Site icon Vistara News

Samantha Ruth Prabhu: ಶಾರ್ಟ್‌ ಹೇರ್‌ನಲ್ಲಿ ಕ್ಯೂಟಾಗಿ ಕಂಡ ಸಮಂತಾ; ಬಾಲಿಯಲ್ಲಿ ಸ್ಯಾಮ್‌ ಜಾಲಿ

Samantha Ruth Prabhu short hair

ಬೆಂಗಳೂರು: ಟಾಲಿವುಡ್‌ ನಟಿ ಸಮಂತಾ (Samantha Ruth Prabhu) ಸದ್ಯ ಇತೀಚೆಗಷ್ಟೇ ಸದ್ಗುರು ಇಶಾ ಫೌಂಡೇಶನ್​ನಲ್ಲಿ ಧ್ಯಾನ ಮಗ್ನರಾಗಿರುವ ಫೋಟೊ ಹಂಚಿಕೊಂಡಿದ್ದರು. ಈ ಬಗ್ಗೆ ಅವರ ಫ್ಯಾನ್ಸ್‌ ಬೇಸರ ಹೊರಹಾಕಿದ್ದರು. ಇದೀಗ ನಟಿ ಶಾರ್ಟ್ ಹೇರ್ ಕಟ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಸಮಂತಾ ಈ ಹೊಸ ಲುಕ್‌ ಕಂಡು “ಓ ಬೇಬಿ” ಸಿನಿಮಾ ನೆನಪಾಗುತ್ತಿದೆ ಎಂದು ನೆಟ್ಟಿಗರು ಕಮೆಂಟ್ ಮಾಡುತ್ತಿದ್ದಾರೆ. ಅಷ್ಟೇ ಅಲ್ಲದೇ ಸಮಂತಾ ಅವರು ಬಾಲಿಗೆ ತೆರಳಿದ್ದಾರೆ. ಈ ಫೋಟೊಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಸಮಂತಾ ನ್ಯೂ ಲುಕ್ ನೋಡಿ ಕೂಡ ಫ್ಯಾನ್ಸ್ ಖುಷಿ ಆಗಿದ್ದಾರೆ

ನಟಿ ಸಮಂತಾ ಬಾಲಿಯಲ್ಲಿ ಎಂಜಾಯ್‌ ಮಾಡುತ್ತಿರುವ ಫೋಟೊ ಜತೆಗೆ ಹೊಸ ಹೇರ್‌ಕಟ್‌ನಲ್ಲಿ ಮುದ್ದಾಗಿ ಕಂಡಿದ್ದಾರೆ. ಕ್ಯೂಟ್‌ ವಿಡಿಯೊ ಕೂಡ ಶೇರ್‌ ಮಾಡಿದ್ದಾರೆ. ವಿಡಿಯೊಗೆ ಪ್ರತಿಕ್ರಿಯಿಸಿದ ಅಭಿಮಾನಿಯೊಬ್ಬರು “ನೀವು ಜೀವನದ ನಿಜವಾದ ಅರ್ಥವನ್ನು ಅರ್ಥಮಾಡಿಕೊಂಡಿದ್ದೀರಿ ಎಂದು ತೋರುತ್ತಿದೆ, ನಾನು ನಿಮ್ಮ ಬಗ್ಗೆ ತುಂಬಾ ಸಂತೋಷವಾಗಿದ್ದೇನೆ” ಎಂದು ಬರೆದಿದ್ದಾರೆ. ಹನ್ಸಿಕಾ ಮೋಟ್ವಾನಿ, “ಎಂದಿಗೂ ಬ್ಯೂಟಿಫುಲ್” ಎಂದು ಪ್ರತಿಕ್ರಿಯಿಸಿದ್ದಾರೆ. ಗಾಯಕಿ ಸೋಫಿ ಚೌದ್ರಿ “ಗಾರ್ಜಿಯಸ್ ಗರ್ಲ್” ಎಂದು ಕಮೆಂಟ್‌ ಮಾಡಿದ್ದಾರೆ.

ಬಾಲಿಯ ಫೋಟೊಗಳನ್ನೂ ಹಂಚಿಕೊಂಡಿರುವ ಸಮಂತಾ ಅವರ ಟೋಪಿ ಎಲ್ಲರ ಗಮನ ಸೆಳೆದಿದೆ. ಈ ಟೋಪಿ ಮೇಲೆ ‘ಡ್ರೀಮ್ಸ್ ಆನ್’ ಎಂದು ಬರೆದುಕೊಂಡಿದ್ದಾರೆ. ಸಮಂತಾ ಜತೆ ಅವರ ಫಿಟ್ನೆಸ್ ಟ್ರೇನರ್ ಅನುಷಾ ಸ್ವಾಮಿ ಕೂಡ ತೆರಳಿದ್ದಾರೆ. ಈ ಫೋಟೊಗೆ ಫ್ಯಾನ್ಸ್ ಕಡೆಯಿಂದ ಲೈಕ್ಸ್ ಸಿಕ್ಕಿದೆ.

ಇದನ್ನೂ ಓದಿ: Nandita Swetha: ಸಮಂತಾರಂತೆ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಾರೆ ʻಜಿಂಕೆ ಮರಿʼ ನಂದಿತಾ ಶ್ವೇತಾ

ಸಿನಿಮಾದಿಂದ ಬ್ರೇಕ್‌ ಪಡೆದುಕೊಂಡ ನಟಿ

ನಟಿ ಸಮಂತಾ (Samantha Ruth Prabhu) ಒಪ್ಪಿಕೊಂಡ ಸಿನಿಮಾ, ವೆಬ್ ಸಿರೀಸ್‌ ಚಿತ್ರೀಕರಣ ಮುಗಿಸಿಕೊಟ್ಟಿದ್ದಾರೆ. ಯಾವುದೇ ಹೊಸ ಸಿನಿಮಾ ಒಪ್ಪಿಕೊಂಡಿಲ್ಲ ಬದಲಿಗೆ ಒಂದು ವರ್ಷ ಸಿನಿಮಾಗಳಿಂದ ವಿರಾಮ ಪಡೆದಿದ್ದಾರೆ. ಕೊಯಮತ್ತೂರಿನ ಸದ್ಗುರುಗಳ ಇಶಾ ಫೌಂಡೇಶನ್‌ಗೆ ಸಮಂತಾ ಇತ್ತೀಚೆಗೆ ಭೇಟಿ ನೀಡಿದ್ದರು.

ಈ ತಿಂಗಳ ಆರಂಭದಲ್ಲಿ, ಸಮಂತಾ ತಮ್ಮ ಆರೋಗ್ಯದ ಮೇಲೆ ಕೇಂದ್ರೀಕರಿಸಲು ಕೆಲಸದಿಂದ ವಿರಾಮ ತೆಗೆದುಕೊಳ್ಳುತ್ತಿದ್ದಾರೆ ಎಂದು ವರದಿಯಾಗಿತ್ತು. ನಟಿ ಮೈಯೋಸಿಟಿಸ್ ಎಂಬ ಆಟೋಇಮ್ಯೂನ್ ಕಾಯಿಲೆಯಿಂದ ಬಳಲುತ್ತಿದ್ದಾರೆ. ಖುಷಿ ಸೆಪ್ಟೆಂಬರ್‌ನಲ್ಲಿ ಬಿಡುಗಡೆಯಾಗಲಿದೆ. ಸಿಟಾಡೆಲ್ ಇಂಡಿಯಾ ಇನ್ನೂ ಬಿಡುಗಡೆ ದಿನಾಂಕವನ್ನು ಪ್ರಕಟಿಸಿಲ್ಲ. ಖುಷಿ ಸಿನಿಮಾದಲ್ಲಿ, ಸಮಂತಾ ವಿಜಯ್ ದೇವರಕೊಂಡ ಅವರೊಂದಿಗೆ ನಟಿಸಿದರೆ, ರಾಜ್ ಮತ್ತು ಡಿಕೆ ಸಿರೀಸ್‌ ಸಿಟಾಡೆಲ್‌ನಲ್ಲಿ ವರುಣ್ ಧವನ್ ಜತೆ ತೆರೆ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: Samantha Ruth Prabhu: ಸಿನಿಮಾದಿಂದ ಬ್ರೇಕ್‌ ಪಡೆದು ಸದ್ಗುರು ಸಂಘ ಸೇರಿ ಧ್ಯಾನಸ್ಥರಾದ ಸಮಂತಾ!

ಖುಷಿ ಚಿತ್ರವನ್ನು ಶಿವ ನಿರ್ವಾಣ ನಿರ್ದೇಶಿಸುತ್ತಿದ್ದಾರೆ. ವಿಜಯ್ ದೇವರಕೊಂಡ, ಸಮಂತಾ, ಜಯರಾಮ್, ಸಚಿನ್ ಖೇಡಕರ್, ಮುರಳಿ ಶರ್ಮಾ, ಲಕ್ಷ್ಮೀ, ಅಲಿ, ರೋಹಿಣಿ, ವೆನ್ನೆಲ ಕಿಶೋರ್, ರಾಹುಲ್ ರಾಮಕೃಷ್ಣ, ಶ್ರೀಕಾಂತ್ ಅಯ್ಯಂಗಾರ್, ಶರಣ್ ಮುಂತಾದ ಅದ್ಭುತ ನಟ, ನಟಿಯರು ಈ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಈ ಚಿತ್ರಕ್ಕೆ, ಪೀಟರ್ ಹೆನ್ಸ್ ಸಾಹಸ ನಿರ್ದೇಶನ, ಪ್ರವೀನ್ ಪುಡಿ ಅವರ ಸಂಕಲನ, ಜಿ ಮುರಳಿ ಕ್ಯಾಮೆರಾ ಕೆಲಸ ಮಾಡಿದೆ. ಹೇಶಮ್ ಅಬ್ದುಲ್ ವಹಾಬ್ ಅವರ ಸಂಗೀತವಿದೆ. ಮೈತ್ರಿ ಮೂವಿ ಮೇಕರ್ಸ್ ಈ ಚಿತ್ರವನ್ನು ನಿರ್ಮಿಸುತ್ತಿದೆ. ತೆಲುಗು, ತಮಿಳು, ಮಲಯಾಳಂ ಮತ್ತು ಕನ್ನಡದಲ್ಲಿ ಚಿತ್ರ ಬಿಡುಗಡೆಯಾಗುತ್ತಿದೆ ಎಂದು ಚಿತ್ರತಂಡ ಮಾಹಿತಿ ನೀಡಿದೆ.

Exit mobile version