Site icon Vistara News

Samantha Ruth Prabhu: ಕ್ಯಾಮೆರಾಗಳ ಫ್ಲ್ಯಾಷ್‌ನಿಂದ ತೊಂದರೆಗೊಳಗಾದ ಸಮಂತಾ; ಆಗಿದ್ದೇನು?

Samantha Ruth Prabhu gets uncomfortable as camera flash

ಬೆಂಗಳೂರು: ನಟಿ ಸಮಂತಾ(Samantha Ruth Prabhu) ಸದ್ಯ ತಾವು ನಟಿಸಿರುವ ಶಾಕುಂತಲಂ ಸಿನಿಮಾ ಪ್ರಚಾರ ಕಾರ್ಯಗಳಲ್ಲಿ ಬ್ಯುಸಿಯಾಗಿದ್ದಾರೆ. ಮೈಯೊಸಿಟಿಸ್‌ ಕಾಯಿಲೆ ಬಳಿಕ ನಟಿ ಮತ್ತೆ ಸಿನಿಮಾ ಶೂಟಿಂಗ್‌ನಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಆದರೆ ಇದೀಗ ನಟಿ ಸಮಂತಾ ಇನ್ನೂ ತನ್ನ ಆರೋಗ್ಯದ ಸ್ಥಿತಿಯೊಂದಿಗೆ ಹೋರಾಡುತ್ತಿರುವಂತೆ ತೋರುತ್ತಿದೆ. ಏಪ್ರಿಲ್‌ 5ರಂದು ನಟಿ ಶಾಕುಂತಲಂ ಸಿನಿಮಾದ 3D ಟ್ರೈಲರ್ ಬಿಡುಗಡೆ ಮಾಡಲು ಮುಂಬೈನಲ್ಲಿದ್ದರು. ನಟಿ ಬರುತ್ತಿದ್ದಂತೆ ಫೋಟೊಗ್ರಾಫರ್‌ಗಳು ಫೋಟೊ ಕ್ಲಿಕ್ ಮಾಡಲು ಪ್ರಾರಂಭಿಸಿದಾಗ ನಟಿ ತೊಂದರೆಗೊಳಗಾಗಿದ್ದಂತೆ ರಿಯಾಕ್ಟ್‌ ಮಾಡಿದ್ದಾರೆ.

ಮಾಧ್ಯಮಗಳು ಶೇರ್‌ ಮಾಡಿಕೊಂಡಿರುವ ವಿಡಿಯೊದಲ್ಲಿ ನಟಿ ಸಮಂತಾ ಹೊರ ಬರುತ್ತಿದ್ದಂತೆ ಫೋಟೊಗ್ರಾಫರ್‌ಗಳು ಫೋಟೊ ಕ್ಲಿಕ್ ಮಾಡಲು ಪ್ರಾರಂಭಿಸಿದಾಗ, ಕ್ಯಾಮೆರಾಗಳ ನಿರಂತರ ಫ್ಲ್ಯಾಷ್‌ನಿಂದ ಸಮಂತಾ ತೊಂದರೆಗೊಳಗಾಗುತ್ತಿರುವುದು ಕಂಡುಬಂದಿತು. ಫ್ಲ್ಯಾಷ್‌ನಿಂದ ತೊಂದರಕ್ಕೆ ಒಳಗಾದ ನಟಿ ತನ್ನ ಮುಖವನ್ನು ಮುಚ್ಚಿಕೊಳ್ಳಲು ಪ್ರಯತ್ನಿಸುತ್ತಿರುವು ಕಂಡು ಬಂತು. ಇಷ್ಟಾದರೂ ಸಮಂತಾ ನಗುತ್ತಲೇ ಫೋಟೊ ಕ್ಲಿಕ್ಕಿಸಲು ತಡೆಯಲು ಪ್ರಯತ್ನಿಸಿದ್ದಾರೆ.

ಇದೀಗ ಈ ವಿಡಿಯೊ ವೈರಲ್‌ ಆದ ಬೆನ್ನಲ್ಲೇ ನೆಟ್ಟಗರು ಕಾಮೆಂಟ್‌ ಮೂಲಕ “ನಿಜವಾಗಿಯೂ ದುಃಖವಾಗಿದೆ. ಫ್ಲ್ಯಾಶ್‌ಗಳನ್ನು ಆಫ್ ಮಾಡಬೇಕು” ಬರೆದಿದ್ದಾರೆ. ಮತ್ತೊಬ್ಬ ಬಳಕೆದಾರ, “ಸಮಂತಾ ಅವರ ಕಣ್ಣುಗಳಲ್ಲಿ ಸಮಸ್ಯೆ ಇದೆ,” ಎಂದು ಪ್ರತಿಕ್ರಿಯಿಸಿದ್ದಾರೆ. ಮತ್ತೊಬ್ಬರು, “ಈ ಜನರಿಗೆ ನಾಚಿಕೆಯಾಗಬೇಕು. ನಟಿ ಅನಾರೋಗ್ಯದಿಂದ ಬಳಲುತ್ತಿದ್ದಾರೆ, ಫ್ಲ್ಯಾಷ್ ಲೈಟ್ ಯಾತಕ್ಕೆʼʼಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: Samantha Ruth Prabhu: ರಾಕಿಂಗ್‌ ಸ್ಟಾರ್‌ ಯಶ್‌ರಂತೆ ʻರೈಸ್ ಅಪ್ ಬೇಬಿʼ ಎಂದು ಹೇಳಿದ್ಯಾಕೆ ಸಮಂತಾ?

ಫ್ಲ್ಯಾಷ್‌ನಿಂದ ತೊಂದರಕ್ಕೆ ಒಳಗಾದ ನಟಿ

ಏಪ್ರಿಲ್ 14ರಂದು ಶಾಕುಂತಲಂ ತೆರೆಗೆ

ತಮಿಳು, ತೆಲುಗು, ಮಲಯಾಳಂ, ಕನ್ನಡ ಮತ್ತು ಹಿಂದಿ ಸೇರಿದಂತೆ ಐದು ಭಾಷೆಗಳಲ್ಲಿ ಚಿತ್ರ ಬಿಡುಗಡೆಯಾಗುತ್ತಿದೆ. ದೇವ್ ಮೋಹನ್ ಸಮಂತಾ ಎದುರು ನಾಯಕ ನಟನಾಗಿ ನಟಿಸಲಿದ್ದಾರೆ. ಮಹಾಕವಿ ಕಾಳಿದಾಸನ ʻಅಭಿಜ್ಞಾನ ಶಾಕುಂತಲಂʼ ನಾಟಕವನ್ನು ಆಧರಿಸಿ ಚಿತ್ರ ನಿರ್ಮಾಣವಾಗಿದೆ. ರಾಜ ದುಷ್ಯಂತ ಪಾತ್ರದಲ್ಲಿ ದೇವ್ ಮೋಹನ್ ನಟಿಸಿದರೆ, ಶಾಕುಂತಲೆಯಾಗಿ ಸಮಂತಾ ಕಾಣಿಸಿಕೊಳ್ಳುತ್ತಿದ್ದಾರೆ. ಟಾಲಿವುಡ್‌ ನಟ ಅಲ್ಲು ಅರ್ಜುನ್‌ ಮಗಳು ಅರ್ಹಾ ಕೂಡ ಈ ಚಿತ್ರಕ್ಕೆ ಬಣ್ಣ ಹಚ್ಚಿದ್ದಾರೆ.

ಚಿತ್ರವನ್ನು ಗುಣಶೇಖರ್ ನಿರ್ದೇಶಿಸಿದ್ದಾರೆ. ನೀಲಿಮಾ ಗುಣ ಮತ್ತು ದಿಲ್ ರಾಜು ನಿರ್ಮಾಣ ಮಾಡಿದ್ದಾರೆ. ಸಚಿನ್ ಖೇಡೇಕರ್, ಅನನ್ಯ ನಾಗಲ್ಲ, ಮೋಹನ್ ಬಾಬು, ಗೌತಮಿ ಮತ್ತು ಅದಿತಿ ಬಾಲನ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

Exit mobile version