Samantha | ಶೂಟಿಂಗ್ಗೆ ಮತ್ತೆ ಮರಳಿದ ಸಮಂತಾ: ವರುಣ್ ಧವನ್ ಜತೆ ಇದ್ದ ಫೋಟೊ ವೈರಲ್ Yashaswi Devadiga 1 year ago ಸಮಂತಾ ಮೈಯೋಸಿಟಿಸ್ ಕಾಯಿಲೆಗೆ ಚಿಕಿತ್ಸೆ ಪಡೆದು ಮತ್ತೆ ಕೆಲಸಕ್ಕೆ ಮರಳಿದ್ದಾರೆ. ಸುದೀರ್ಘ ವಿಶ್ರಾಂತಿಯನ್ನು ತೆಗೆದುಕೊಂಡ ನಂತರ, ಸಮಂತಾ ತಮ್ಮ ಮುಂಬರುವ ಚಿತ್ರ ‘ಸಿಟಾಡೆಲ್’ ಇಂಡಿಯಾದ ಚಿತ್ರೀಕರಣವನ್ನು ಪ್ರಾರಂಭಿಸಿದ್ದಾರೆ. ವರುಣ್ ಧವನ್ ಕೂಡ ನಟಿಸಿದ್ದಾರೆ. ರಾಜ್ ಮತ್ತು ಡಿಕೆ ನಿರ್ದೇಶನದ ಚಿತ್ರದ ಹೊಸ ಶೆಡ್ಯೂಲ್ನಲ್ಲಿ ವರುಣ್ ಧವನ್ ಜತೆ ಸಮಂತಾ ಕಾಣಿಸಿಕೊಂಡಿದ್ದಾರೆ. ʻಸಿಟಾಡೆಲ್’ ಅಮೆರಿಕಾದ ಸೀರಿಸ್ ಆಗಿದ್ದು, ಪ್ರಿಯಾಂಕಾ ಚೋಪ್ರಾ ಮತ್ತು ರಿಚರ್ಡ್ ಮ್ಯಾಡೆನ್ ಕಾಣಿಸಿಕೊಂಡಿದ್ದರು. ಅದೇ ಸರಣಿಯ ಹಿಂದಿ ವರ್ಷನ್ನಲ್ಲಿ ಸಮಂತಾ ಮತ್ತು ವರುಣ್ ಧವನ್ ಕಾಣಿಸಿಕೊಳ್ಳುತ್ತಿದ್ದಾರೆ. 2 ವಾರಗಳ ಕಾಲ ಮುಂಬೈನಲ್ಲಿ ಶೂಟಿಂಗ್ ನಡೆಲಿದೆ ಎನ್ನುವ ಮಾಹಿತಿ ತಿಳಿದುಬಂದಿದೆ. ಶೀಘ್ರದಲ್ಲೇ ವಿಜಯ್ ದೇವರಕೊಂಡ ಜತೆಗಿನ ಖುಷಿ ಚಿತ್ರದ ಚಿತ್ರೀಕರಣಕ್ಕೆ ಮರಳಲಿದ್ದಾರೆ. ʻಸಿಟಾಡೆಲ್’ನಲ್ಲಿ ವರುಣ್ ಧವನ್ ಈಗಾಗಲೇ ಕೆಲವು ಆ್ಯಕ್ಷನ್ ದೃಶ್ಯಗಳನ್ನು ಚಿತ್ರೀಕರಿಸಿದ್ದಾರೆ.ಸಮಂತಾ ರುತ್ ಪ್ರಭು ತಮ್ಮ ಮುಂದಿನ ಚಿತ್ರ ʻಶಾಕುಂತಲಂʼ ಬಿಡುಗಡೆಗೆ ಸಜ್ಜಾಗುತ್ತಿದ್ದಾರೆ. ಈ ಚಿತ್ರವು ಫೆಬ್ರವರಿ 17 ರಂದು ಥಿಯೇಟರ್ಗಳಿಗೆ ಬರಲಿದೆ. ಗುಣಶೇಖರ್ ಬರೆದು ನಿರ್ದೇಶಿಸಿದ್ದಾರೆ.