುವುದು, ಸ್ನಾಯುವಿನ ಆರೋಗ್ಯವನ್ನು ಸುಧಾರಿಸುವುದು, ಶಕ್ತಿಯನ್ನು ಹೆಚ್ಚಿಸುವುದು, ವೈರಸ್‌ಗಳು ಮತ್ತು ಇತರ ಕಾಯಿಲೆಗಳ ವಿರುದ್ಧ ಹೋರಾಡುವುದು ಸೇರಿದಂತೆ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಪ್ರಯೋಜನಗಳು ಇದರಲ್ಲಿದೆʼʼ ಎಂದು ಡ್ರಿಪ್ಸ್ ಹಾಕಿಸಿಕೊಳ್ಳುವ ಫೋಟೊ ಶೇರ್ ಮಾಡಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಆರೋಗ್ಯ ಮತ್ತು ಫಿಟ್‌ನೆಸ್ ಪ್ರಯಾಣದ ಬಗ್ಗೆ ವಿವರವಾಗಿ ಮಾತನಾಡುತ್ತಿದ್ದಾರೆ. ಆರೋಗ್ಯದ ಬಗ್ಗೆ ತಮ್ಮ ಅಭಿಮಾನಿಗಳಿಗೆ ಸಾಮಾಜಿಕ ಮಾಧ್ಯಮದಲ್ಲಿ ಆಗಾಗ ತಿಳಿಸುತ್ತಿದ್ದಾರೆ. ಸದ್ಯ ನಟಿ ಒಂದು ವರ್ಷ ನಟನೆಯಿಂದ ಹಿಂದೆ ಸರಿದಿದ್ದಾರೆ. ಮತ್ತು ಆರೋಗ್ಯದತ್ತ ಗಮನ ಹರಿಸಿದ್ದಾರೆ.
ಇದನ್ನೂ ಓದಿ: Samantha Ruth Prabhu: ಮಾಜಿ ಪತಿಯ ಹೆಸರಿನ ಟ್ಯಾಟೂ ಅಳಿಸಿ ಹಾಕಿದ್ರಾ ಸಮಂತಾ? ಫೋಟೊ ವೈರಲ್!
ಇದಕ್ಕೂ ಮುಂಚೆ ಸಮಂತಾ ಅವರು ಗುಲಾಬಿ ಬಣ್ಣದ ಸೀರೆಯ ಫೋಟೊವನ್ನು ಹಂಚಿಕೊಂಡಿದ್ದರು. ಸಮಂತಾ ಅವರ ಪಕ್ಕೆಲುಬಿನ ಮೇಲಿನ ಟ್ಯಾಟೂ ಮಾಯವಾಗಿತ್ತು. ನಟಿ ಟ್ಯಾಟೂವನ್ನು ತೆಗೆಸಿರುವಂತೆ ಕಾಣಿಸುತ್ತಿತ್ತು. ಈ ವಿಚಾರವಾಗಿ ಸಖತ್ ಸುದ್ದಿಯಲ್ಲಿದ್ದರು. ಸಮಂತಾ ತನ್ನ ಚೊಚ್ಚಲ ಚಿತ್ರ ʼಯೇ ಮಾಯಾ ಚೇಸಾವೆʼಗೆ ಈ ಟ್ಯಾಟೂವನ್ನು ಅರ್ಪಿಸಿದ್ದರು. ಈ ಸಿನಿಮಾ 2010ರಲ್ಲಿ ಬಿಡುಗಡೆಯಾಯಿತು, ನಾಗ ಚೈತನ್ಯ ಜತೆ ತೆರೆ ಹಂಚಿಕೊಂಡಿದ್ದರು. ಸ್ಯಾಮ್ ಅವರ ಬಲಗೈಯಲ್ಲಿಯೂ ಒಂದು ಟ್ಯಾಟೂ ಇತ್ತು. ಈ ಟ್ಯಾಟೂಗೆ ನಾಗ ಚೈತನ್ಯ ತಮ್ಮ ಮದುವೆಯ ದಿನಾಂಕವನ್ನೂ ಸೇರಿಸಿದ್ದರು. ಸಮಂತಾ ಮತ್ತು ಚೈತನ್ಯ 2017ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಅಕ್ಟೋಬರ್ 2021ರಲ್ಲಿ ವಿಚ್ಛೇದನ ಪಡೆದರು.