Site icon Vistara News

Samantha Ruth Prabhu: ವರುಣ್‌ ಧವನ್‌ ಕಂಡೊಡನೆ ನಾಚಿ ನೀರಾದ ಸಮಂತಾ!

Samantha Ruth Prabhu At Citadel Premiere in London

ಬೆಂಗಳೂರು: ಸಿಟಾಡೆಲ್ (Citadel) ಯೂನಿವರ್ಸ್‌ನ ಭಾರತೀಯ ಅಧ್ಯಾಯದಲ್ಲಿ ವರುಣ್ ಧವನ್ ಹಾಗೂ ಸಮಂತಾ (Samantha Ruth Prabhu) ನಾಯಕ, ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಲಂಡನ್‌ನಲ್ಲಿ ಪ್ರಿಯಾಂಕಾ ಚೋಪ್ರಾ, ರಿಚರ್ಡ್ ಮ್ಯಾಡೆನ್ ನಟಿಸಿರುವ ʻಸಿಟಾಡೆಲ್‌ʼ ಪ್ರಥಮ ಪ್ರದರ್ಶನದಲ್ಲಿ ರೆಡ್ ಕಾರ್ಪೆಟ್ ಮೇಲೆ ಈ ಜೋಡಿ ಮಿಂಚಿದೆ. ಸಿಟಾಡೆಲ್ ಇಂಡಿಯಾ (ಭಾರತೀಯ ಆವೃತ್ತಿ) ಸಹ ನಟ ವರುಣ್ ಧವನ್ ಮತ್ತು ಈ ಅಧ್ಯಾಯದ ನಿರ್ದೇಶಕರಾದ ರಾಜ್ ಮತ್ತು ಡಿಕೆ ಇವೆಂಟ್‌ನಲ್ಲಿ ಭಾಗಿಯಾಗಿದ್ದರು.

ಸಮಂತಾ ಅವರು ವಿಕ್ಟೋರಿಯಾ ಬೆಕ್‌ಹ್ಯಾಮ್ ಹೌಸ್‌ನಲ್ಲಿ ಕಪ್ಪು ಬಣ್ಣದ ಕ್ರಾಪ್ ಟಾಪ್ ಉದ್ದದ ಸ್ಕರ್ಟ್‌ನಲ್ಲಿ ಮಿಂಚಿದ್ದಾರೆ. ವರುಣ್ ಕಪ್ಪು ಟೀ, ಜಾಕೆಟ್ ಮತ್ತು ಮ್ಯಾಚಿಂಗ್ ಪ್ಯಾಂಟ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಕಾರ್ಪೆಟ್ ಮೇಲೆ, ವರುಣ್ ಅವರು ಸಮಂತಾ ಅವರ ಜತೆ ಪೋಸ್‌ ನೀಡಿದ್ದಾರೆ. ಫೋಸ್ಟ್‌ ನೀಡುವ ವೇಳೆ ಸಮಂತಾ ನಾಚಿ ನೀರಾಗಿದ್ದಾರೆ. ಸಿಟಾಡೆಲ್ ಇಂಡಿಯಾ ಸದ್ಯ ಚಿತ್ರೀಕರಣದಲ್ಲಿದೆ. ರುಸ್ಸೋ ಬ್ರದರ್ಸ್‌ನ ಅಂತಾರಾಷ್ಟ್ರೀಯ ಸರಣಿ ಸಿಟಾಡೆಲ್‌ನ ಭಾರತೀಯ ಅವತರಣಿಕೆಯಲ್ಲಿ ಪ್ರಿಯಾಂಕಾ ಚೋಪ್ರಾ ಮತ್ತು ರಿಚರ್ಡ್ ಮ್ಯಾಡೆನ್ ನಟಿಸಿದ್ದಾರೆ.

ಪ್ರಿಯಾಂಕಾ ಚೋಪ್ರಾ ಪ್ರಚಾರ ಕಾರ್ಯಕ್ಕೆಂದು ಭಾರತದಲ್ಲಿದ್ದಾಗ, ಸಿಟಾಡೆಲ್‌ನ ಪತ್ರಿಕಾಗೋಷ್ಠಿಯಲ್ಲಿ ʻʻನೀವು ಸಮಂತಾ ಮತ್ತು ವರುಣ್‌ಗೆ ಏನಾದರೂ ಸಲಹೆ ನೀಡುತ್ತೀರಾʼʼ ಎಂಬ ಪ್ರಶ್ನೆಗೆ ನಟಿ ಉತ್ತರಿಸಿದ್ದು ಹೀಗೆ: “ನಾನು ಅವರಿಗೆ ಯಾವುದೇ ಸಲಹೆಯನ್ನು ನೀಡಲು ಸಾಧ್ಯವಿಲ್ಲ ಎಂದು ಭಾವಿಸುತ್ತೇನೆ. ಅವರು ತಮ್ಮದೇ ಆದ ರೀತಿಯಲ್ಲಿ ನಟನೆಯನ್ನು ನಿರ್ವಹಿಸಲು ನಿಪುಣ ನಟರು. ನಾನು ಹೇಳಲು ಏನೂ ಇಲ್ಲ. ನಾನು ಇತ್ತೀಚೆಗೆ ಎನ್‌ಎಂಎಸಿಸಿ ಸಮಾರಂಭದಲ್ಲಿ ವರುಣ್ ಅವರನ್ನು ಭೇಟಿ ಮಾಡಿದ್ದೇನೆ. ಆಗ ಅವರು ಶೂಟಿಂಗ್ ಹೇಗೆ ನಡೆಯುತ್ತಿದೆ, ಎಷ್ಟು ಉತ್ಸುಕರಾಗಿದ್ದಾರೆ ಎಂದು ಹೇಳುತ್ತಿದ್ದರುʼʼ ಎಂದರು.

ಸಿಟಾಡೆಲ್ ಏಪ್ರಿಲ್ 28ರಂದು ಅಮೆಜಾನ್ ಪ್ರೈಮ್ ವಿಡಿಯೊದಲ್ಲಿ ಬಿಡುಗಡೆಯಾಗಲಿದೆ. ರಾಜ್ ನಿಡಿಮೋರು ಮತ್ತು ಕೃಷ್ಣ ಡಿಕೆ ಅವರು ತಮ್ಮ ಬ್ಯಾನರ್ ಡಿ2ಆರ್ ಫಿಲ್ಮ್ಸ್ ಅಡಿಯಲ್ಲಿ ಕಾರ್ಯಕಾರಿ ನಿರ್ಮಾಪಕರಾಗಿಯೂ ಕಾರ್ಯನಿರ್ವಹಿಸಲಿದ್ದಾರೆ. ಈ ಸರಣಿಯನ್ನು D2R ಫಿಲ್ಮ್ಸ್ ಮತ್ತು ಅಮೆಜಾನ್ ಸ್ಟುಡಿಯೋಸ್ ನಿರ್ಮಿಸಿದೆ.

ಇದನ್ನೂ ಓದಿ: Samantha Ruth Prabhu: `ಶಾಕುಂತಲಂ’ ಸಿನಿಮಾ ಫ್ಲಾಪ್ ಆದ ಬೆನ್ನಲ್ಲೇ ವಿದೇಶಕ್ಕೆ ಹಾರಿದ್ಯಾಕೆ ಸಮಂತಾ? ಕಾರಣ ಇಲ್ಲಿದೆ!

ಮುಂದಿನ ಪ್ರಾಜೆಕ್ಟ್ ಬಗ್ಗೆ ಸಮಂತಾ ಗಮನ

ಸಮಂತಾ ನಟನೆಯ ‘ಶಾಕುಂತಲಂ’ (Shakunthalam) ಸಿನಿಮಾ ಬಾಕ್ಸ್ ಆಫೀಸಿನಲ್ಲಿ ಅಷ್ಟೇನೂ ಕಮಾಲ್ ಮಾಡಲಿಲ್ಲ. ಐವತ್ತು ಕೋಟಿ ರೂ. ವೆಚ್ಚದಲ್ಲಿ ತಯಾರಾದ ಈ ಸಿನಿಮಾ ನಿರ್ಮಾಪಕರಿಗೆ ಹಣ ತಂದುಕೊಡಲಿಲ್ಲ. ಸಮಂತಾ ವಿರುದ್ಧ ನೆಗೆಟಿವ್ ಕಾಮೆಂಟ್ ಕೂಡ ನೆಟ್ಟಿಗರು ಬರೆಯುತ್ತಿದ್ದಾರೆ. ಇದ್ಯಾವುದನ್ನೂ ಲೆಕ್ಕಿಸದೆ ಸಮಂತಾ ಮುಂದಿನ ಪ್ರಾಜೆಕ್ಟ್ ಕಡೆಗೆ ಗಮನ ಕೊಡುತ್ತಿದ್ದಾರೆ.

ಸಮಂತಾ ರುತ್ ಪ್ರಭು (Samantha) ಮತ್ತು ವಿಜಯ್ ದೇವರಕೊಂಡ (Vijay Devarakonda) ಕಾಂಬಿನೇಶನ್‌ ಸಿನಿಮಾವಾದ ʼಖುಷಿʼ ಇದೇ ಸೆಪ್ಟೆಂಬರ್‌ 1ರಂದು ವಿಶ್ವಾದ್ಯಂತ ಬಿಡುಗಡೆಯಾಗುತ್ತಿದೆ. 2018ರ ʼಮಹಾನಟಿʼ ಚಿತ್ರದ ನಂತರ ವಿಜಯ್‌ ಹಾಗೂ ಸ್ಯಾಮ್‌ ಒಟ್ಟಿಗೆ ತೆರೆ ಮೇಲೆ ಕಾಣಿಸಿಕೊಳ್ಳುತ್ತಿದ್ದಾರೆ. ʼಖುಷಿʼ ಚಿತ್ರವನ್ನು ಶಿವ ನಿರ್ವಾಣ ನಿರ್ದೇಶಿಸುತ್ತಿದ್ದಾರೆ.

Exit mobile version