Site icon Vistara News

Samantha Ruth Prabhu; ಹೊಸ ಫೋಟೊಶೂಟ್‌ನಲ್ಲಿ ಹಾಟ್‌ ಆಗಿ ಕಂಡ ಸಮಂತಾ; ಅವರ ಕನಸು ಏನಂತೆ?

Samantha Ruth Prabhu looks Hot Photoshoot

ಬೆಂಗಳೂರು: ನಟಿ ಸಮಂತಾ (Samantha Ruth Prabhu) ಸದ್ಯ ಹಲವು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಇದರ ನಡುವೆಯೇ ಆಗಾಗ ಫೋಟೊಗಳಿಂದ ಸುದ್ದಿಯಾಗುತ್ತಲೇ ಇರುತ್ತಾರೆ. ಇದೀಗ ಸಮಂತಾ ಹೊಸ ಫೋಟೊಶೂಟ್‌ ಒಂದನ್ನು ಹಂಚಿಕೊಂಡಿದ್ದು, ಗೌನ್‌ನಲ್ಲಿ ಸಖತ್‌ ಹಾಟ್‌ ಆಗಿ ಕಂಡಿದ್ದಾರೆ. ಸಮಂತಾ ಮಲಗಿಕೊಂಡು ಪೋಸ್‌ ನೀಡಿದ್ದು, ʻʻಇನ್ನೂ ಕನಸು ಕಾಣುತ್ತಿದ್ದೇನೆʼʼ ಎಂಬ ಕ್ಯಾಪ್ಷನ್‌ ಕೂಡ ನೀಡಿದ್ದಾರೆ. ಈ ಫೋಟೊಗೆ ನೆಟ್ಟಿಗರು ಸಹ ಥ್ರಿಲ್‌ ಆಗಿದ್ದು, ʻʻತುಂಬ ಹಾಟ್‌ʼ ʼಆಗಿದೆ ಎಂದು ಕಮೆಂಟ್‌ ಮಾಡಿದ್ದಾರೆ.

ಸಮಂತಾ ಅವರ ಹಸಿರು ಉಡುಗೆಯ ಹಾಲ್ಟರ್ ನೆಕ್‌ಲೈನ್, ಸ್ಲೀವ್‌ಲೆಸ್ ಸಿಲೂಯೆಟ್ ಗೌನ್‌ನಲ್ಲಿ ಮಿಂಚಿದ್ದಾರೆ. ಸದ್ಯ ಸಮಂತಾ ಸಿಟಾಡೆಲ್‌ನ ಭಾರತೀಯ ಆವೃತ್ತಿಯಲ್ಲಿ ಬ್ಯುಸಿಯಾಗಿದ್ದಾರೆ. ಮುಂಬರುವ ಶೋನಲ್ಲಿ ವರುಣ್ ಧವನ್ ಕೂಡ ನಟಿಸಿದ್ದಾರೆ. ದಿ ಫ್ಯಾಮಿಲಿ ಮ್ಯಾನ್ ನಿರ್ದೇಶಕ ರಾಜ್ ಮತ್ತು ಡಿಕೆ ಈ ಸಿರೀಸ್‌ ಅನ್ನು ನಿರ್ದೇಶಿಸುತ್ತಿದ್ದಾರೆ.

ಫ್ಯಾಮಿಲಿ ಮ್ಯಾನ್ 2 ಮೂಲಕ ಒಟಿಟಿಗೆ ಕಾಲಿಟ್ಟ ನಟಿ ಸಮಂತಾ ರುತ್ ಪ್ರಭು ಸಂಭಾವನೆ ವಿಚಾರದಲ್ಲಿಯೂ ಸಖತ್‌ ಸುದ್ದಿಯಲ್ಲಿದ್ದಾರೆ. ಸಮಂತಾ ಒಟಿಟಿಯಲ್ಲಿ ಎಪಿಸೋಡ್​ಗೆ ಅನುಗುಣವಾಗಿ ಸಂಭಾವನೆ ಪಡೆಯುತ್ತಾರೆ. ಒಟಿಟಿಯಲ್ಲಿ ಒಂದು ಎಪಿಸೋಡ್​ಗೆ 8 ಲಕ್ಷ ರೂಪಾಯಿ ಪಡೆಯುತ್ತಾರಂತೆ. ನಟಿ ಫ್ಯಾಮಿಲಿ ಮ್ಯಾನ್ 2 ನಂತರ ಸಿಟೆಡಾಲ್ ಮೂಲಕ ಪ್ರೇಕ್ಷಕರ ಮುಂದೆ ಬರಲಿದ್ದಾರೆ. ಇದು ಅವರ ಎರಡನೇ ಒಟಿಟಿ ಪ್ರಾಜೆಕ್ಟ್ ಆಗಿದೆ.

ʻಸಿಟಾಡೆಲ್’ ಇಂಗ್ಲಿಷ್ ವರ್ಷನ್ ಈಗಾಗಲೇ ಅಮೆಜಾನ್ ಪ್ರೈಂನಲ್ಲಿ ಸದ್ದು ಮಾಡುತ್ತಿದ್ದು, ಇದರಲ್ಲಿ ಪ್ರಿಯಾಂಕಾ ಚೋಪ್ರಾ ಜೋನಾಸ್ ಹಾಗೂ ರಿಚರ್ಡ್ ನಡುವೆ ಕಿಸ್ಸಿಂಗ್ ಹಾಗೂ ಹಾಟ್‌ ದೃಶ್ಯಗಳಿವೆ. ಈಗ ಇದೇ ಟೈಟಲ್‌ ಇಟ್ಟು ಭಾರತದಲ್ಲೂ ವೆಬ್ ಸಿರೀಸ್ ರೆಡಿಯಾಗುತ್ತಿದೆ. ಇದೀಗ ಪ್ರಿಯಾಂಕಾ-ರಿಚರ್ಡ್ ನಡುವಿನ ರೊಮ್ಯಾಂಟಿಕ್ ದೃಶ್ಯಗಳಂತೆ, ಸಮಂತಾ-ವರುಣ್ ಧವನ್ ನಡುವೆ ಇರುತ್ತದೆ ಎಂಬ ಸುದ್ದಿ ಸದ್ಯದ ಬಿಸಿ ಬಿಸಿ ಚರ್ಚೆಯಾಗಿದೆ.

ಇದನ್ನೂ ಓದಿ: Samantha Ruth Prabhu: ಸಿಟಾಡೆಲ್‌ನಲ್ಲಿ ಕಿಸ್ಸಿಂಗ್‌, ಹಾಟ್‌ ದೃಶ್ಯಗಳಲ್ಲಿ ಕಾಣಿಸಿಕೊಳ್ಳುತ್ತಾರಾ ಸಮಂತಾ?

ಸಮಂತಾ ಪೋಸ್ಟ್‌

ಬೋಲ್ಡ್‌ ದೃಶ್ಯಗಳಲ್ಲಿ ಕಾಣಿಸಿಕೊಳ್ಳುತ್ತಾರಾ ಸಮಂತಾ?

‘ಫ್ಯಾಮಿಲಿ ಮ್ಯಾನ್ 2’ ವೆಬ್‌ ಸೀರಿಸ್‌ನಲ್ಲಿ ಸಮಂತಾ ಬೋಲ್ಡ್ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದರು. ಫ್ಯಾಮಿಲಿ ಮ್ಯಾನ್‌ ಸಿರೀಸ್‌ ಬರುವ ಸಮಯದಲ್ಲಿ ಸಮಂತಾ ಅವರು ನಾಗಚೈತನ್ಯ ಅವರಿಗೆ ವಿಚ್ಛೇದನ ನೀಡಿರಲಿಲ್ಲ. ಆದರೆ ಸಿರೀಸ್‌ನಲ್ಲಿ ಸಮಂತಾ ನಟಿಸಿರುವ ದೃಶ್ಯಗಳೇ ಇಬ್ಬರನ್ನು ಬೇರೆ ಮಾಡಿದ್ದು ಎನ್ನುವ ಸುದ್ದಿ ವೈರಲ್‌ ಆಗಿತ್ತು. ‘ಫ್ಯಾಮಿಲಿ ಮ್ಯಾನ್ 2’ ಸಿರೀಸ್ ನಿರ್ದೇಶಿಸಿದ್ದ ರಾಜ್ ಮತ್ತು ಡಿಕೆ ‘ಸಿಟಾಡೆಲ್‌’ ಭಾರತೀಯ ವರ್ಷನ್‌ಗೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಇದೇ ಸಿರೀಸ್‌ನಲ್ಲಿ ಸಮಂತಾ, ಪ್ರಿಯಾಂಕಾ ಚೋಪ್ರಾರಂತೆ ಹಾಟ್‌ ದೃಶ್ಯಗಳನ್ನು ಮಾಡುತ್ತಾರೆ ಎಂದು ಅವರ ಅಭಿಮಾನಿಗಳು ಪ್ರಶ್ನಿಸಿದ್ದಾರೆ.

ಸಮಂತಾ ರುತ್ ಪ್ರಭು (Samantha) ಮತ್ತು ವಿಜಯ್ ದೇವರಕೊಂಡ (Vijay Devarakonda) ಕಾಂಬಿನೇಶನ್‌ ಸಿನಿಮಾವಾದ ʼಖುಷಿʼ ಇದೇ ಸೆಪ್ಟೆಂಬರ್‌ 1ರಂದು ವಿಶ್ವಾದ್ಯಂತ ಬಿಡುಗಡೆಯಾಗುತ್ತಿದೆ. 2018ರ ʼಮಹಾನಟಿʼ ಚಿತ್ರದ ನಂತರ ವಿಜಯ್‌ ಹಾಗೂ ಸ್ಯಾಮ್‌ ಒಟ್ಟಿಗೆ ತೆರೆ ಮೇಲೆ ಕಾಣಿಸಿಕೊಳ್ಳುತ್ತಿದ್ದಾರೆ. ʼಖುಷಿʼ ಚಿತ್ರವನ್ನು ಶಿವ ನಿರ್ವಾಣ ನಿರ್ದೇಶಿಸುತ್ತಿದ್ದಾರೆ.

Exit mobile version