ಬೆಂಗಳೂರು: ನಟಿ ಸಮಂತಾ ರುತ್ ಪ್ರಭು ಅವರು ಮುಂಬರುವ ಚಿತ್ರ `ಶಾಕುಂತಲಂ’ ಪ್ರಚಾರದಲ್ಲಿ ನಿರತರಾಗಿದ್ದಾರೆ. ಸಂದರ್ಶನವೊಂದರಲ್ಲಿ ನಟಿ ತಮ್ಮ ಮೈಯೋಸಿಟಿಸ್ ಕಾಯಿಲೆ ಬಗ್ಗೆ ಮಾತನಾಡಿದ್ದಾರೆ. ಕಾಯಿಲೆ ಇದ್ದ ಸಂದರ್ಭದಲ್ಲಿ ಸಮಂತಾ ಹೇಗೆ ಕಾಣುತ್ತಿದ್ದರು, ಹೇಗೆ ತಮ್ಮ ಮೇಲೆ ನಿಯಂತ್ರಣವನ್ನು ಕಳೆದುಕೊಂಡರು ಎಂಬುದರ ಕುರಿತು ಮಾತನಾಡಿದರು.
ಕಳೆದ ವರ್ಷ, ನಟಿ ಮೈಯೋಸಿಟಿಸ್ ಕಾಯಿಲೆಯಿಂದ ಬಳಲುತ್ತಿರುವ ಕಾರಣ ಸಿನಿಮಾದಿಂದ ಸ್ವಲ್ಪ ಬ್ರೇಕ್ ತೆಗೆದುಕೊಂಡಿದ್ದರು. ಬಾಲಿವುಡ್ ಬಬಲ್‌ಗೆ ನೀಡಿದ ಸಂದರ್ಶನದಲ್ಲಿ, ಸಮಂತಾ ತನ್ನ ದೇಹದ ಮೇಲೆ ಮೈಯೋಸಿಟಿಸ್ ಪರಿಣಾಮಗಳ ಬಗ್ಗೆ ಮಾತನಾಡಿದ್ದಾರೆ.
“ನಟನಾಗಿ, ನೀವು ಯಾವಾಗಲೂ ಪರಿಪೂರ್ಣತೆ ಹೊಂದಿರಬೇಕು. ಪರಿಪೂರ್ಣತೆ ನಿಮ್ಮ ಚಲನಚಿತ್ರಗಳಲ್ಲಿ, ಇನ್‌ಸ್ಟಾಗ್ರಾಮ್‌ನಲ್ಲಿ ಹಾಕುವ ಪೋಸ್ಟ್‌ನಲ್ಲಿ, ಈರೀತಿಯ ನಿರೀಕ್ಷೆ ನೋಡುಗರಲ್ಲಿ ಇರುತ್ತದೆ. ಹಿಂದೆ ನಾನು ಯಾರೆಂದು ಒಪ್ಪಿಕೊಳ್ಳಲು ಸಾಧ್ಯವಾಗಲಿಲ್ಲʼʼಎಂದರು.
ತನ್ನ ದೇಹದ ಮೇಲೆ ಅಡ್ಡಪರಿಣಾಮಗಳ ಸ್ಥಿತಿ ಬಗ್ಗೆ ನಟಿ ಮಾತನಾಡಿ ʻʻಒಂದು ದಿನ ನಾನು ಊದಿಕೊಳ್ಳುತ್ತಿದ್ದೆ, ಒಂದು ದಿನ ನಾನು ದಪ್ಪವಾಗುತ್ತಿದ್ದೆ, ಒಂದೊಂದು ಬಾರಿ ನಾನು ಅನಾರೋಗ್ಯಕ್ಕೆ ಒಳಗಾಗುತ್ತಿದ್ದೆ. ನಾನು ಹೇಗೆ ಕಾಣುತ್ತೇನೆ ಎಂಬುದರ ಮೇಲೆ ನನಗೆ ಯಾವುದೇ ಸ್ಪಷ್ಟತೆ ಇರುತ್ತಿರಲಿಲ್ಲ. ನಿಯಂತ್ರಣವಿರುತ್ತಿರಲ ಲ್ಲ. ಕಣ್ಣಿಗೆ ಬೆಳಕು ಬಿದ್ದಾಕ್ಷಣ ಸೆನ್‌ಸಿಟಿವ್ ಆಗುತ್ತಿದ್ದೆ. ನಾನು ಸ್ಟೈಲಿಗಾಗಿ ಹಾಗೇ ಫನ್‌ಗಾಗಿ ಕನ್ನಡಕವನ್ನು ಧರಿಸುತ್ತಿರಲಿಲ್ಲ. ಬೆಳಕು ವಾಸ್ತವವಾಗಿ ನನ್ನ ಕಣ್ಣುಗಳ ಮೇಲೆ ಪರಿಣಾಮ ಬೀರುತ್ತಿತ್ತು. ನನಗೆ ತೀವ್ರವಾದ ಮೈಗ್ರೇನ್ ಇತ್ತು ಅದು ಮತ್ತಷ್ಟು ಸಮಸ್ಯೆಯಾಗಿ ಕಣ್ಣುಗಳಲ್ಲಿ ನೋವು ಕಾಣಿಸಿಕೊಳ್ಳುತ್ತಿತ್ತು. ಇದು ಕಳೆದ 8 ತಿಂಗಳುಗಳಿಂದ ಇದೆ. ಬಹುಶಃ ಕಲಾವಿದನಿಗೆ ಸಂಭವಿಸುವ ಕೆಟ್ಟ ವಿಷಯ ಇದುʼʼಎಂದು ಹೇಳಿಕೊಂಡಿದ್ದಾರೆ.
ಇದನ್ನೂ ಓದಿ: Actress Samantha: ಮನೆಯವರ ವಿರೋಧ ಕಟ್ಟಿಕೊಂಡು ‘ಊ ಅಂಟಾವಾ’ ಹಾಡಿಗೆ ಕುಣಿದಿದ್ದ ನಟಿ ಸಮಂತಾ
ಶಾಕುಂತಲಂನಲ್ಲಿ, ಸಮಂತಾ ಮೇನಕಾ ಮತ್ತು ವಿಶ್ವಾಮಿತ್ರರ ಮಗಳು ಶಕುಂತಲಾ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಗುಣಶೇಖರ್ ನಿರ್ಮಾಣ ಮತ್ತು ನಿರ್ದೇಶನದ ಈ ಚಿತ್ರ ಏಪ್ರಿಲ್ 14ರಂದು ಹಿಂದಿ, ತಮಿಳು, ಮಲಯಾಳಂ ಮತ್ತು ಕನ್ನಡದಲ್ಲಿ ಬಿಡುಗಡೆಯಾಗಲಿದೆ.