Site icon Vistara News

Samantha Ruth Prabhu : ಹೈದರಾಬಾದ್‌ನಲ್ಲಿ 7.8 ಕೋಟಿ ರೂ. ಮೌಲ್ಯದ ಐಷಾರಾಮಿ ಮನೆ ಖರೀದಿಸಿದ ಸಮಂತಾ

#image_title

ಹೈದರಾಬಾದ್‌: ನಟಿ ಸಮಂತಾ (Samantha Ruth Prabhu) ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಸುದ್ದಿಯಲ್ಲಿರುವ ನಟಿ. ಅವರ ಇತ್ತೀಚೆಗೆ ಬಿಡುಗಡೆಯಾದ ಶಾಕುಂತಲಂ ಸಿನಿಮಾ ಧನಾತ್ಮಕ ಮತ್ತು ಋಣಾತ್ಮಕ ಪ್ರತಿಕ್ರಿಯೆಗಳನ್ನು ಪಡೆದುಕೊಂಡಿತ್ತು. ಇದೀಗ ನಟಿ ಹೈದರಾಬಾದ್‌ನಲ್ಲಿ ಐಷಾರಾಮಿ ಮನೆಯೊಂದನ್ನು ಖರೀದಿಸಿದ್ದು, ಮತ್ತೆ ಸುದ್ದಿಯಲ್ಲಿದ್ದಾರೆ.

ಹೈದರಾಬಾದ್‌ನ ಜಯಭೇರಿ ಆರೆಂಜ್‌ ಕೌಂಟಿಯಲ್ಲಿ ಸಮಂತಾ 3BHK ಮನೆಯನ್ನು ಖರೀದಿಸಿದ್ದಾರೆ. ದೊಡ್ಡ ಅಪಾರ್ಟ್‌ಮೆಂಟ್‌ನ 13 ಮತ್ತು 14ನೇ ಮಹಡಿಯಲ್ಲಿ ಈ ಮನೆಯಿದೆ. ಐಷಾರಾಮಿಯಾಗಿರುವ ಈ ಮನೆಯ ಒಟ್ಟು ಮೌಲ್ಯ 7.8 ಕೋಟಿ ರೂ. ಎನ್ನುವ ವರದಿಯಿದೆ.

ಇದನ್ನೂ ಓದಿ: Vijay Deverakonda: ಜನುಮದಿನದಂದು ಸಮಂತಾಗೆ ʻನನ್ನ ರೋಜಾ ನೀನೇʼ ಎಂದ ವಿಜಯ್‌ ದೇವರಕೊಂಡ!
ಅಂದ ಹಾಗೆ ಸಮಂತಾ ಅವರಿಗೆ ಜುಬಿಲೀ ಹಿಲ್ಸ್‌ನಲ್ಲಿ ಈಗಾಗಲೇ ಒಂದು ಮನೆಯಿದೆ. ಅದರಲ್ಲಿ ಅವರು ತಮ್ಮ ಮಾಜಿ ಪತಿ ನಾಗಚೈತನ್ಯ ಅವರೊಂದಿಗೆ ವಾಸವಿದ್ದರು. ಅವರೊಂದಿಗೆ ವಿಚ್ಛೇದನವಾದಾಗಿನಿಂದ ನಟಿ ತಮ್ಮ ಎರಡು ಸಾಕು ನಾಯಿಗಳೊಂದಿಗೆ ಆ ಮನೆಯಲ್ಲಿ ವಾಸವಿದ್ದಾರೆ. ಹಾಗೆಯೇ ನಟಿ ಮುಂಬೈನಲ್ಲಿ ಸೀ ವ್ಯೂವ್‌ ಇರುವಂತಹ 3BHK ಮನೆಯನ್ನು ಖರೀದಿಸಿದ್ದಾರೆ ಎನ್ನುವ ಬಗ್ಗೆಯೂ ವರದಿಯಿದೆ.

ರಿಯಲ್‌ ಎಸ್ಟೇಟ್‌ ಡಾಟಾ ಅನಾಲಿಟಿಕ್ಸ್‌ ಮ್ಯಾಟ್ರಿಕ್‌ ವರದಿಯ ಪ್ರಕಾರ ಸಮಂತಾ ಅವರ ಹೈದರಾಬಾದ್‌ನ ಹೊಸ ಮನೆಯಲ್ಲಿ ಒಟ್ಟು ಆರು ಪಾರ್ಕಿಂಗ್‌ ಸ್ಲಾಟ್‌ಗಳಿವೆ. 13ನೇ ಮಹಡಿಯಲ್ಲಿ 3,920 ಚದರ ಅಡಿ ಮತ್ತು 14ನೇ ಮಹಡಿಯಲ್ಲಿ 4024 ಚದರ ಅಡಿ ಜಾಗವಿದೆ. ಒಟ್ಟು 7944 ಚದರ ಅಡಿ ಜಾಗವಿರುವ ಮನೆಯಲ್ಲಿ ಅತ್ಯುತ್ತ, ಸ್ವಿಮ್ಮಿಂಗ್‌ ಪೂಲ್‌ ಸೌಲಭ್ಯವೂ ಇದೆ ಎನ್ನಲಾಗಿದೆ.

Exit mobile version