ಬೆಂಗಳೂರು: ಸಮಂತಾ ರುತ್ ಪ್ರಭು (Samantha Ruth Prabhu) ಹಾಗೂ ನಾಗ ಚೈತನ್ಯ ಡಿವೋರ್ಸ್ ಪಡೆದಿರುವುದು ಇತ್ತೀಚೆಗೆ ಖಚಿತಪಡಿಸಿದ್ದಾರೆ. ಸಂದರ್ಶನವೊಂದರಲ್ಲಿ , ನಟ ನಾಗ ಚೈತನ್ಯ ತನ್ನ ಮಾಜಿ ಪತ್ನಿ ಸಮಂತಾ ಅವರನ್ನು ಹೊಗಳಿದ್ದು, ಅವರು ಒಬ್ಬ ʻʻಪ್ರೀತಿಯ ವ್ಯಕ್ತಿʼʼ ಎಂದು ಹೇಳಿಕೊಂಡಿದ್ದಾರೆ.
ನಾಗ ಚೈತನ್ಯ ಮಾತನಾಡಿ ʻʻಸಮಂತಾ ಅವರು ಒಬ್ಬ ʻʻಪ್ರೀತಿಯ ವ್ಯಕ್ತಿʼʼ . ಸಮಂತಾ ಎಲ್ಲ ಸಂತೋಷಕ್ಕೆ ಅರ್ಹರು. ಮಾಧ್ಯಮಗಳು ಊಹಾಪೋಹಗಳನ್ನು ಹರಡಿದಾಗ ಮಾತ್ರ ನಮ್ಮ ನಡುವೆ ಎಡವಟ್ಟಾಗುತ್ತದೆ. ಸಾರ್ವಜನಿಕರ ದೃಷ್ಟಿಯಲ್ಲಿ, ಪರಸ್ಪರ ಗೌರವವನ್ನು ಕಸಿದುಕೊಳ್ಳಲಾಗುತ್ತದೆʼʼಎಂದು ಮಾಧ್ಯಮವೊಂದಕ್ಕೆ ಹೇಳಿಕೆ ನೀಡಿದ್ದಾರೆ.
ಸಮಂತಾ ಮತ್ತು ಚೈತನ್ಯ 2017ರಲ್ಲಿ ವಿವಾಹವಾಗಿದ್ದರು. ಅಕ್ಟೋಬರ್ 2021ರಲ್ಲಿ ಡಿವೋರ್ಸ್ ಪಡೆದರು. ನಾಗಚೈತನ್ಯ ಅವರಿಂದ ವಿಚ್ಛೇದನ ಪಡೆದು ದೂರವಾದ ಬಳಿಕ ಪರಿಸ್ಥಿತಿ ಹೇಗಿತ್ತು ಎಂಬುದರ ಬಗ್ಗೆ ನಟಿ ಕಾಫಿ ವಿತ್ ಕರಣ್ ಶೋನಲ್ಲಿ ಹೇಳಿಕೊಂಡಿದ್ದರು. ಕೆಲ ಕಾಲ ತುಂಬ ಕಷ್ಟಕರವಾಗಿತ್ತು. ಆದರೆ, ಈಗ ಪರಿಸ್ಥಿತಿ ಸುಧಾರಿಸಿದ್ದು, ಹಿಂದೆಂದಿಗಿಂತಲೂ ಹೆಚ್ಚು ಬಲಶಾಲಿಯಾಗಿದ್ದೇನೆʼ ಎಂದು ತಿಳಿಸಿದ್ದರು.
ಶೋ ವೇಳೆ, ನಾಗ ಚೈತನ್ಯ ಅವರ ಮೇಲೆ ಅಸಮಾಧಾನ ಇದೆಯೇ ಸಮಂತಾ ಬಳಿ ಕರಣ್ ಕೇಳಿದಾಗ, “ನಮ್ಮಿಬ್ಬರನ್ನೂ ಒಂದು ಕೋಣೆಯಲ್ಲಿ ಇರಿಸಿದರೆ, ನೀವು ಚೂಪಾದ ವಸ್ತುಗಳನ್ನು ಮರೆಮಾಚಬೇಕಾಗುವುದುʼʼ ಎಂದು ವ್ಯಂಗ್ಯವಾಗಿ ಉತ್ತರಿಸಿದ್ದಾರೆ. ಅಂದರೆ, ಚಾಕುಗಳಂತಹ ಹರಿತವಾದ ಯಾವುದೇ ವಸ್ತುಗಳನ್ನು ಇಡಬೇಡಿ ಎಂಬ ಲೆಕ್ಕದಲ್ಲಿ ತಮ್ಮಿಬ್ಬರ ಅಸಮಾಧಾನದ ಹೊಗೆಯನ್ನು ಹೀಗೆ ವ್ಯಕ್ತಪಡಿಸಿದ್ದರು. ಈ ಮಾತನ್ನು ಮುಂದುವರಿಸಿ ಮುಂದಿನ ದಿನಗಳಲ್ಲಿ ಕಾಲ ಕೂಡಿಬಂದರೆ ನಾಗ ಚೈತನ್ಯ ಜತೆ ನಟಿಸುವುದಾಗಿಯೂ ಹೇಳಿಕೊಂಡಿದ್ದರು. ಈ ಬಗ್ಗೆ ಜನರು ಸಾಕಷ್ಟು ಟ್ರೋಲ್ ಮಾಡುವ ಕುರಿತು ಪ್ರತಿಕ್ರಿಯೆ ನೀಡಿದ ಸಮಂತಾ, ʻನಾನು ಈ ಮಾರ್ಗವನ್ನು ಆರಿಸಿಕೊಂಡಿದ್ದು ನನಗೆ ಖುಷಿ ಇದೆ. ಅದರ ಬಗ್ಗೆ ಅಸಮಾಧಾನವಿಲ್ಲ. ನನ್ನ ಜೀವನದಲ್ಲಿ ನಡೆದ ಘಟನೆಗಳಿಗೆ ಉತ್ತರಗಳನ್ನು ನೀಡುವುದು ನನ್ನ ಜವಾಬ್ದಾರಿಯಾಗಿತ್ತುʼ ಎಂದು ಹೇಳಿಕೊಂಡಿದ್ದರು.
ಇದನ್ನೂ ಓದಿ: Samantha Ruth Prabhu: ಚಿತ್ರಹಿಂಸೆಯ ಸಮಯ ಎಂದ ಸಮಂತಾ: ಏನಿದು ಐಸ್ ಬಾತ್ ಥೆರಪಿ?
ನಾಗ ಚೈತನ್ಯ ಪ್ರಸ್ತುತ ʻಕಸ್ಟಡಿʼ ಸಿನಿಮಾ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿದ್ದು, ಮೇ 12ರಂದು ಸಿನಿಮಾ ತೆರೆ ಕಾಣುತ್ತಿದೆ. ಮತ್ತೊಂದೆಡೆ, ಸಮಂತಾ ಕೊನೆಯದಾಗಿ ಶಾಕುಂತಲಂನಲ್ಲಿ ಕಾಣಿಸಿಕೊಂಡರು. ಮುಂದೆ ವಿಜಯ್ ದೇವರಕೊಂಡ ಅವರೊಂದಿಗೆ ʻಖುಷಿʼ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.