ಬೆಂಗಳೂರು: ಪ್ರಸ್ತುತ ಸಿಟಾಡೆಲ್‌ನ ಭಾರತೀಯ ಆವೃತ್ತಿಯ ಚಿತ್ರೀಕರಣದಲ್ಲಿರುವ ಸಮಂತಾ ರುತ್ ಪ್ರಭು (Samantha Ruth Prabhu ) ಅವರು ತಮ್ಮ ಹೊಸ ಫೋಟೊವನ್ನು ಇನ್‌ಸ್ಟಾದಲ್ಲಿ ಹಂಚಿಕೊಂಡಿದ್ದಾರೆ. ಆರೆಂಜ್ ಬಣ್ಣದ ಕಟೌಟ್ ಡ್ರೆಸ್‌ನಲ್ಲಿ ಪೋಸ್ ನೀಡಿದ್ದಾರೆ. ನಟಿ ಸಮಂತಾ ತಮ್ಮ ಗೆಳೆಯರೊಟ್ಟಿಗೆ ಸೇರಿಕೊಂಡು ಸರ್ಬಿಯಾನಲ್ಲಿ ಸುತ್ತಾಡುತ್ತಿದ್ದಾರೆ. ಸರ್ಬಿಯಾದಲ್ಲಿ ತನ್ನ ಕೆಲವು ಗೆಳೆಯರೊಟ್ಟಿಗೆ ಪ್ರವಾಸಿ ತಾಣಗಳಿಗೆ ಭೇಟಿ ನೀಡಿದ್ದಾರೆ. ಕಾಫಿ ಶಾಪ್ಗಳಲ್ಲಿ ಕುಳಿತು ಕಾಫಿ ಕುಡಿದಿದ್ದಾರೆ. ಸಿಟಾಡೆಲ್ ಹಿಂದಿ ವೆಬ್ ಸರಣಿ ಶೂಟಿಂಗ್ನಿಂದ ಬಿಡುವು ಪಡೆದಿರುವ ಸಮಂತಾ ವಿದೇಶ ಪ್ರವಾಸದಲ್ಲಿ ತೊಡಗಿದ್ದಾರೆ.
ಚಿತ್ರವನ್ನು ಹಂಚಿಕೊಂಡಿರುವ ಸಮಂತಾ, “ನಾನು ಹಲವು ಶರ್ಟ್‌ಗಳಿಗಿಂತ ಹೆಚ್ಚಿನದನ್ನು ಹೊಂದಿದ್ದೇನೆ. ನನಗೆ ನೆನಪಿರುವ ದಿನಗಳಲ್ಲಿ ಹೊಸ ಉಡುಪುಗಳು ಹೊರಬರುತ್ತಿವೆ” ಎಂದು ಸನ್‌ಗ್ಲಾಸ್ ಇಮೋಜಿಯೊಂದಿಗೆ ಕ್ಯಾಪ್ಷನ್ ನೀಡಿದ್ದಾರೆ.
ಸಿಟಾಡೆಲ್‌ನ ಸೆರ್ಬಿಯಾ ಸ್ಕೆಡ್ಯೂಲ್‌ವನ್ನು ನಟಿ ಮುಗಿಸಿದ್ದಾರೆ. ರಾಜ್ ಮತ್ತು ಡಿಕೆ, ಸಹ-ನಟ ಸಾಕಿಬ್ ಸಲೀಮ್ ಅವರೊಂದಿಗಿನ ಚಿತ್ರವನ್ನು ತಮ್ಮ ಇನ್‌ಸ್ಟಾ ಸ್ಟೋರೀಸ್‌ನಲ್ಲಿ ಹಂಚಿಕೊಂಡಿದ್ದಾರೆ. ಪ್ರಿಯಾಂಕಾ ಚೋಪ್ರಾ ನಟಿಸಿರುವ ಇಂಗ್ಲಿಷ್ ವೆಬ್ ಸರಣಿಯ ಹಿಂದಿ ಅವತರಣಿಕೆ ಇದಾಗಿದೆ. ಇಂಗ್ಲಿಷ್‌ನಲ್ಲಿ ರೂಸ್ಸೋ ಬ್ರದರ್ಸ್ ಈ ವೆಬ್ ಸರಣಿಗೆ ಚಿತ್ರಕತೆ ಬರೆದು ನಿರ್ಮಾಣ ಮಾಡಿದ್ದರೆ ಹಿಂದಿಯಲ್ಲಿ ರಾಜ್ ಮತ್ತು ಡಿಕೆ ನಿರ್ದೇಶನ ಮಾಡುತ್ತಿದ್ದಾರೆ. ಈ ವೆಬ್ ಸರಣಿಯು ಅಮೆಜಾನ್ ಪ್ರೈಂನಲ್ಲಿ ಬಿಡುಗಡೆ ಆಗಲಿದೆ.
ಇದನ್ನೂ ಓದಿ: Samantha Ruth Prabhu: ಕೈಯಲ್ಲಿ ಬಿಯರ್ ಬಾಟಲಿ ಹಿಡಿದು ಊ ಅಂಟಾವ ಹಾಡಿಗೆ ಸಖತ್ ಸ್ಟೆಪ್ ಹಾಕಿದ ಸಮಂತಾ!
ಸಮಂತಾ ರುತ್ ಪ್ರಭು (Samantha) ಮತ್ತು ವಿಜಯ್ ದೇವರಕೊಂಡ (Vijay Devarakonda) ಕಾಂಬಿನೇಶನ್ ಸಿನಿಮಾವಾದ ʼಖುಷಿʼ ಇದೇ ಸೆಪ್ಟೆಂಬರ್ 1ರಂದು ವಿಶ್ವಾದ್ಯಂತ ಬಿಡುಗಡೆಯಾಗುತ್ತಿದೆ. 2018ರ ʼಮಹಾನಟಿʼ ಚಿತ್ರದ ನಂತರ ವಿಜಯ್ ಹಾಗೂ ಸ್ಯಾಮ್ ಒಟ್ಟಿಗೆ ತೆರೆ ಮೇಲೆ ಕಾಣಿಸಿಕೊಳ್ಳುತ್ತಿದ್ದಾರೆ. ʼಖುಷಿʼ ಚಿತ್ರವನ್ನು ಶಿವ ನಿರ್ವಾಣ ನಿರ್ದೇಶಿಸುತ್ತಿದ್ದಾರೆ.