ನಟಿ ಸಮಂತಾ ರುತ್ ಪ್ರಭು (Samantha Ruth Prabhu ) ಅವರು ಇನ್‌ಸ್ಟಾಗ್ರಾಮ್‌ನಲ್ಲಿ (Instagram) ಹಂಚಿಕೊಂಡಿರುವ ಪೋಸ್ಟ್ ಒಂದು ಈಗ ಸಾಮಾಜಿಕ ಜಾಲತಾಣದಲ್ಲಿ (social mideia) ಚರ್ಚೆಗೆ ಕಾರಣವಾಗಿದೆ. ಇದರಲ್ಲಿ ಅವರು ಹಂಚಿಕೊಂಡಿರುವ ಪೋಸ್ಟ್ ನೋಡಿ ‘ಪ್ರೀತಿ ಒಂದು ತ್ಯಾಗ’ (Love Is A Sacrifice) ಅದು ಹೇಗೆ ಎಂಬುದರ ಕುರಿತು ಹೆಚ್ಚಿನ ನೆಟ್ಟಿಗರು ಚರ್ಚೆ ಮಾಡಲು ಪ್ರಾರಂಭಿಸಿದ್ದಾರೆ.
ಗೆಳೆಯರು, ಸಂಗಾತಿಯಲ್ಲಿ ಒಬ್ಬ ಹೆಚ್ಚು ನೀಡುವ ಸ್ಥಾನದಲ್ಲಿ ಇಲ್ಲದಿದ್ದಾಗ ಇನ್ನೊಬ್ಬ ಹೇಗೆ ಹೆಚ್ಚಿನ ಪ್ರಯತ್ನವನ್ನು ಮಾಡಬೇಕಾಗುತ್ತದೆ ಎಂಬುದರ ಕುರಿತು ಪೋಸ್ಟ್‌ನಲ್ಲಿ ಉಲ್ಲೇಖಿಸಲಾಗಿದೆ. ಈ ಮೂಲಕ ತಮ್ಮಲ್ಲಿ ಇಲ್ಲದೇ ಇರುವುದನ್ನು ನೀಡಿ ಸಮಾನವಾಗಿರಲು ಪ್ರಯತ್ನಿಸುವಂತೆ ಮಾಡಿರುವವರಿಗೆ ‘ಕೃತಜ್ಞತೆ’ಯನ್ನು ಅವರು ಹೇಳಿದ್ದಾರೆ.
ಬಹಳಷ್ಟು ಜನರು ಸ್ನೇಹ ಮತ್ತು ಸಂಬಂಧಗಳನ್ನು ಪರಸ್ಪರವಾಗಿ ನೋಡುತ್ತಾರೆ ಮತ್ತು ನಾನು ಒಪ್ಪುತ್ತೇನೆ. ನೀನು ಕೊಡು, ನಾನು ಕೊಡುತ್ತೇನೆ. ಆದರೆ ಕೆಲವೊಮ್ಮೆ ಪ್ರೀತಿಯು ಇತರ ವ್ಯಕ್ತಿಯು ಹಿಂತಿರುಗಿಸುವ ಸ್ಥಿತಿಯಲ್ಲಿಲ್ಲದಿದ್ದರೂ ಸಹ ನೀವು ನೀಡಲು ಕಾರಣವಾಗುತ್ತದೆ ಎಂದು ನಾನು ವರ್ಷಗಳಲ್ಲಿ ಕಲಿತಿದ್ದೇನೆ. ನೀವು ಕೊಡುವುದರಿಂದ ಅದು ಹೋಗುತ್ತದೆ, ನಾನು ಕೊಡುತ್ತೇನೆ.. ನೀವು ಹಿಂತಿರುಗಿಸಲು ಸಾಧ್ಯವಾಗುವವರೆಗೆ ಪ್ರತಿಯಾಗಿ ನಾನು ಕೊಡುತ್ತೇನೆ ಎಂಬುದಾಗಿ ಸಮಂತಾ ಮಾರ್ಮಿಕವಾಗಿ ಪೋಸ್ಟ್‌ನಲ್ಲಿ ಹೇಳಿದ್ದಾರೆ.
“ಪ್ರೀತಿ ಒಂದು ತ್ಯಾಗ. ಒಂದು ಋತುವಿಗಾಗಿ ಸಮತೋಲಿತ ಸಲಹೆ ಕೂಡ. ಅಭಿಮಾನಿಗಳು ಕೂಡ ಅಷ್ಟೆ. ನಾನು ಪ್ರತಿಯಾಗಿ ಕೃತಜ್ಞತೆ ಸ್ಪುರಿಸಲು ಸಾಧ್ಯವಾಗುತ್ತಿಲ್ಲ ಎಂದಾಗಲೂ ಜನ ಅಭಿಮಾನ ಸುರಿಸುತ್ತಲೇ ಇರುತ್ತಾರೆʼʼ ಎಂದು ಸಮಂತಾ ಹೇಳಿಕೊಂಡಿದ್ದಾರೆ. ಬಿಳಿ ಬಣ್ಣದ ಹೃದಯದ ಇಮೊಜಿಯೊಂದಿಗೆ ಸಮಂತಾ ಇದನ್ನು ಪೋಸ್ಟ್ ಮಾಡಿದ್ದಾರೆ.
ಈ ನಡುವೆ ಸಮಂತಾ ರುತ್ ಪ್ರಭು ಗುರುವಾರ ರಾತ್ರಿ ಮುಂಬಯಿನಲ್ಲಿ ಸಾರ್ವಜನಿಕವಾಗಿ ಕಾಣಿಸಿಕೊಂಡರು. ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡ ಈ ವಿಡಿಯೋದಲ್ಲಿ ಅವರು ಕಾರ್ಯಕ್ರಮವೊಂದಕ್ಕೆ ಆಗಮಿಸುತ್ತಿದ್ದಂತೆ ಪಾಪರಾಜಿಗಳಿಗೆ ಪೋಸ್ ನೀಡುತ್ತಿರುವುದು ಕಂಡುಬಂದಿದೆ.
ಇದನ್ನೂ ಓದಿ: Shraddha Kapoor- Shreyas Iyer: ಕ್ರಿಕೆಟಿಗ ಅಯ್ಯರ್ ಜತೆ ಡೇಟಿಂಗ್ ಆರಂಭಿಸಿದ ನಟಿ ಶ್ರದ್ಧಾ ಕಪೂರ್; ಫೋಟೊ ವೈರಲ್
ಕಪ್ಪು ಉಡುಪನ್ನು ಧರಿಸಿದ್ದ ಅವರ ವಿಡಿಯೋವನ್ನು ನೋಡಿ ಅಭಿಮಾನಿಗಳು, ನಟಿ ಸಾಕಷ್ಟು ತೂಕವನ್ನು ಕಳೆದುಕೊಂಡಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
ಸಮಂತಾ ರುತ್ ಪ್ರಭು ಶೀಘ್ರದಲ್ಲೇ ʼಸಿಟಾಡೆಲ್: ಹನಿ ಬನ್ನಿʼ ವೆಬ್ ಸಿರೀಸ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದು ಭಾರತೀಯ ಸರಣಿಯಾಗಿದ್ದು, ಈ ತಿಂಗಳ ಆರಂಭದಲ್ಲಿ ʼಸಿಟಾಡೆಲ್: ಹನ್ನಿ ಬನ್ನಿʼ ಚಿತ್ರದ ಟೀಸರ್ ಬಿಡುಗಡೆಯಾಯಿತು.