Site icon Vistara News

Samantha Ruth Prabhu: ರಶ್ಮಿಕಾ ಮಂದಣ್ಣ, ಕೀರ್ತಿ, ಅನುಷ್ಕಾ ಸೇರಿದಂತೆ ತಾರೆಗಳಿಂದ ಸಮಂತಾಗೆ ಪ್ರೀತಿಯ ವಿಶ್‌

Samantha Ruth Prabhu industry friends best wishes

ಬೆಂಗಳೂರು: ಟಾಲಿವುಡ್‌ ನಟಿ ಸಮಂತಾ (Samantha Ruth Prabhu) ಏಪ್ರಿಲ್‌ 28ರಂದು 36ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಅಪಾರ ಅಭಿಮಾನಿಗಳನ್ನು ಹೊಂದಿರುವ ನಟಿ ಸಮಂತಾ ಅವರಿಗೆ ಅಭಿಮಾನಿಗಳು, ಸೇರಿದಂತೆ ಸೆಲೆಬ್ರಿಟಿಗಳು ಶುಭಾಶಯ ಕೋರಿದ್ದಾರೆ. ಅನುಷ್ಕಾ ಶರ್ಮಾ, ರಶ್ಮಿಕಾ ಮಂದಣ್ಣ, ಕೀರ್ತಿ ಸುರೇಶ್ ಹೀಗೆ ಪ್ರಮುಖ ತಾರೆಯರು ಸೋಷಿಯಲ್‌ ಮೀಡಿಯಾ ಮೂಲಕ ನಟಿ ಸಮಂತಾ ಅವರಿಗೆ ಶುಭ ಹಾರೈಸಿದ್ದಾರೆ.

ನ್ಯಾಶನಲ್‌ ಕ್ರಶ್‌ ರಶ್ಮಿಕಾ ಮಂದಣ್ಣ ಇನ್‌ಸ್ಟಾ ಸ್ಟೋರಿಯಲ್ಲಿ ʻ“ಜನ್ಮದಿನದ ಶುಭಾಶಯಗಳು. ಪ್ರೀತಿ, ಅಪ್ಪುಗೆಗಳು. ಯಾವಾಗಲೂ ನಗುತ್ತೀರಿʼʼಎಂದು ಪೋಸ್ಟ್‌ ಹಂಚಿಕೊಂಡಿದ್ದಾರೆ. ನಟಿ ಕೀರ್ತಿ ಸುರೇಶ್ ಮತ್ತು ಅನುಷ್ಕಾ ಶರ್ಮಾ ಕೂಡ ವಿಶೇಷವಾಗಿ ವಿಶ್‌ ಮಾಡಿದ್ದಾರೆ. ನಿರ್ದೇಶಕ ನಾಗ್ ಅಶ್ವಿನ್ ಅವರು ಸಮಂತಾ ಜತೆ ಕೆಲಸ ಮಾಡಿದ “ಮಹಾನತಿ” ಶೂಟಿಂಗ್ ಸೆಟ್‌ ಚಿತ್ರವನ್ನು ಪೋಸ್ಟ್ ಮಾಡಿ ವಿಶ್‌ ಮಾಡಿದ್ದಾರೆ.

ಇದನ್ನೂ ಓದಿ;Samantha Ruth Prabhu: ನಾಗಚೈತನ್ಯ ಜತೆಗೆ ವಾಸವಿದ್ದ ಮನೆಯನ್ನೇ ಭಾರಿ ಮೊತ್ತಕ್ಕೆ ಖರೀದಿಸಿದ್ರಾ ಸಮಂತಾ?

ಸೆಲೆಬ್ರಿಟಿಗಳ ವಿಶಸ್‌

ಸಿಟಾಡೆಲ್ (Citadel) ಯೂನಿವರ್ಸ್‌ನ ಭಾರತೀಯ ಕಂತು, ಪ್ರೈಮ್ ವಿಡಿಯೊ ಮತ್ತು ರುಸ್ಸೋ ಬ್ರದರ್ಸ್‌ ಜಾಗತಿಕ-ಈವೆಂಟ್ ಸಿರೀಸ್‌ನಲ್ಲಿ ವರುಣ್ ಧವನ್, ಸಮಂತಾ ನಾಯಕ ನಾಯಕಿಯಾಗಿದ್ದಾರೆ. ಭಾರತದಿಂದ ಹೊರಗಿರುವ ಸಿಟಾಡೆಲ್ ಸಿರೀಸ್‌ ಹೆಸರಾಂತ ರಚನೆಕಾರ ಜೋಡಿ ರಾಜ್ ಮತ್ತು ಡಿಕೆ (ರಾಜ್ ನಿಡಿಮೋರು ಮತ್ತು ಕೃಷ್ಣ ಡಿಕೆ) ಅವರು ನಿರ್ದೇಶಿಸುತ್ತಿದ್ದಾರೆ.

ರಾಜ್ ನಿಡಿಮೋರು ಮತ್ತು ಕೃಷ್ಣ ಡಿಕೆ ಅವರು ತಮ್ಮ ಬ್ಯಾನರ್ ಡಿ2ಆರ್ ಫಿಲ್ಮ್ಸ್ ಅಡಿಯಲ್ಲಿ ಕಾರ್ಯಕಾರಿ ನಿರ್ಮಾಪಕರಾಗಿಯೂ ಕಾರ್ಯನಿರ್ವಹಿಸಲಿದ್ದಾರೆ. ಈ ಸರಣಿಯನ್ನು D2R ಫಿಲ್ಮ್ಸ್ ಮತ್ತು ಅಮೆಜಾನ್ ಸ್ಟುಡಿಯೋಸ್ ನಿರ್ಮಿಸಿದೆ.


Exit mobile version