Site icon Vistara News

Samantha Ruth Prabhu: ಕಿವಿ ಮೇಲೆ ಕೂದಲು ಬೆಳೆಯುವುದೇಕೆ? ಸಮಂತಾ ಈ ಸ್ಕ್ರೀನ್‌ಶಾಟ್‌ ಶೇರ್‌ ಮಾಡಿದ್ದೇಕೆ?

Samantha MOCKS Producer Who Declared Her Career Is ‘Over’

ಬೆಂಗಳೂರು: ಟಾಲಿವುಡ್‌ ನಟಿ ಸಮಂತಾ ರುತ್ ಪ್ರಭು (Samantha Ruth Prabhu) ಅಭಿನಯದ ಇತ್ತೀಚಿಗೆ ಬಿಡುಗಡೆಯಾದ ʻಶಾಕುಂತಲಂʼ ಸಿನಿಮಾ ಅಷ್ಟಾಗಿ ಯಶಸ್ಸು ಕಂಡಿಲ್ಲ. ಪ್ರೇಕ್ಷಕರ ನಿರೀಕ್ಷೆಗಳನ್ನು ಪೂರೈಸುವಲ್ಲಿ ವಿಫಲವಾಗಿದೆ. ಹಿರಿಯ ನಿರ್ಮಾಪಕ-ನಿರ್ದೇಶಕ ಚಿಟ್ಟಿಬಾಬು ಅವರು ಸಮಂತಾ ಅವರ ಚಲನಚಿತ್ರ ವೃತ್ತಿಜೀವನವು ಅಂತ್ಯ ಕಾಣುತ್ತಿದೆ ಎಂದು ಹೇಳಿಕೆ ನೀಡಿದ ಬೆನ್ನಲ್ಲೇ ಸಮಂತಾ ಪರೋಕ್ಷವಾಗಿ ಚಿಟ್ಟಿಬಾಬುಗೆ ತಿರುಗೇಟು ನೀಡಿದ್ದಾರೆ.

ಇತ್ತೀಚಿನ ಸಂದರ್ಶನವೊಂದರಲ್ಲಿ, ಚಿಟ್ಟಿಬಾಬು ಅವರು ಸಮಂತಾ ಅವರನ್ನು “ಸ್ಟಾರ್ ಹೀರೋಯಿನ್” ಆಗಿ ತಮ್ಮ ವೃತ್ತಿಜೀವನವನ್ನು ಕೊನೆಗೊಳಿಸಿದ್ದಾರೆ. ಈಗ ಅವರು ತಮ್ಮ ಚಲನಚಿತ್ರಗಳನ್ನು ಪ್ರಚಾರ ಮಾಡಲು ಚೀಪ್‌ ತಂತ್ರಗಳನ್ನು ಬಳಸುತ್ತಿದ್ದಾರೆʼ ಎಂದು ಆರೋಪಿಸಿದ್ದರು. ಇದೀಗ ಚಿಟ್ಟಿಬಾಬು ಹೇಳಿಕೆ ಸಮಂತಾ ಗಮನಕ್ಕೆ ಬಂದಿದ್ದು, ಇನ್‌ಸ್ಟಾಗ್ರಾಮ್‌ ಸ್ಟೋರಿಯಲ್ಲಿ ಸಮಂತಾ ಅವರು ʻʻಕಿವಿಯಲ್ಲಿ ಕೂದಲು ಹೇಗೆ ಬೆಳೆಯುತ್ತದೆ” ಎಂಬ ಗೂಗಲ್‌ ಸರ್ಚ್‌ ಸ್ಕ್ರೀನ್‌ ಶಾಟ್‌ ಶೇರ್‌ ಮಾಡಿಕೊಂಡಿದ್ದಾರೆ.

“ಇದಕ್ಕೆ ಹೆಚ್ಚಿದ ಟೆಸ್ಟೋಸ್ಟೆರಾನ್ ಕಾರಣ ಎಂದು ಇಂಟರ್‌ನೆಟ್‌ ತೋರಿಸಿದೆ. ಕೆಲ ಪುರುಷರಲ್ಲಿ ವಯಸ್ಸಾದಂತೆ ಕಿವಿಗಳಲ್ಲಿ ಕೂದಲು ಬೆಳೆಯುತ್ತದೆ. ಟೆಸ್ಟೋಸ್ಟೆರಾನ್ ಹೆಚ್ಚಾಗುವುದರಿಂದ ಹೀಗಾಗುತ್ತದೆ. ಈ ಹಾರ್ಮೋನ್ ಕೂದಲನ್ನು ಒರಟಾಗಿ ಮತ್ತು ದಪ್ಪವಾಗುವಂತೆ ಮಾಡುತ್ತದೆ. ಆದರೆ ನಿಮ್ಮ ಕಿವಿಯನ್ನು ಕೊಳಕು ಮತ್ತು ಕಸದಿಂದ ಇದು ದೂರವಿರಿಸುತ್ತದೆʼʼ ಎಂಬ ಮಾಹಿತಿಯನ್ನು ಸಮಂತಾ ಹಂಚಿಕೊಂಡಿದ್ದಾರೆ.

IYKYK ಎಂಬ ಹ್ಯಾಶ್‌ಟ್ಯಾಗ್‌ನೊಂದಿಗೆ ಸ್ಕ್ರೀನ್‌ಶಾಟ್‌ಅನ್ನು ಅವರು ಹಂಚಿಕೊಂಡಿದ್ದಾರೆ. ಇದು ಚಿಟ್ಟಿಬಾಬುಗೆ ಪರೋಕ್ಷವಾಗಿ ಸಮಂತಾ ಮಾಡಿರುವ ಗೇಲಿ ಎಂದು ನೆಟ್ಟಿಗರು ಕಾಮೆಂಟ್‌ ಮಾಡಿದ್ದಾರೆ.

ಇದನ್ನೂ ಓದಿ : Samantha Ruth Prabhu: ʻಶಾಕುಂತಲಂʼ ಸೋಲಿನ ಬೆನ್ನಲ್ಲೇ ಪ್ಯಾನ್ ಇಂಡಿಯಾ ಸಿನಿಮಾಗಳಿಂದ ಬ್ರೇಕ್ ತಗೊಂಡ್ರಾ ಸಮಂತಾ?

ಸಮಂತಾ ಪೋಸ್ಟ್‌

ಚಿಟ್ಟಿಬಾಬು ಹೇಳಿದ್ದೇನು?

“ಸಮಂತಾ ವಿಚ್ಛೇದನದ ನಂತರ ಪುಷ್ಪಾ ದಿ ರೈಸ್ ಚಿತ್ರದಲ್ಲಿ ಊ ಅಂಟವಾ ಐಟಂ ಸಾಂಗ್ ಮಾಡಿದ್ದಾರೆ. ತನ್ನ ಜೀವನೋಪಾಯಕ್ಕಾಗಿ ಆ ಸಾಂಗ್‌ ಮಾಡಿದರು. ಸ್ಟಾರ್ ಹೀರೋಯಿನ್ ಪಟ್ಟ ಕಳೆದುಕೊಂಡ ನಂತರ ತನಗೆ ಬರುತ್ತಿರುವ ಆಫರ್ ಗಳನ್ನೆಲ್ಲ ಮಾಡುತ್ತ ಇದ್ದಾರೆ. ನಾಯಕಿಯಾಗಿ ಅವರ ವೃತ್ತಿಜೀವನ ಮುಗಿದಿದೆ. ಮತ್ತೆ ಸ್ಟಾರ್‌ಡಮ್‌ಗೆ ಮರಳಲು ಸಾಧ್ಯವಿಲ್ಲ. ಬಂದಿರುವ ಆಫರ್‌ಗಳನ್ನು ಮಾಡುತ್ತ ತನ್ನ ಪ್ರಯಾಣವನ್ನು ಮುಂದುವರಿಸಬೇಕು,” ಎಂದು ಹೇಳಿಕೆ ನೀಡಿದ್ದರು.

ಶಾಕುಂತಲಂ ಚಿತ್ರದಲ್ಲಿ ಸಮಂತಾ ನಾಯಕಿಯಾಗಿ ನಟಿಸುತ್ತಿರುವುದನ್ನು ನೋಡಿ ಆಶ್ಚರ್ಯವಾಯಿತು ಎಂತಲೂ ಚಿಟ್ಟಿಬಾಬು ಹೇಳಿಕೊಂಡಿದ್ದರು. “ಪ್ರತಿ ಬಾರಿ ಸೆಂಟಿಮೆಂಟ್‌ ಕೆಲಸ ಮಾಡುವುದಿಲ್ಲ. ಪಾತ್ರ ಮತ್ತು ಸಿನಿಮಾ ಚೆನ್ನಾಗಿದ್ದರೆ ಜನ ನೋಡುತ್ತಾರೆ. ಇವೆಲ್ಲವೂ ಹುಚ್ಚುತನ. ನಾಯಕಿ ಸ್ಥಾನಮಾನ ಕಳೆದುಕೊಂಡಿರುವ ಸಮಂತಾ ಶಕುಂತಲಾ ಪಾತ್ರಕ್ಕೆ ಹೇಗೆ ಹೊಂದಿಕೊಂಡರು ಎಂಬ ಕುತೂಹಲ ಮೂಡಿದೆ. ಶಾಕುಂತಲಂನಲ್ಲಿ ನನಗೆ ಯಾವುದೇ ಆಸಕ್ತಿ ಇಲ್ಲ,” ಎಂದು ಕಿಡಿಕಾರಿದ್ದರು.

ಶಾಕುಂತಲಂ ತೆಲುಗು ಭಾಷೆಯ ಪೌರಾಣಿಕ ನಾಟಕ ಚಿತ್ರವಾಗಿದ್ದು, ಗುಣಶೇಖರ್ ಬರೆದು ನಿರ್ದೇಶಿಸಿದ್ದಾರೆ. ಚಿತ್ರವು ಏಪ್ರಿಲ್ 14ರಂದು ತೆಲುಗು, ತಮಿಳು, ಮಲಯಾಳಂ, ಕನ್ನಡ ಮತ್ತು ಹಿಂದಿಯಲ್ಲಿ ಬಿಡುಗಡೆಯಾಗಿದೆ. ಸಮಂತಾ ಪ್ರಸ್ತುತ ರಾಜ್ ಮತ್ತು ಡಿಕೆ ಅವರ ಮುಂಬರುವ ವೆಬ್ ಸರಣಿ ಸಿಟಾಡೆಲ್‌ನಲ್ಲಿ ಬ್ಯುಸಿಯಾಗಿದ್ದಾರೆ, ಇದರಲ್ಲಿ ವರುಣ್ ಧವನ್ ಸಹ ನಟಿಸಿದ್ದಾರೆ.

20 ಕೋಟಿ ರೂ. ನಷ್ಟ ಕಂಡಿದೆ ಎಂದು ವರದಿಯಾಗಿದೆ. ಶಾಕುಂತಲಂ ಸುಮಾರು 60 ಕೋಟಿ ರೂ. ಬಜೆಟ್‌ನಲ್ಲಿ ನಿರ್ಮಿಸಲಾಗಿದೆ. ನಿರ್ಮಾಪಕ ದಿಲ್ ರಾಜು ಅವರು ಟೆಲಿವಿಷನ್ ಸ್ಟ್ರೀಮಿಂಗ್ ರೈಟ್ಸ್‌ಗೆ ಸ್ಯಾಟಲೈಟ್ ಕಂಪನಿಗಳಿಂದ 15 ಕೋಟಿ ರೂ. ಬೇಡಿಕೆ ಇಟ್ಟಿದ್ದಾರೆ ಎಂದು ಹೇಳಲಾಗಿದೆ.

Exit mobile version