Site icon Vistara News

Samantha Ruth Prabhu: ಮಾಜಿ ಪತಿಯ ಹೆಸರಿನ ಟ್ಯಾಟೂ ಅಳಿಸಿ ಹಾಕಿದ್ರಾ ಸಮಂತಾ? ಫೋಟೊ ವೈರಲ್‌!

Samantha removed the tattoo of Naga Chaitanya

ನಟಿ ಸಮಂತಾ (Samantha Ruth Prabhu) ಅವರ ಪಕ್ಕೆಲುಬಿನ ಮೇಲೆ ಮಾಜಿ ಪತಿ ನಾಗ ಚೈತನ್ಯ ಕುರಿತು ಚಾಯ್‌ ಎಂದು ಟ್ಯಾಟೂ ಇರುವ ಬಗ್ಗೆ ಗೊತ್ತೇ ಇದೆ. ಇದೀಗ ನಟಿ ಮತ್ತೆ ಈ ಟ್ಯಾಟೂ ವಿಚಾರವಾಗಿ ಸುದ್ದಿಯಲ್ಲಿದ್ದಾರೆ.

ಇದೀಗ ಸಮಂತಾ ಅವರು ಹಂಚಿಕೊಂಡಿರುವ ಗುಲಾಬಿ ಬಣ್ಣದ ಸೀರೆಯ ಫೋಟೊದಲ್ಲಿ ಪಕ್ಕೆಲುಬಿನ ಮೇಲಿನ ಟ್ಯಾಟೂ ಕಾಣಿಸುತ್ತಿಲ್ಲ. ನಟಿ ಟ್ಯಾಟೂವನ್ನು ತೆಗೆಸಿರುವಂತೆ ಕಾಣಿಸುತ್ತಿದೆ.

ಇದನ್ನೂ ಓದಿ: Samantha Ruth Prabhu: ಮತ್ತೆ ಒಂದಾಗ್ತಾರಾ ಸಮಂತಾ-ನಾಗಚೈತನ್ಯ? ಫೋಟೊ ವೈರಲ್‌!

ಸಮಂತಾ ತನ್ನ ಚೊಚ್ಚಲ ಚಿತ್ರ ʼಯೇ ಮಾಯಾ ಚೇಸಾವೆʼಗೆ ಈ ಟ್ಯಾಟೂವನ್ನು ಅರ್ಪಿಸಿದ್ದರು. ಈ ಸಿನಿಮಾ 2010ರಲ್ಲಿ ಬಿಡುಗಡೆಯಾಯಿತು, ನಾಗ ಚೈತನ್ಯ ಜತೆ ತೆರೆ ಹಂಚಿಕೊಂಡಿದ್ದರು. ಸ್ಯಾಮ್ ಅವರ ಬಲಗೈಯಲ್ಲಿಯೂ ಒಂದು ಟ್ಯಾಟೂ ಇತ್ತು. ಈ ಟ್ಯಾಟೂಗೆ ನಾಗ ಚೈತನ್ಯ ತಮ್ಮ ಮದುವೆಯ ದಿನಾಂಕವನ್ನೂ ಸೇರಿಸಿದ್ದರು. ಸಮಂತಾ ಮತ್ತು ಚೈತನ್ಯ 2017ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಅಕ್ಟೋಬರ್ 2021ರಲ್ಲಿ ವಿಚ್ಛೇದನ ಪಡೆದರು.

ಇದ್ದಕ್ಕಿದ್ದಂತೆ ನಟಿಯ ಈ ಫೋಟೊಗಳು ವೈರಲ್‌ ಆಗಿದ್ದು, ಟ್ಯಾಟೂ ತೆಗೆಸಿರುವಂತೆ ಕಂಡಿದೆ.

ಸಮಂತಾ ಒಟ್ಟು ಮೂರು ಟ್ಯಾಟುಗಳು ಹಾಕಿಸಿಕೊಂಡಿದ್ದರು. ಆದರೀಗ ಒಂದು ಕಾಣೆಯಾಗಿದೆ. ಸಮಂತಾ ರುತ್ ಪ್ರಭು ಅವರ ಇತ್ತೀಚೆಗೆ ಗುಲಾಬಿ ಬಣ್ಣದ ಸೀರೆಯೊಂದಿಗೆ ಪೋಟೊಗಳನ್ನು ಹಂಚಿಕೊಂಡಿದ್ದರು.

ಹೆಚ್ಚಿನ ಜನರು ಈ ಫೋಟೊಗಳನ್ನು ಇಷ್ಟಪಟ್ಟಿದ್ದಾರೆ. ಸಮಂತಾ ಅದ್ಭುತವಾಗಿ ಕಾಣಿಸಿಕೊಂಡಿದ್ದಾರೆ.

Exit mobile version