ಬೆಂಗಳೂರು : ಟಾಲಿವುಡ್ ನಟಿ ಸಮಂತಾ ರುತ್ ಪ್ರಭು (Samantha ) ಅವರು ಹೊಸ ಫೋಟೊವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಮೇಕಪ್ ಇಲ್ಲದ ನಗು ಮುಖದ ಈ ಸೆಲ್ಫಿ ಸಖತ್ ಆಗಿದೆ. ಮುಂಬರುವ ವರ್ಷದ ಬಗ್ಗೆ ಇನ್‌ಸ್ಟಾ ಪೋಸ್ಟ್ ಮೂಲಕ ಮಾತನಾಡಿದ್ದಾರೆ.
ಮೈಯೋಸಿಟಿಸ್ ಕಾಯಿಲೆಯಿಂದ ಬಳಲುತ್ತಿರುವುದರ ಬಗ್ಗೆ ತಮ್ಮ ನೋವನ್ನು ಇನ್‌ಸ್ಟಾ ಮೂಲಕ ಹಂಚಿಕೊಂಡಿದ್ದರು. ಇದಾದ ನಂತರ ಅವರು ʻಯಶೋದಾʼ ಸಿನಿಮಾದ ಕೆಲಸದಲ್ಲಿ ತೊಡಗಿಸಿಕೊಂಡರು. ಅನಾರೋಗ್ಯದಿಂದಾಗಿ ಸಮಂತಾ ಸೋಷಿಯಲ್ ಮೀಡಿಯಾದಿಂದ ದೂರವಿದ್ದು ಮೊದಲಿನಷ್ಟು ಆ್ಯಕ್ಟಿವ್ ಆಗಿರಲಿಲ್ಲ. ಇತ್ತೀಚೆಗೆ ತಮ್ಮ ಅಭಿಮಾನಿಗಳಿಗಾಗಿ ಸೆಲ್ಫಿಯನ್ನು ಸ್ವತಃ ಟಿಪ್ಪಣಿಯೊಂದಿಗೆ ಹಂಚಿಕೊಂಡಿದ್ದಾರೆ. ಸಮಂತಾ 2023 ಕ್ಕೆ ಕೌಂಟ್‌ಡೌನ್ ಆರಂಭಿಸಿದ್ದಾರೆ.
ಇದನ್ನೂ ಓದಿ | Samantha Ruth Prabhu | ಸದ್ಯಕ್ಕೆ ನಟನೆಗೆ ಸಮಂತಾ ಬ್ರೇಕ್, ಸ್ವಲ್ಪ ದಿನ ವಿಶ್ರಾಂತಿಗೆ ಮೊರೆ!
ಪೋಸ್ಟ್‌ಗೆ ಪ್ರತಿಕ್ರಿಯಿಸಿದ ಅಭಿಮಾನಿಯೊಬ್ಬರು “ಹಾಯ್ ಮೇಡಂ, ನಿಮ್ಮ ಆರೋಗ್ಯ ಹೇಗಿದೆ? ನಾನು ನಿಮ್ಮನ್ನು ನೋಡಿ ಬಹಳ ದಿನವಾಗಿದೆ, ನನಗೆ ತುಂಬಾ ಸಂತೋಷವಾಗಿದೆ” ಎಂದು ಕಮೆಂಟ್ ಮೂಲಕ ಹೇಳಿದ್ದಾರೆ. ಇನ್ನೊಬ್ಬರು . “ನಿಮ್ಮ ಪೋಸ್ಟ್‌ಗಾಗಿ ಕಾಯುತ್ತಿದ್ದೆ. ನೀವು ಅತ್ಯಂತ ಶಕ್ತಿಶಾಲಿ, ಸೂಪರ್‌ವುಮನ್ ಎಂದು ಕಮೆಂಟ್ ಮಾಡಿದ್ದಾರೆ.
ವರುಣ್ ಧವನ್ ಜತೆಗಿನ ಸಿನಿಮಾದಿಂದ ಸಮಂತಾ ಹೊರನಡೆದಿದ್ದಾರೆ ಎನ್ನಲಾಗಿದೆ. ಸಂಪೂರ್ಣವಾಗಿ ಗುಣವಾಗುವವರೆಗೂ ಸಿನಿಮಾದಿಂದ ದೂರ ಉಳಿಯಲು ನಟಿ ನಿರ್ಧರಿಸಿದ್ದಾರೆ.
ಇದನ್ನೂ ಓದಿ | Samantha | ಹೆಚ್ಚಿನ ಚಿಕಿತ್ಸೆಗೆ ದಕ್ಷಿಣ ಕೊರಿಯಾಗೆ ತೆರಳಿದ್ದಾರಂತೆ ಸಮಂತಾ!