Site icon Vistara News

Samantha Ruth Prabhu: ಟೀಕೆಗೆ ಗುರಿಯಾದ ಸಮಂತಾ; ʻಕರ್ಮ ರಿಟರ್ನ್ಸ್‌ʼ ಅಂದ್ರು ನೆಟ್ಟಿಗರು!

Samantha Vijaydevarakonda

ಬೆಂಗಳೂರು: ವಿಜಯ್ ದೇವರಕೊಂಡ ಹಾಗೂ ಸಮಂತಾ (Samantha Ruth Prabhu) ನಟನೆಯ ʼಖುಷಿʼ ಸಿನಿಮಾದ ಎರಡನೇ ಹಾಡು ʻಆರಾಧ್ಯʼ ಬಿಡುಗಡೆಗೊಂಡಿದೆ. ಹಾಡಿನಲ್ಲಿ ವಿಜಯ್ ದೇವರಕೊಂಡ ಅವರು ಸಮಂತಾ ರುತ್ ಪ್ರಭು ಭುಜದ ಮೇಲೆ ಕಾಲನ್ನು ಇಟ್ಟಿರುವ ದೃಶ್ಯ ಇದೆ. ಈ ದೃಶ್ಯವನ್ನು ಸಮಂತಾ ಈ ಹಿಂದೆ ಮಾಡಿದ್ದ ಟ್ವೀಟ್ ಜತೆ ಹೋಲಿಕೆ ಮಾಡಿ ನೆಟ್ಟಿಗರು ಟ್ರೋಲ್ ಮಾಡುತ್ತಿದ್ದಾರೆ. ಇದೀಗ ನಟಿ ಟೀಕೆಗೆ ಗುರಿಯಾಗಿದ್ದಾರೆ.

ಸಮಂತಾ ಹಳೆಯ ಟ್ವೀಟ್‌ ಏನು?

2013ರಲ್ಲಿ ಮಹೇಶ್ ಬಾಬು ನಟನೆಯ ಬಹು ನಿರೀಕ್ಷಿತ ಚಿತ್ರ ‘ಒನ್ ನೋನೊಕ್ಕಡಿನೆ'(one nenokkadine) ಬಿಡುಗಡೆಯಾಗಿತ್ತು. ಈ ಪೋಸ್ಟರ್‌ನಲ್ಲಿ ಮಹೇಶ್ ಬಾಬು ಕಡಲ ತೀರದಲ್ಲಿ ಚಪ್ಪಲಿ ಹಿಡಿದು ನಡೆದುಕೊಂಡು ಹೋಗುತ್ತಿದ್ದರೆ, ಹಿಂದೆ ನಾಯಕಿ ಕೃತಿ ಸನೂನ್‌ ಮಹೇಶ್ ಬಾಬು ಅವರನ್ನು ಹಿಂಬಾಲಿಸುತ್ತಿದ್ದರು. ಈ ಪೋಸ್ಟರ್ ಕುರಿತು ಕಮೆಂಟ್ ಮಾಡಿದ್ದ ಸಮಂತಾ, ಬಿಡುಗಡೆಯಾಗಬೇಕಿರುವ ತೆಲುಗು ಸಿನಿಮಾವೊಂದರ ಪೋಸ್ಟರ್ ಕಂಡೆ, ಅದು ಅತಿರೇಕವಾಗಿದೆ ಎಂದು ಟ್ವೀಟ್ ಮಾಡಿದ್ದರು. ಈ ಪೋಸ್ಟರ್‌ನಲ್ಲಿ ನಾಯಕಿ ಪ್ರಾಣಿಗಳಂತೆ ನಾಯಕನನ್ನು ಹಿಂಬಾಲಿಸುವುದು ತಪ್ಪು, ಅದು ಹೆಣ್ಣಿಗೆ ಮಾಡಿದ ಅವಮಾನ ಎಂಬರ್ಥದಲ್ಲಿ ಸಮಂತಾ ಟ್ವೀಟ್‌ನಲ್ಲಿ ಬರೆದುಕೊಂಡಿದ್ದರು.

ಸಮಂತಾ ಹಳೆಯ ಟ್ವೀಟ್‌

ಇದೀಗ ನೆಟ್ಟಿಗರು ಸಮಂತಾ ನೀಡಿರುವ ಹೇಳಿಕೆಯನ್ನು ನೆನಪಿಸುತ್ತಿದ್ದಾರೆ. ಖುಷಿ ತೆಲುಗು ಚಿತ್ರದ ಪೋಸ್ಟರ್ ನೋಡಿದೆ. “ಕರ್ಮ ರಿಟರ್ನ್ಸ್‌ʼʼ ಎಂದೊಬ್ಬರು ಕಮೆಂಟ್‌ ಮಾಡಿದ್ದಾರೆ. ಈ ದೃಶ್ಯವನ್ನು ಸಮಂತಾ ಮಾಡಿದ್ದ ಟ್ವೀಟ್ ಜತೆ ಹೋಲಿಕೆ ಮಾಡಿ ಅಂದು ನೀವು ವಿರೋಧಿಸಿದ್ದಕ್ಕಿಂತ ಕೆಟ್ಟದಾಗಿ ಇಂದು ನಿಮ್ಮನ್ನು ಚಿತ್ರವೊಂದಕ್ಕೆ ಬಳಸಿಕೊಂಡಿದ್ದಾರೆ ಎಂದು ಟ್ರೋಲ್ ಮಾಡುತ್ತಿದ್ದಾರೆ.

ಇದನ್ನೂ ಓದಿ: Samantha Ruth Prabhu: ವಿಜಯ್ ದೇವರಕೊಂಡ- ಸಮಂತಾ ʻಗಟ್ಟಿಮೇಳʼ; ವಿಡಿಯೊ ವೈರಲ್‌!

ಸಮಂತಾ ರುತ್ ಪ್ರಭು ಅವರು ನಟನೆಯಿಂದ ಸ್ವಲ್ಪ ಬ್ರೇಕ್‌ ತೆಗೆದುಕೊಳ್ಳುತ್ತಿರುವುದನ್ನು ಕನ್‌ಫರ್ಮ್‌ ಮಾಡಿದ್ದಾರೆ. ಸಮಂತಾ ಸದ್ಯ ಖುಷಿ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬರಲು ಸಜ್ಜಾಗಿದ್ದಾರೆ. ʼಖುಷಿʼ ಸಿನಿಮಾದಲ್ಲಿ ಎರಡು ಶೇಡ್‌ಗಳಲ್ಲಿ ಕಾಣಿಸಿಕೊಂಡಿದ್ದಾರೆ. ಮುಸ್ಲಿಂ ಯುವತಿ ಹಾಗೂ ಗೃಹಿಣಿಯಾಗಿ ಕಾಣಿಸಿಕೊಂಡಿದ್ದಾರೆ. ಸಿಟಾಡೆಲ್‌ನಲ್ಲಿ ಸಮಂತಾ ಬಾಲಿವುಡ್ ನಟ ವರುಣ್ ಧವನ್‌ ಜತೆ ನಟಿಸುತ್ತಿದ್ದಾರೆ.

Exit mobile version