Site icon Vistara News

Samantha Ruth Prabhu: ರಿಯಾಲಿಟಿ ಶೋಗೆ ಸ್ಟೈಲಿಶ್‌ ಆಗಿ ಎಂಟ್ರಿ ಕೊಟ್ಟ ಸಮಂತಾ!

Samantha Ruth Prabhu MTV Hustle season 3 stage on fire

ನಟಿ ಸಮಂತಾ ಸದ್ಯ (Samantha Ruth Prabhu) ಸಿನಿಮಾದಿಂದ ಬ್ರೇಕ್‌ ಪಡೆದಿರುವುದು ಗೊತ್ತೇ ಇದೆ. ಇದೀಗ ನಟಿ ಕಿರುತೆರೆ ಲೋಕಕ್ಕೆ ಕಾಲಿಟ್ಟಿದ್ದಾರೆ. ಏಕಾಏಕಿ ಹಿಂದಿಯ ರ್‍ಯಾಪ್ ರಿಯಾಲಿಟಿ ಶೋನಲ್ಲಿ ಸಮಂತಾ ಭಾಗಿಯಾಗಿದ್ದಾರೆ. ಜಡ್ಜ್ ಹನಿ ಸಿಂಗ್​ ಜತೆ ವೇದಿಕೆ ಹಂಚಿಕೊಂಡಿರುವ ಫೋಟೊ ಶೇರ್‌ ಮಾಡಿಕೊಂಡಿದ್ದಾರೆ. MTV ರಿಯಾಲಿಟಿ ಶೋನಲ್ಲಿ ಸಮಂತಾ ಸ್ಟೈಲಿಶ್‌ ಆಗಿ ಕಾಣಿಸಿಕೊಂಡಿದ್ದಾರೆ.

ಎಂಟಿವಿಯಲ್ಲಿ ರಿಯಾಲಿಟಿ ಶೋ MTV ಹಸ್ಲ್ ಸೀಸನ್ 3 (MTV Hustle season 3) ಪ್ರಸಾರವಾಗುತ್ತಿದೆ. ಕಾರ್ಯಕ್ರಮದ ಪ್ರೋಮೊ ಔಟ್‌ ಆಗಿದ್ದು, ನಟಿ ಸಮಂತಾ ರ್‍ಯಾಪರ್‌ ಬಾದ್‌ಶಾ ಅವರೊಂದಿಗೆ ತೀರ್ಪುಗಾರರ ಕುರ್ಚಿಯಲ್ಲಿ ಕುಳಿತಿದ್ದಾರೆ. ಹೈದರಾಬಾದ್ ಸ್ಪರ್ಧಿ ಕೇಡೆನ್ ಶರ್ಮಾ ಅವರ ಹಿಪ್-ಹಾಪ್ ಬೀಟ್‌ಗಳನ್ನು ಎಂಜಾಯ್ ಮಾಡಿದ್ದಾರೆ.

ರಿಯಾಲಿಟಿ ಶೋನಲ್ಲಿ ಭಾಗಿಯಾಗಿದ್ದ ಚಿತ್ರಗಳನ್ನು ಸಮಂತಾ ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಜೀನ್ಸ್ ಧರಿಸಿ ಸಖತ್ ಟ್ರೆಂಡಿಯಾಗಿ ಕಾಣುತ್ತಿದ್ದಾರೆ ಸಮಂತಾ. ನಟಿ ಕೇವಲ ಸಿನಿಮಾ ಮಾತ್ರವಲ್ಲದೇ ಆಹಾ ಒಟಿಟಿಯಲ್ಲಿ ಸ್ಯಾಮ್ ಜಾಮ್ ಮತ್ತು ಒಂದೆರಡು ಸಂದರ್ಶನಗಳನ್ನು ಹೋಸ್ಟ್ ಮಾಡಿದ್ದರು. ಹಿಂದಿಯ ‘ಫ್ಯಾಮಿಲಿ ಮ್ಯಾನ್ 2’ ಸೀರಿಸ್ ಬಳಿಕ ನಟಿ ಸಮಂತಾ ಬಾಲಿವುಡ್‌ನಲ್ಲಿ ಹೆಚ್ಚು ಫಾಲೋವರ್ಸ್‌ಗಳನ್ನು ಗಳಿಸಿದ್ದರು. ಹಲವು ಜಾಹೀರಾತುಗಳಲ್ಲಿಯೂ ನಟಿ ಕಾಣಿಸಿಕೊಂಡಿದ್ದಾರೆ.

ಇದನ್ನೂ ಓದಿ: Samantha Ruth Prabhu: ಸಮಂತಾ ರೊಮ್ಯಾಂಟಿಕ್‌ ಪೋಸ್‌ಗೆ ‌’ಲುಕ್ಕಿಂಗ್ ಲೈಕ್ ಎ ವಾವ್’ ಅಂದ್ರು ಫ್ಯಾನ್ಸ್!

ಇದೀಗ ನಟಿ ಬಾದ್‌ಶಾ ಜತೆಗೆ ರಿಯಾಲಿಟಿ ಶೋನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅತಿಥಿಯಾಗಿ ಹೋಗಿದ್ದಾರೆಯೇ ಅಥವಾ ಶೋ ಮುಗಿಯುವವರೆಗೂ ತೀರ್ಪುಗಾರರಾಗಿರುತ್ತಾರೆಯೇ ಎಂಬುದು ಪಕ್ಕಾ ಆಗಿಲ್ಲ.

ಮುಂದೆ, ಸಮಂತಾ ಸಿಟಾಡೆಲ್‌ನ ಭಾರತೀಯ ಆವೃತ್ತಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ, ಇದರಲ್ಲಿ ವರುಣ್ ಧವನ್ ಸಹ ನಟಿಸಿದ್ದಾರೆ. ಇದನ್ನು ರಾಜ್ ಮತ್ತು ಡಿಕೆ ನಿರ್ದೇಶಿಸಿದ್ದಾರೆ.

Exit mobile version