ಚೆನ್ನೈ: ದಕ್ಷಿಣ ಭಾರತದ ಪ್ರಸಿದ್ಧ ನಟಿ ಸಮಂತಾ (Samantha Ruth Prabhu) ಅಪರೂಪದ ಕಾಯಿಲೆಯಿಂದ ಬಳಲುತ್ತಿರುವ ವಿಚಾರ ಎಲ್ಲರಿಗೂ ತಿಳಿದಿರುವಂತದ್ದು. ಹೀಗಿರುವಾಗ ಅವರು ತಮಿಳುನಾಡಿನ ಪಳನಿ ಮುರುಗನ್ ಸ್ವಾಮಿ ದೇವಸ್ಥಾನದಲ್ಲಿ 600 ಮೆಟ್ಟಿಲುಗಳನ್ನು ಹತ್ತಿ ದೇವರ ದರ್ಶನ ಮಾಡಿರುವುದಾಗಿ ವರದಿಯಾಗಿದೆ.
ಇದನ್ನೂ ಓದಿ: Samantha: ಸಮಂತಾ ಅಭಿನಯದ ಪೌರಾಣಿಕ ಚಿತ್ರ ʻಶಾಕುಂತಲಂʼ ಬಿಡುಗಡೆ ದಿನಾಂಕ ಬದಲಾವಣೆ
ಸಮಂತಾ ಮುರುಗನ್ ಸ್ವಾಮಿ ದೇವಸ್ಥಾನದ ಮೆಟ್ಟಿಲುಗಳನ್ನು ಹತ್ತಿರುವುದಷ್ಟೇ ಅಲ್ಲದೆ ಪ್ರತಿ ಮೆಟ್ಟಿಲಿಗೆ ಕರ್ಪೂರವನ್ನೂ ಹಚ್ಚಿದ್ದಾರೆ. ನಟಿಗೆ ನಿರ್ದೇಶಕ ಸಿ.ಪ್ರೇಮ್ ಕುಮಾರ್ ಕೂಡ ಸಾಥ್ ನೀಡಿದ್ದಾರೆ. ನಟಿ ಮೆಟ್ಟಿಲುಗಳನ್ನು ಹತ್ತುವ ಫೋಟೋಗಳನ್ನು ಅವರ ಅಭಿಮಾನಿ ಟ್ವಿಟರ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಆ ಪೋಸ್ಟ್ ಅನ್ನು ಅನೇಕರು ಮೆಚ್ಚಿದ್ದು, ನಟಿಯ ದೈವ ಭಕ್ತಿಗೆ ಸಲಾಂ ಎನ್ನಲಾರಂಭಿಸಿದ್ದಾರೆ.
ಸಮಂತಾ ಮಯೋಸಿಟಿಸ್ ಕಾಯಿಲೆಯಿಂದ ಬಳಲುತ್ತಿರುವುದಾಗಿ 2022ರಲ್ಲಿ ಹೇಳಿಕೊಂಡಿದ್ದರು. ತಾವು ಪಡೆಯುತ್ತಿರುವ ಚಿಕಿತ್ಸೆಯ ಕುರಿತಾಗಿ ಕಳೆದ ತಿಂಗಳು ಪೋಸ್ಟ್ ಒಂದನ್ನು ಮಾಡಿದ್ದು, ಅಭಿಮಾನಿಗಳು ನಟಿಗೆ ಅನುಕಂಪ ತೋರಿಸಿದ್ದರು. ಇದರ ನಡುವೆಯೇ ಸಮಂತಾ ‘ಶಾಕುಂತಲಂ’ ಸಿನಿಮಾದಲ್ಲಿ ನಟಿಸಿದ್ದು, ಸಿನಿಮಾ ಬಿಡುಗಡೆಯಾಗುವುದಕ್ಕೆ ಸಿದ್ಧವಾಗಿದೆ.