ಬೆಂಗಳೂರು: ನಟ ನಾಗ ಚೈತನ್ಯ ಅವರಿಂದ ವಿಚ್ಛೇದನ ಪಡೆದ ಬಳಿಕ ಸಮಂತಾ (Samantha) ವಿಚಾರವಾಗಿ ಹಲವಾರು ಗಾಸಿಪ್ ಹರಿದಾಡುತ್ತಿವೆ. ಹೌದು ಸಮಂತಾ ಸದ್ಯ ಎರಡನೇ ಮದುವೆಯಾಗುವ ಬಗ್ಗೆ ಯೋಚಿಸುತ್ತಿದ್ದಾರೆಂಬ ವದಂತಿ ಎಲ್ಲೆಡೆ ಸದ್ದು ಮಾಡುತ್ತಿದೆ. ಕೆಲ ದಿನಗಳ ಹಿಂದಷ್ಟೇ ಸಮಂತಾ ಬಾಲಿವುಡ್ ನಟನ ಜತೆ ಎರಡನೇ ಮದುವೆಯಾಗುತ್ತಾರೆಂಬ ಸುದ್ದಿಯೂ ಹರಿದಾಡಿತ್ತು. ಸಮಂತಾ ರುತ್ ಪ್ರಭು ಮತ್ತೆ ಪ್ರೀತಿಯ ಹುಡುಕಾಟದಲ್ಲಿರುವ ಸಮಂತಾ ಎರಡನೇ ಮದುವೆಗೆ ಒಪ್ಪಿಗೆ ನೀಡಿದ್ದಾರೆ ಎನ್ನಲಾಗಿದೆ.
ಕಾಫಿ ವಿತ್ ಕರಣ್ 7ನಲ್ಲಿ ಭಾಗವಹಿಸಿದ ಸಮಂತಾ ಈ ಹಿಂದೆಯಷ್ಟೇ ತಮ್ಮ ವೈಯಕ್ತಿಕ ಜೀವನದ ಕುರಿತು ಮಾಹಿತಿ ಹಂಚಿಕೊಂಡಿದ್ದರು. ʻʻಇನ್ನೂ ಪ್ರೀತಿಸಲು ಮನಸ್ಸು ಮಾಡಿಲ್ಲ. ಸದ್ಯ ನನ್ನ ಹೃದಯದ ಬಾಗಿಲು ಮುಚ್ಚಲಾಗಿದೆʼʼ ಎಂದು ಹೇಳಿದ್ದರು. ನಟಿ ಸಮಂತಾ ಸದ್ಗುರು ಜಗ್ಗಿ ವಾಸುದೇವ್ ಅವರನ್ನು ತಮ್ಮ ಗುರು ಎಂದು ಪರಿಗಣಿಸುತ್ತಾರೆ. ಇದೀಗ ಸದ್ಗುರು ಅವರು ಸಮಂತಾ ಅವರ ಮನಸ್ಸನ್ನು ಬದಲಾಯಿಸುವಲ್ಲಿ ಯಶಸ್ವಿಯಾಗಿದ್ದಾರೆ ಮತ್ತು ಎರಡನೇ ಮದುವೆಯ ಬಗ್ಗೆ ಯೋಚಿಸುವಂತೆ ಮನವರಿಕೆ ಮಾಡಿಕೊಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ | Samantha | ಸಮಂತಾ ರುತ್ ಪ್ರಭು ನಟನೆಯ ಶಾಕುಂತಲಂ ಬಿಡುಗಡೆ ದಿನಾಂಕ ಫಿಕ್ಸ್
ಕಾಫಿ ವಿತ್ ಕರಣ್ 7ನಲ್ಲಿ ನಾಗಚೈತನ್ಯ ಜತೆ ವಿಚ್ಛೇದನ ಪಡೆದು ದೂರವಾದ ಬಳಿಕ ಪರಿಸ್ಥಿತಿ ಬಗ್ಗೆ ಸಮಂತ ಹೇಳಿಕೊಂಡಿದ್ದರು. ʻಮಾಜಿ ಪತಿʼ ಎಂದು ಹೇಳಿ ಎಂದು ಮಾತು ಶುರು ಮಾಡಿದ ಸಮಂತಾ. ʻಕೆಲ ಕಾಲ ತುಂಬ ಕಷ್ಟಕರವಾಗಿತ್ತು. ಆದರೆ, ಈಗ ಪರಿಸ್ಥಿತಿ ಸುಧಾರಿಸಿದ್ದು, ಹಿಂದೆಂದಿಗಿಂತಲೂ ಹೆಚ್ಚು ಬಲಶಾಲಿಯಾಗಿದ್ದೇನೆʼ ಎಂದು ಹೇಳಿಕೊಂಡಿದ್ದರು.
ಶೋ ವೇಳೆ, ನಾಗ ಚೈತನ್ಯ ಅವರ ಮೇಲೆ ಕಠಿಣ ಭಾವನೆಗಳಿವೆಯೇ ಎಂದು ಸಮಂತಾ ಬಳಿ ಕರಣ್ ಕೇಳಿದಾಗ, “ನಮ್ಮಿಬ್ಬರನ್ನೂ ಒಂದು ಕೋಣೆಯಲ್ಲಿ ಇರಿಸಿದರೆ, ನೀವು ಚೂಪಾದ ವಸ್ತುಗಳನ್ನು ಮರೆಮಾಚಬೇಕಾಗುವುದುʼʼ ಎಂದು ವ್ಯಂಗ್ಯವಾಗಿ ಉತ್ತರಿಸಿದ್ದಾರೆ. ಅಂದರೆ, ಚಾಕುಗಳಂತಹ ಹರಿತವಾದ ಯಾವುದೇ ವಸ್ತುಗಳನ್ನು ಇಡಬೇಡಿ ಎಂಬ ಲೆಕ್ಕದಲ್ಲಿ ತಮ್ಮಿಬ್ಬರ ಅಸಮಾಧಾನದ ಹೊಗೆಯನ್ನು ಹೀಗೆ ವ್ಯಕ್ತಪಡಿಸಿದ್ದಾರೆ. ಆದರೆ, ಈ ಮಾತನ್ನು ಮುಂದುವರಿಸಿ ಮುಂದಿನ ದಿನಗಳಲ್ಲಿ ಕಾಲ ಕೂಡಿಬಂದರೆ ನಾಗ ಚೈತನ್ಯ ಜತೆ ನಟಿಸುವುದಾಗಿಯೂ ಹೇಳಿಕೊಂಡಿದ್ದರು.
ರಿಲೇಶನ್ಶಿಪ್ ಬಗ್ಗೆ ಜನರು ಸಾಕಷ್ಟು ಟ್ರೋಲ್ ಮಾಡುವ ಕುರಿತು ಪ್ರತಿಕ್ರಿಯೆ ನೀಡಿದ ಸಮಂತಾ, ʻನಾನು ಈ ಮಾರ್ಗವನ್ನು ಆರಿಸಿಕೊಂಡಿದ್ದು ನನಗೆ ಖುಷಿ ಇದೆ. ಅದರ ಬಗ್ಗೆ ಅಸಮಾಧಾನವಿಲ್ಲ. ನನ್ನ ಜೀವನದಲ್ಲಿ ನಡೆದ ಘಟನೆಗಳಿಗೆ ಉತ್ತರಗಳನ್ನು ನೀಡುವುದು ನನ್ನ ಜವಾಬ್ದಾರಿಯಾಗಿತ್ತುʼ ಎಂದು ಹೇಳಿಕೊಂಡಿದ್ದರು.
ಸಮಂತಾ ತೆಲುಗಿನ ʻಖುಷಿʼ, ʻಯಶೋದಾʼ, ʻಶಾಕುಂತಲಂʼ ಮುಂತಾದ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಹಾಲಿವುಡ್ ನಿರ್ದೇಶಕ ಫಿಲಿಪ್ ಜಾನ್ ಅವರ ಜತೆ ʻಅರೆಂಜ್ಮೆಂಟ್ಸ್ ಆಫ್ ಲವ್ʼ ಸಿನಿಮಾದಲ್ಲಿ ಸಮಂತಾ ಬಣ್ಣ ಹಚ್ಚಲಿದ್ದಾರೆ.
ಇದನ್ನೂ ಓದಿ | Samantha Health | ನಟಿ ಸಮಂತಾ ರುತ್ ಪ್ರಭು ಆರೋಗ್ಯದಲ್ಲಿ ಏರುಪೇರು?