Site icon Vistara News

Samantha Ruth Prabhu: ವಿಚ್ಛೇದನ ಪಡೆದರೂ ಟ್ಯಾಟು ಉಳಿಸಿಕೊಂಡ ಸಮಂತಾ: ಫೋಟೊ ವೈರಲ್‌!

Samantha Ruth Prabhu Keeps Naga Chaitanya's Name Tattoo

ಬೆಂಗಳೂರು: ಟಾಲಿವುಡ್‌ ನಟಿ ಸಮಂತಾ (Samantha Ruth Prabhu) ಅವರು ಲಂಡನ್‌ನಲ್ಲಿ ನಡೆದ ಸಿಟಾಡೆಲ್‌ ಪ್ರೀಮಿಯರ್‌ನಲ್ಲಿ ಭಾಗಿಯಾಗಿದ್ದರು. ಅಷ್ಟೇ ಅಲ್ಲದೇ ನಟಿ ಮಿಂಚಿದ್ದರು. ಹಲವಾರು ಫೋಟೊಶೂಟ್‌ಗಳನ್ನು ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಇದೀಗ ನಟಿಯ ಪಕ್ಕೆಲುಬಿನ ಮೇಲೆ ಹಳೆಯ ಟ್ಯಾಟೂವನ್ನು ನೆಟ್ಟಿಗರು ಗುರುತಿಸಿದ್ದಾರೆ. ಮಾಜಿ ಪತಿ ನಾಗ ಚೈತನ್ಯ ಕುರಿತು ಚಾಯ್‌ ಎಂದು ನಟಿ ಟ್ಯಾಟೂ ಹಾಕಿಸಿಕೊಂಡಿದ್ದರು. ಇದೀಗ ನಟಿ ಮತ್ತೆ ಈ ಬಗ್ಗೆ ಸುದ್ದಿಯಲ್ಲಿದ್ದಾರೆ.

ಸಿಟಾಡೆಲ್‌ ಪ್ರೀಮಿಯರ್‌ನಲ್ಲಿ ಸಮಂತಾ ಕಂಗೊಳಿಸಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ ಸಮಂತಾ ಹಂಚಿಕೊಂಡ ಕೆಲವು ಚಿತ್ರಗಳಲ್ಲಿ, ನೆಟಿಜನ್‌ಗಳು ಸಮಂತಾ ದೇಹದ ಮೇಲೆ ಇರುವ ಚಾಯ್‌ ಟ್ಯಾಟೂವನ್ನು ಗಮನಿಸಿದ್ದು ಫೋಟೊಗಳ ಕುರಿತು ಕಾಮೆಂಟ್‌ ಮಾಡುತ್ತಿದ್ದಾರೆ. ವಿಚ್ಛೇದನದ ಹೊರತಾಗಿಯೂ ಸಮಂತಾ ಇನ್ನೂ ಚಾಯ್ ಅವರ ಟ್ಯಾಟೂ ಇಟ್ಟುಕೊಂಡಿದ್ದಾರೆ ಎಂದು ನೆಟ್ಟಿಗರು ಕಾಮೆಂಟ್‌ ಮಾಡುತ್ತಿದ್ದಾರೆ.

ಸಮಂತಾ ತನ್ನ ಚೊಚ್ಚಲ ಚಿತ್ರ ʼಯೇ ಮಾಯಾ ಚೇಸಾವೆʼಗೆ ಈ ಟ್ಯಾಟೂವನ್ನು ಅರ್ಪಿಸಿದ್ದಾರೆ. ಈ ಸಿನಿಮಾ 2010ರಲ್ಲಿ ಬಿಡುಗಡೆಯಾಯಿತು, ನಾಗ ಚೈತನ್ಯ ಜತೆ ತೆರೆ ಹಂಚಿಕೊಂಡಿದ್ದರು. ಸ್ಯಾಮ್ ಅವರ ಬಲಗೈಯಲ್ಲಿಯೂ ಒಂದು ಟ್ಯಾಟೂ ಇದೆ. ಈ ಟ್ಯಾಟೂಗೆ ನಾಗ ಚೈತನ್ಯ ತಮ್ಮ ಮದುವೆಯ ದಿನಾಂಕವನ್ನೂ ಸೇರಿಸಿದ್ದಾರೆ. ಸಮಂತಾ ಮತ್ತು ಚೈತನ್ಯ 2017ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಅಕ್ಟೋಬರ್ 2021ರಲ್ಲಿ ವಿಚ್ಛೇದನ ಪಡೆದರು.

ಇದನ್ನೂ ಓದಿ: Samantha Ruth Prabhu: ʻಶಾಕುಂತಲಂʼ ಸೋಲಿನ ಬೆನ್ನಲ್ಲೇ ಪ್ಯಾನ್ ಇಂಡಿಯಾ ಸಿನಿಮಾಗಳಿಂದ ಬ್ರೇಕ್ ತಗೊಂಡ್ರಾ ಸಮಂತಾ?

ಟಾಲಿವುಡ್‌ ನಟಿ ಸಮಂತಾ ರುತ್ ಪ್ರಭು (Samantha Ruth Prabhu) ಅವರ ಇತ್ತೀಚಿಗೆ ಬಿಡುಗಡೆಯಾದ ಶಾಕುಂತಲಂ ಸಿನಿಮಾ ಅಷ್ಟಾಗಿ ಯಶಸ್ಸು ಕಂಡಿಲ್ಲ. ಪ್ರೇಕ್ಷಕರ ನಿರೀಕ್ಷೆಗಳನ್ನು ಪೂರೈಸುವಲ್ಲಿ ವಿಫಲವಾಗಿದೆ. ಬಿಡುಗಡೆಯಾದ ಒಂದು ವಾರದ ನಂತರವೂ 60 ಕೋಟಿ ರೂ. ಬಜೆಟ್‌ನಲ್ಲಿ ತಯಾರಾದ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ಕೇವಲ 10 ಕೋಟಿ ರೂ.ಗಳಿಸುವಲ್ಲಿ ಯಶಸ್ವಿಯಾಗಿದೆ.. ಸಮಂತಾ ಪ್ರಸ್ತುತ ರಾಜ್ ಮತ್ತು ಡಿಕೆ ಅವರ ಮುಂಬರುವ ವೆಬ್ ಸರಣಿ ಸಿಟಾಡೆಲ್‌ನಲ್ಲಿ ಬ್ಯುಸಿಯಾಗಿದ್ದಾರೆ, ಇದರಲ್ಲಿ ವರುಣ್ ಧವನ್ ಸಹ ನಟಿಸಿದ್ದಾರೆ.

Exit mobile version