Site icon Vistara News

Allu Arjun: ಅಲ್ಲು ಅರ್ಜುನ್‌ ಮಗಳು ತೆಲುಗಿನಲ್ಲಿ ಮಾತ್ರ ಮಾತನಾಡುತ್ತಾಳೆ, ಇಂಗ್ಲಿಷ್ ಮಾತನಾಡಲ್ಲ ಎಂದ ಸಮಂತಾ

Samantha Reveals Allu Arjun's Daughter 'Only' Speaks Telugu

ಬೆಂಗಳೂರು: ನಟಿ ಸಮಂತಾ ರುತ್ ಪ್ರಭು ತಮ್ಮ ಬಹು ನಿರೀಕ್ಷಿತ ಚಿತ್ರ ಶಾಕುಂತಲಂ ಮೂಲಕ ಮತ್ತೆ ದೊಡ್ಡ ಪರದೆಯ ಮೇಲೆ ಬರಲು ಸಜ್ಜಾಗಿದ್ದಾರೆ. ಶಕುಂತಲಾ ದೇವಿ ಪಾತ್ರವನ್ನು ನಿರ್ವಹಿಸುತ್ತಿದ್ದು, ದೇವ್ ಮೋಹನ್ ಅವರೊಂದಿಗೆ ತೆರೆ ಹಂಚಿಕೊಳ್ಳುತ್ತಿದ್ದಾರೆ. ಈ ಚಿತ್ರ ಏಪ್ರಿಲ್‌ 14ರಂದು ತೆರೆ ಕಾಣುತ್ತಿದೆ. ಮುಖ್ಯವಾಗಿ ಈ ಚಿತ್ರದಲ್ಲಿ ಸೂಪರ್ ಸ್ಟಾರ್ ಅಲ್ಲು ಅರ್ಜುನ್ (Allu Arjun) ಮತ್ತು ಅಲ್ಲು ಸ್ನೇಹಾ ರೆಡ್ಡಿ ಅವರ ಪುತ್ರಿ ಅಲ್ಲು ಅರ್ಹಾ ಕೂಡ ಕಾಣಿಸಿಕೊಳ್ಳಲಿದ್ದಾರೆ. ಅರ್ಹಾ ಭರತನ ಪಾತ್ರವನ್ನು ನಿರ್ವಹಿಸಲಿದ್ದಾರೆ ಎಂದು ವರದಿ ಆಗಿದೆ. ʻಪುಟ್ಟ ಹುಡುಗಿ ಅದ್ಭುತವಾದ ಅಭಿನಯವನ್ನು ಮಾಡಿದ್ದಾರೆʼ ಎಂದು ಸಮಂತಾ ಸಂದರ್ಶನವವೊಂದರಲ್ಲಿ ಹೇಳಿಕೊಂಡಿದ್ದಾರೆ.

ಪಿಂಕ್ವಿಲ್ಲಾ ಜತೆಗಿನ ಇತ್ತೀಚಿನ ಸಂದರ್ಶನದಲ್ಲಿ, ನಟಿ ಸಮಂತಾ ಅವರು ಅರ್ಹ ಕುರಿತಾಗಿ ಮಾತನಾಡಿದ್ದಾರೆ. ʻʻಅರ್ಹಳ ಭಾಷಾ ಕೌಶಲ್ಯವು ವಯಸ್ಕರಿಗಿಂತ ಉತ್ತಮವಾಗಿದೆʼʼ ಎಂದು ಅವರು ಹೇಳಿದ್ದಾರೆ.” ಅವಳು ತುಂಬಾ ಮುದ್ದಾಗಿದ್ದಾಳೆ. ಅವಳು ಸೆಟ್‌ನಲ್ಲಿ ಎಲ್ಲರ ಮನಸ್ಸನ್ನು ಗೆದ್ದಿದ್ದಾಳೆ. ಅರ್ಹಾ ಮೊದಲನೆಯದಾಗಿ, ಇಂಗ್ಲಿಷ್‌ನ ಒಂದು ಪದವನ್ನು ಮಾತನಾಡುವುದಿಲ್ಲ. ಅವಳು ತೆಲುಗು ಮಾತ್ರ ಮಾತನಾಡುತ್ತಾಳೆ. ಅವಳು ತೆಲುಗು ಚೆನ್ನಾಗಿ ಮಾತನಾಡುತ್ತಾಳೆ. ಹೈದರಾಬಾದ್‌ನಲ್ಲಿರುವ ಹೆಚ್ಚಿನ ಜನರು ಮಾತನಾಡುವ ತೆಲುಗು ಭಾಷೆಗಿಂತ ಅವಳು ಚೆನ್ನಾಗಿ ಮಾತನಾಡುತ್ತಾಳೆʼʼಎಂದು ಹೇಳಿದ್ದಾರೆ.

ತಮ್ಮ ಮೊದಲ ದಿನದ ಚಿತ್ರೀಕರಣವನ್ನು ನೆನಪಿಸಿಕೊಂಡು ನಟಿ ಮಾತನಾಡಿ ʻʻಶೂಟಿಂಗ್ ಮೊದಲ ದಿನ ನನಗೆ ನೆನಪಿದೆ. ಅರ್ಹಾಗೆ ತಂದೆಯ ಅಗತ್ಯವಿಲ್ಲ, ಅವಳು ಸಲಿಸಾಗಿ ಶೂಟಿಂಗ್‌ ನಿಭಾಯಿಸುತ್ತಿದ್ದಳು. ಎರಡನೇ ದಿನದಿಂದ ಅರ್ಹಾ ಬೆಳಗ್ಗೆ 9 ರಿಂದ ರಾತ್ರಿ 9ರವರೆಗೆ ಶೂಟಿಂಗ್‌ ನಿಭಾಯಿಸಿದಳು. ದೀರ್ಘ ಸಂಭಾಷಣೆಗಳನ್ನು ಕೂಡ ಅವಳು ಹೇಳುತ್ತಿದ್ದಳು ಎಂದು ಸಮಂತಾ ಬಹಿರಂಗಪಡಿಸಿದರು. ನಟಿ ಅರ್ಹಾಳ ಆತ್ಮವಿಶ್ವಾಸವನ್ನು ಶ್ಲಾಘಿಸಿದ್ದಾರೆ. ʻಸೆಟ್‌ನಲ್ಲಿ 200 ಕ್ಕೂ ಹೆಚ್ಚು ಮಂದಿ ಜನ ಇದ್ದರೂ ಅರ್ಹಾ ಭಯಪಡಲಿಲ್ಲ ಮತ್ತು ಸುಂದರವಾಗಿ ನಟಿಸಿದ್ದಾರೆʼ ಎಂದು ಹೇಳಿದರು.

ಇದನ್ನೂ ಓದಿ: Samantha Ruth Prabhu: `ಶಾಕುಂತಲಂ’ ಸಿನಿಮಾವನ್ನು ರಿಜೆಕ್ಟ್ ಮಾಡಬೇಕಂತಿದ್ದ ಸಮಂತಾ: ಕಾರಣವೇನು?

ಏಪ್ರಿಲ್ 14 ರಂದು ತೆರೆಗೆ

ತಮಿಳು, ತೆಲುಗು, ಮಲಯಾಳಂ, ಕನ್ನಡ ಮತ್ತು ಹಿಂದಿ ಸೇರಿದಂತೆ ಐದು ಭಾಷೆಗಳಲ್ಲಿ ಚಿತ್ರ ಬಿಡುಗಡೆಯಾಗುತ್ತಿದೆ. ದೇವ್ ಮೋಹನ್ ಸಮಂತಾ ಎದುರು ನಾಯಕ ನಟನಾಗಿ ನಟಿಸಲಿದ್ದಾರೆ. ಮಹಾಕವಿ ಕಾಳಿದಾಸನ ʻಅಭಿಜ್ಞಾನ ಶಾಕುಂತಲಂʼ ನಾಟಕವನ್ನು ಆಧರಿಸಿ ಚಿತ್ರ ನಿರ್ಮಾಣವಾಗಿದೆ. ರಾಜ ದುಷ್ಯಂತ ಪಾತ್ರದಲ್ಲಿ ದೇವ್ ಮೋಹನ್ ನಟಿಸಿದರೆ, ಶಾಕುಂತಲೆಯಾಗಿ ಸಮಂತಾ ಕಾಣಿಸಿಕೊಳ್ಳುತ್ತಿದ್ದಾರೆ.

ಚಿತ್ರವನ್ನು ಗುಣಶೇಖರ್ ನಿರ್ದೇಶಿಸಿದ್ದಾರೆ. ನೀಲಿಮಾ ಗುಣ ಮತ್ತು ದಿಲ್ ರಾಜು ನಿರ್ಮಾಣ ಮಾಡಿದ್ದಾರೆ. ಸಚಿನ್ ಖೇಡೇಕರ್, ಅನನ್ಯ ನಾಗಲ್ಲ, ಮೋಹನ್ ಬಾಬು, ಗೌತಮಿ ಮತ್ತು ಅದಿತಿ ಬಾಲನ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ

Exit mobile version