Site icon Vistara News

Samantha Ruth Prabhu: ನಾಗಚೈತನ್ಯ ಜತೆಗೆ ವಾಸವಿದ್ದ ಮನೆಯನ್ನೇ ಭಾರಿ ಮೊತ್ತಕ್ಕೆ ಖರೀದಿಸಿದ್ರಾ ಸಮಂತಾ?

Samantha Ruth Prabhu Bought Back Same House Shared With Naga Chaitanya

ಬೆಂಗಳೂರು: ಸಮಂತಾ (Samantha Ruth Prabhu) 36ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ನಾಗ ಚೈತನ್ಯದಿಂದ ವಿಚ್ಛೇದನ ಪಡೆದ ಬಳಿಕ ನಟಿ ನಾಗ ಚೈತನ್ಯ ಅವರಿಂದ 200 ಕೋಟಿ ರೂ. ಜೀವನಾಂಶಕ್ಕೆ ಬೇಡಿಕೆ ಇಟ್ಟಿದ್ದಾರೆ ಎಂದು ವರದಿಯಾಗಿತ್ತು. ಸಮಂತಾಗೆ ಜೀವನಾಂಶವಾಗಿ 200 ಕೋಟಿ ರೂ.ವನ್ನು ನೀಡಲು ಅಕ್ಕಿನೇನಿ ಕುಟುಂಬ ಮುಂದಾಗಿತ್ತು ಎಂಬ ವಿಚಾರ ಬಹಿರಂಗವಾಗಿತ್ತು. ಆದರೆ ಈ ಕುರಿತಂತೆ ಸಮಂತಾ ನನಗೆ ಜೀವನಾಂಶ ಬೇಡ ಹಾಗೂ ನಾಗ ಚೈತನ್ಯ ಅಥವಾ ಅವರ ಕುಟುಂಬದವರಿಂದ ಒಂದು ಪೈಸೆ ಕೂಡ ತೆಗೆದುಕೊಳ್ಳಲು ಬಯಸುವುದಿಲ್ಲ ಎಂದು ಹೇಳಿದ್ದಾರೆ ಎಂಬ ವಿಚಾರ ವೈರಲ್‌ ಆಗಿತ್ತು. ಇದೀಗ ನಟ ಮುರಳಿ ಮೋಹನ್ ಈ ಬಗ್ಗೆ ಮಾತನಾಡಿದ್ದು, ನಾಗಚೈತನ್ಯ ಜತೆಗೆ ವಾಸವಿದ್ದ ಮನೆಯನ್ನು ಸಮಂತಾ ಭಾರಿ ಮೊತ್ತಕ್ಕೆ ಖರೀದಿಸಿದ್ದಾರೆ ಎಂದು ಹೇಳಿಕೆ ನೀಡಿದ್ದಾರೆ.

ಇದೀಗ ಹಿರಿಯ ನಟ ಮುರಳಿ ಮೋಹನ್ ಅವರ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡಿದ್ದು, ವಿಚ್ಛೇದನದ ಮೊದಲು ನಾಗ ಚೈತನ್ಯ ಅವರೊಂದಿಗೆ ವಾಸವಾಗಿದ್ದ ಅದೇ ಮನೆಯನ್ನು ಸಮಂತಾ ಅವರು ಬಹು ವೆಚ್ಚದಲ್ಲಿ ಮರಳಿ ಖರೀದಿಸಿದ್ದಾರೆ ಎಂದು ಬಹಿರಂಗಪಡಿಸಿದ್ದಾರೆ.

ವರದಿಗಳ ಪ್ರಕಾರ, ಸಮಂತಾ ಅದರ ಹಿಂದಿನ ಮಾಲೀಕರಿಗೆ ಉತ್ತಮ ಲಾಭವನ್ನು ನೀಡುವ ಮೂಲಕ ಮನೆಯನ್ನು ಮರು ಖರೀದಿಸಿದ್ದಾರೆ. ಸಂದರ್ಶನದಲ್ಲಿ, ಮುರಳಿ ಮೋಹನ್ ಅವರು ಸಮಂತಾ ಮತ್ತು ನಾಗ ಚೈತನ್ಯ ಅವರ ವಿಚ್ಛೇದನದ ಕುರಿತು ಹಂಚಿಕೊಂಡರು.

ಇದನ್ನೂ ಓದಿ: Samantha Ruth Prabhu: ಸಮಂತಾಗೆ ದೇವಸ್ಥಾನ ಕಟ್ಟಿದ ಅಭಿಮಾನಿ; ತೀರ್ಥಯಾತ್ರೆ ಸಹ ಮಾಡಿದ್ದ!

ನಟ ಮುರಳಿ ಮೋಹನ್ ಹೇಳಿಕೆ ನೀಡಿರುವ ವಿಡಿಯೊ

ʻʻದಂಪತಿ ಒಟ್ಟಿಗೆ ಜಿಮ್‌ನಲ್ಲಿ ಸಾಕಷ್ಟು ಸಮಯ ಕಳೆಯುತ್ತಿದ್ದರು. ತಮ್ಮ ಪಾರ್ಟಿಗಳಿಂದ ಅಥವಾ ಸಂಗೀತದಿಂದ ತಮ್ಮ ನೆರೆಹೊರೆಯವರಿಗೆ ಯಾವುದೇ ತೊಂದರೆಯನ್ನು ಉಂಟುಮಾಡಲಿಲ್ಲ. ಅವರು ತುಂಬಾ ಶಾಂತವಾಗಿದ್ದರು. ದುರದೃಷ್ಟವಶಾತ್, ಅವರು ಬೇರೆಯಾಗುತ್ತಾರೆ ಎಂದು ನಾನು ಕನಸು ಕಂಡಿರಲಿಲ್ಲ. ವಿಷಯ ತಿಳಿದಾಗ ನನಗೆ ಆಘಾತವಾಯಿತು,” ಎಂದು ಅವರು ಹೇಳಿದರು.

ಸಮಂತಾ ಸಿಟಾಡೆಲ್‌ನ ಭಾರತೀಯ ಆವೃತ್ತಿಯಲ್ಲಿ ವರುಣ್ ಧವನ್ ಜತೆಗೆ ನಟಿಸಲಿದ್ದಾರೆ. ಸಿಟಾಡೆಲ್‌ ಪ್ರಿಯಾಂಕಾ ಚೋಪ್ರಾ ಜೋನಾಸ್, ರಿಚರ್ಡ್ ಮ್ಯಾಡೆನ್ ಮತ್ತು ಸ್ಟಾನ್ಲಿ ಟುಸಿ ನಟಿಸಿರುವ ಅಮೆರಿಕನ್ ಸಿರೀಸ್‌ ರಿಮೇಕ್ ಆಗಿದೆ. ಶಿವ ನಿರ್ವಾಣ ನಿರ್ದೇಶನದ ಮುಂಬರುವ ಚಿತ್ರದಲ್ಲಿ ಅವರು ಕಾಶ್ಮೀರಿ ಹುಡುಗಿಯ ಪಾತ್ರವನ್ನು ಸಹ ಮಾಡಲು ಸಿದ್ಧರಾಗಿದ್ದಾರೆ. ಈ ʻಖುಷಿʼ ಸಿನಿಮಾದಲ್ಲಿ ವಿಜಯ್ ದೇವರಕೊಂಡ ಮತ್ತು ಮುರಳಿ ಶರ್ಮಾ ಕೂಡ ಪ್ರಮುಖ ಪಾತ್ರಗಳಲ್ಲಿ ನಟಿಸಲಿದ್ದಾರೆ.

Exit mobile version