Site icon Vistara News

Samantha Ruth Prabhu: ಸಿನಿಮಾದಿಂದ ಬ್ರೇಕ್‌ ಪಡೆದು ಸದ್ಗುರು ಸಂಘ ಸೇರಿ ಧ್ಯಾನಸ್ಥರಾದ ಸಮಂತಾ!

Samantha Ruth Prabhu meditation

ಬೆಂಗಳೂರು: ನಟಿ ಸಮಂತಾ (Samantha Ruth Prabhu) ಒಪ್ಪಿಕೊಂಡ ಸಿನಿಮಾ, ವೆಬ್ ಸಿರೀಸ್‌ ಚಿತ್ರೀಕರಣ ಮುಗಿಸಿಕೊಟ್ಟಿದ್ದಾರೆ. ಯಾವುದೇ ಹೊಸ ಸಿನಿಮಾ ಒಪ್ಪಿಕೊಂಡಿಲ್ಲ ಬದಲಿಗೆ ಬರೋಬ್ಬರಿ ಒಂದು ವರ್ಷಗಳ ಕಾಲ ಸಿನಿಮಾಗಳಿಂದ ವಿರಾಮ ಪಡೆದಿದ್ದಾರೆ. ಕೊಯಮತ್ತೂರಿನ ಸದ್ಗುರುಗಳ ಇಶಾ ಫೌಂಡೇಶನ್‌ಗೆ ಸಮಂತಾ ಇತ್ತೀಚೆಗೆ ಭೇಟಿ ನೀಡಿದ್ದಾರೆ. ಫೋಟೊ ಮತ್ತು ವಿಡಿಯೊಗಳನ್ನು ನಟಿ ಹಂಚಿಕೊಂಡಿದ್ದಾರೆ.

ಮೊದಲ ಎರಡು ಫೋಟೊಗಳಲ್ಲಿ ಸಮಂತಾ ಧ್ಯಾನ ಮಾಡುತ್ತಿರುವುದು ಕಂಡುಬಂದಿದೆ. ಸರಳವಾದ ಬಿಳಿ ಸೂಟ್ ಧರಿಸಿದ್ದರು. ನಟಿ ಕೊರಳಲ್ಲಿ ಮಾಲೆಯನ್ನೂ ಹಾಕಿಕೊಂಡಿದ್ದರು. ಜತೆಗೆ ಸುಂದರವಾದ ಪ್ರಕೃತಿಯನ್ನು ಎಂಜಾಯ್ ಮಾಡುತ್ತಿದ್ದಾರೆ. ತನ್ನ ಪೋಸ್ಟ್‌ನ ಶೀರ್ಷಿಕೆಯಲ್ಲಿ, ಶಾಂತವಾಗಿರಲು ಮತ್ತು ಶಕ್ತಿಯನ್ನು ಪಡೆಯಲು ಧ್ಯಾನವು ಹೇಗೆ ಸಹಾಯ ಮಾಡುತ್ತಿದೆ ಎಂಬುದನ್ನು ಬರೆದುಕೊಂಡಿದ್ದಾರೆ.

“ಸ್ವಲ್ಪ ಸಮಯದ ಹಿಂದೆ, ಏನಾದರೂ ತಿರುವುತ್ತಾ, ಮುರಿಯುತ್ತಾ, ಮೈಯಿ ಕೆರೆಯುತ್ತಾ, ಯೋಚನೆಗಳ ಪ್ರವಾಹಗಳಲ್ಲಿ ಇರುತ್ತಿದ್ದೆ. ಆದರೆ ಇಂದು, ಧ್ಯಾನಸ್ಥ ಸ್ಥಿತಿಯು ನನ್ನ ಶಕ್ತಿಯ ಮೂಲವಾಗಿದೆ. ಧ್ಯಾನ ನನ್ನ ಶಕ್ತಿ ಎಂದು ಅರಿತುಕೊಂಡೆ. ಧ್ಯಾನ ನನ್ನ ಸಂವಹನ, ನನಗೆ ಸ್ಪಷ್ಟನೆಯನ್ನು ನೀಡುತ್ತದೆ ಎಂದು ಅರಿತುಕೊಂಡೆ. ಇಷ್ಟು ಸರಳವಾದ ಕಾರ್ಯವೊಂದರಲ್ಲಿ ಇಷ್ಟು ಶಕ್ತಿ ಅಡಗಿರುತ್ತದೆ ಎಂದು ತಿಳಿದಿರಲಿಲ್ಲ” ಎಂದು ಸಮಂತಾ ಬರೆದುಕೊಂಡಿದ್ದಾರೆ.

ಇದನ್ನೂ ಓದಿ; Samantha Ruth Prabhu: ಟೀಕೆಗೆ ಗುರಿಯಾದ ಸಮಂತಾ; ʻಕರ್ಮ ರಿಟರ್ನ್ಸ್‌ʼ ಅಂದ್ರು ನೆಟ್ಟಿಗರು!

ಈ ತಿಂಗಳ ಆರಂಭದಲ್ಲಿ, ಸಮಂತಾ ತಮ್ಮ ಆರೋಗ್ಯದ ಮೇಲೆ ಕೇಂದ್ರೀಕರಿಸಲು ಕೆಲಸದಿಂದ ವಿರಾಮ ತೆಗೆದುಕೊಳ್ಳುತ್ತಿದ್ದಾರೆ ಎಂದು ವರದಿಯಾಗಿತ್ತು. ನಟಿ ಮೈಯೋಸಿಟಿಸ್ ಎಂಬ ಆಟೋಇಮ್ಯೂನ್ ಕಾಯಿಲೆಯಿಂದ ಬಳಲುತ್ತಿದ್ದಾರೆ. ಖುಷಿ ಸೆಪ್ಟೆಂಬರ್‌ನಲ್ಲಿ ಬಿಡುಗಡೆಯಾಗಲಿದೆ. ಸಿಟಾಡೆಲ್ ಇಂಡಿಯಾ ಇನ್ನೂ ಬಿಡುಗಡೆ ದಿನಾಂಕವನ್ನು ಪ್ರಕಟಿಸಿಲ್ಲ. ಖುಷಿ ಸಿನಿಮಾದಲ್ಲಿ, ಸಮಂತಾ ವಿಜಯ್ ದೇವರಕೊಂಡ ಅವರೊಂದಿಗೆ ನಟಿಸಿದರೆ, ರಾಜ್ ಮತ್ತು ಡಿಕೆ ಸಿರೀಸ್‌ ಸಿಟಾಡೆಲ್‌ನಲ್ಲಿ ವರುಣ್ ಧವನ್ ಜತೆ ತೆರೆ ಹಂಚಿಕೊಂಡಿದ್ದಾರೆ.

ಖುಷಿ ಚಿತ್ರವನ್ನು ಶಿವ ನಿರ್ವಾಣ ನಿರ್ದೇಶಿಸುತ್ತಿದ್ದಾರೆ. ವಿಜಯ್ ದೇವರಕೊಂಡ, ಸಮಂತಾ, ಜಯರಾಮ್, ಸಚಿನ್ ಖೇಡಕರ್, ಮುರಳಿ ಶರ್ಮಾ, ಲಕ್ಷ್ಮೀ, ಅಲಿ, ರೋಹಿಣಿ, ವೆನ್ನೆಲ ಕಿಶೋರ್, ರಾಹುಲ್ ರಾಮಕೃಷ್ಣ, ಶ್ರೀಕಾಂತ್ ಅಯ್ಯಂಗಾರ್, ಶರಣ್ ಮುಂತಾದ ಅದ್ಭುತ ನಟ, ನಟಿಯರು ಈ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಈ ಚಿತ್ರಕ್ಕೆ, ಪೀಟರ್ ಹೆನ್ಸ್ ಸಾಹಸ ನಿರ್ದೇಶನ, ಪ್ರವೀನ್ ಪುಡಿ ಅವರ ಸಂಕಲನ, ಜಿ ಮುರಳಿ ಕ್ಯಾಮೆರಾ ಕೆಲಸ ಮಾಡಿದೆ. ಹೇಶಮ್ ಅಬ್ದುಲ್ ವಹಾಬ್ ಅವರ ಸಂಗೀತವಿದೆ. ಮೈತ್ರಿ ಮೂವಿ ಮೇಕರ್ಸ್ ಈ ಚಿತ್ರವನ್ನು ನಿರ್ಮಿಸುತ್ತಿದೆ. ತೆಲುಗು, ತಮಿಳು, ಮಲಯಾಳಂ ಮತ್ತು ಕನ್ನಡದಲ್ಲಿ ಚಿತ್ರ ಬಿಡುಗಡೆಯಾಗುತ್ತಿದೆ ಎಂದು ಚಿತ್ರತಂಡ ಮಾಹಿತಿ ನೀಡಿದೆ.

Exit mobile version