Site icon Vistara News

Kushi Movie: ವಿಜಯ್‌ ದೇವರಕೊಂಡ, ಸಮಂತಾ ರೊಮ್ಯಾನ್ಸ್‌; ವೈರಲ್‌ ಆಯ್ತು ‘ಬಿಸಿ ಬಿಸಿ’ ವಿಡಿಯೊ

Vijay Devarakonda And Samantha Ruth Prabhu

Samantha Ruth Prabhu and Vijay Deverakonda Go Intimate In Kushi, Video Goes Viral

ಹೈದರಾಬಾದ್:‌ ವಿಜಯ್‌ ದೇವರಕೊಂಡ ಹಾಗೂ ಸಮಂತಾ ರುತ್‌ ಪ್ರಭು (Samantha Ruth Prabhu) ನಟನೆಯ ಪ್ಯಾನ್‌ ಇಂಡಿಯಾ ಸಿನಿಮಾ ಖುಷಿ (Kushi Movie) ಬಿಡುಗಡೆಯಾಗಿದೆ. ಕರ್ನಾಟಕ, ಆಂಧ್ರಪ್ರದೇಶ ಸೇರಿ ಎಲ್ಲ ಭಾಷೆಗಳಲ್ಲೂ ಸಿನಿಮಾ ಕುರಿತು ಮೆಚ್ಚುಗೆ ವ್ಯಕ್ತವಾಗುತ್ತಿದೆ. ವಿಜಯ್‌ ದೇವರಕೊಂಡ (Vijay Deverakonda) ಹಾಗೂ ಸಮಂತಾ ಅಭಿಮಾನಿಗಳಂತೂ ಸಿನಿಮಾ ವೀಕ್ಷಿಸಿದ “ಖುಷಿ”ಯಲ್ಲಿ ತೇಲಾಡುತ್ತಿದ್ದಾರೆ. ಇದರ ಬೆನ್ನಲ್ಲೇ, ಸಿನಿಮಾದಲ್ಲಿ ವಿಜಯ್‌ ದೇವರಕೊಂಡ ಹಾಗೂ ಸಮಂತಾ ರುತ್‌ ಪ್ರಭು ಹಾಟ್‌ ರೊಮ್ಯಾನ್ಸ್‌ ವಿಡಿಯೊ ವೈರಲ್‌ ಆಗಿದೆ.

ಈಗಾಗಲೇ ವಿಜಯ್‌ ದೇವರಕೊಂಡ ಹಾಗೂ ಸಮಂತಾ ರುತ್‌ ಪ್ರಭು ಪ್ರೀತಿಸುತ್ತಿದ್ದಾರೆ ಎಂಬ ವದಂತಿಗಳು ಹರಡಿವೆ. ಶೀಘ್ರದಲ್ಲೇ ನಿಮ್ಮ ಜತೆ ಮಹತ್ವದ ಸುದ್ದಿಯೊಂದನ್ನು ಹಂಚಿಕೊಳ್ಳುತ್ತೇನೆ ಎಂದು ವಿಜಯ್‌ ದೇವರಕೊಂಡ ಹೇಳಿದ ಬೆನ್ನಲ್ಲೇ, ಆ ಖುಷಿ ಸುದ್ದಿಯ ಬೆಡಗಿ ಸಮಂತಾ ರುತ್‌ ಪ್ರಭು ಅವರೇ ಎಂದು ಹೇಳಲಾಗುತ್ತಿದೆ. ಇಂತಹ ಮಾತುಗಳು ಕೇಳಿಬರುತ್ತಿರುವ ಹೊತ್ತಿನಲ್ಲೇ ರೊಮ್ಯಾನ್ಸ್‌ ವಿಡಿಯೊ ವೈರಲ್‌ ಆಗಿದ್ದ ಅಭಿಮಾನಿಗಳ ತಲೆಗೆ ಹುಳ ಬಿಟ್ಟಂತಾಗಿದೆ.

ಖುಷಿ ಸಿನಿಮಾದಲ್ಲಿ ವಿಜಯ್‌ ಹಾಗೂ ಸಮಂತಾ ಕೆಮಿಸ್ಟ್ರಿ ಬಗ್ಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಈಗ ರೊಮ್ಯಾಂಟಿಕ್‌ ವಿಡಿಯೊ ವೈರಲ್‌ ಆಗಿರುವುದರಿಂದ “ಅರ್ಜುನ್‌ ರೆಡ್ಡಿ ಈಸ್‌ ಬ್ಯಾಕ್”‌ ಎಂದು ಒಂದಷ್ಟು ಜನ ಪ್ರತಿಕ್ರಿಯಿಸಿದರೆ, ಇವರ ಜೋಡಿ ಮೇಡ್‌ ಫಾರ್‌ ಈಚ್‌ ಅದರ್‌ ಎಂದು ಅಭಿಮಾನಿಗಳು ಖುಷಿಪಟ್ಟಿದ್ದಾರೆ.

ಇದನ್ನೂ ಓದಿ: Kushi Trailer: ಪ್ರೀತಿ, ಪ್ರೇಮ, ಸಂಸಾರ ಜಗಳವೇ ʻಖುಷಿʼಯ ಹೈಲೆಟ್!

2018ರ ಮಹಾನಟಿ ಚಿತ್ರದ ನಂತರ ವಿಜಯ್‌ ದೇವರಕೊಂಡ ಹಾಗೂ ಸಮಂತಾ ಒಟ್ಟಿಗೆ ತೆರೆ ಮೇಲೆ ಕಾಣಿಸಿಕೊಂಡಿದ್ದಾರೆ. ಈ ಚಿತ್ರಕ್ಕೆ, ಪೀಟರ್ ಹೆನ್ಸ್ ಸಾಹಸ ನಿರ್ದೇಶನ, ಪ್ರವೀನ್ ಪುಡಿ ಅವರ ಸಂಕಲನ, ಜಿ ಮುರಳಿ ಕ್ಯಾಮೆರಾ ಕೆಲಸ ಮಾಡಿದೆ. ಹೇಶಮ್ ಅಬ್ದುಲ್ ವಹಾಬ್ ಅವರ ಸಂಗೀತವಿದೆ.ಮೈತ್ರಿ ಮೂವಿ ಮೇಕರ್ಸ್ ಈ ಚಿತ್ರವನ್ನು ನಿರ್ಮಿಸಿದೆ. ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಸಿನಿಮಾ ಕುರಿತು ಜನ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

Exit mobile version