Site icon Vistara News

Samantha Ruth Prabhu: ಸಮಂತಾ ರೊಮ್ಯಾಂಟಿಕ್‌ ಪೋಸ್‌ಗೆ ‌’ಲುಕ್ಕಿಂಗ್ ಲೈಕ್ ಎ ವಾವ್’ ಅಂದ್ರು ಫ್ಯಾನ್ಸ್!

Samantha Ruth Prabhu Poses In a Bathrobe

ಬೆಂಗಳೂರು: ಸಮಂತಾ ರುತ್ ಪ್ರಭು ಭೂತಾನ್‌ ಎಂಜಾಯ್‌ ಮಾಡುತ್ತಿದ್ದಾರೆ. ಸ್ನೇಹಿತರೊಂದಿಗೆ ಸಂತೋಷದ ಕ್ಷಣಗಳನ್ನು ಅನುಭವಿಸುತ್ತಿದ್ದಾರೆ. ಜತೆಗೆ ಸಮಂತಾ ಬಾತ್‌ರೂಮ್‌ನಲ್ಲಿ ಸಖತ್‌ ರೊಮ್ಯಾಂಟಿಕ್‌ ಪೋಸ್ ನೀಡಿದ್ದಾರೆ. ಈ ಪೋಟೊವನ್ನು ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಕಮೆಂಟ್‌ನಲ್ಲಿ ಸ್ಯಾಮ್‌ ಫ್ಯಾನ್ಸ್‌ ʻʻಲುಕ್ಕಿಂಗ್ ಲೈಕ್ ಎ ವಾವ್ʼʼಎಂದು ಹೊಗಳಿದ್ದಾರೆ.

ಈ ಹಿಂದೆ, ಸಮಂತಾ ಭೂತಾನ್‌ ಫೋಟೊಗಳನ್ನು ಹಂಚಿಕೊಂಡಿದ್ದರು. ಕೆಲವು ಕ್ಲಿಕ್‌ಗಳಲ್ಲಿ, ತನ್ನ ಸ್ನೇಹಿತರೊಂದಿಗೆ ಪೋಸ್ ನೀಡುತ್ತಿರುವುದು ಕಂಡುಬಂದಿದೆ. ಇದೀಗ ಈ ಹಾಟ್‌ ಫೋಟೊ ಕಂಡು ನೆಟ್ಟಿಗರು “ಇಡೀ ಚಿತ್ರರಂಗದಲ್ಲಿ ನಿಮಗಿಂತ ಉತ್ತಮರು ಯಾರೂ ಇಲ್ಲ, ನೀವು ಅತ್ಯಂತ ಸುಂದರ ಮತ್ತು ಬಹುಕಾಂತೀಯ” ಎಂದು ಬರೆದಿದ್ದಾರೆ.

ಸಮಂತಾ ರುತ್ ಪ್ರಭು ಪ್ರಸ್ತುತ ನಟನೆಯಿಂದ ಬ್ರೇಕ್‌ ಪಡೆದುಕೊಂಡಿದ್ದಾರೆ. ಮೈಯೋಸಿಟಿಸ್ ಟ್ರೀಟ್‌ಮೆಂಟ್‌ನಲ್ಲಿ ಸಮಂತಾ ಇದ್ದಾರೆ. ಇತ್ತೀಚೆಗೆ, ನಟಿ ತನ್ನ ಕ್ರೈಯೊಥೆರಪಿಯ ಫೋಟೊವನ್ನು ಹಂಚಿಕೊಂಡಿದ್ದರು. ಸಮಂತಾ ಕೊನೆಯ ಬಾರಿಗೆ ವಿಜಯ್ ದೇವರಕೊಂಡ ನಾಯಕನಾಗಿ ನಟಿಸಿದ ಖುಷಿಯಲ್ಲಿ ಕಾಣಿಸಿಕೊಂಡಿದ್ದರು. ಚಿತ್ರವು ಮಿಶ್ರ ವಿಮರ್ಶೆಗಳನ್ನು ಗಳಿಸಿತು. ಗಲ್ಲಾಪೆಟ್ಟಿಗೆಯಲ್ಲಿ 70 ಕೋಟಿ ರೂಪಾಯಿಗಳನ್ನು ಗಳಿಸಿತು.

ಇದನ್ನೂ ಓದಿ: Samantha Ruth Prabhu: ಆಸ್ಪತ್ರೆಗೆ ದಾಖಲಾದ ಸಮಂತಾ; ಏನಾಯಿತು?

ಮುಂದೆ, ಸಮಂತಾ ಸಿಟಾಡೆಲ್‌ನ ಭಾರತೀಯ ಆವೃತ್ತಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ, ಇದರಲ್ಲಿ ವರುಣ್ ಧವನ್ ಸಹ ನಟಿಸಿದ್ದಾರೆ. ಇದನ್ನು ರಾಜ್ ಮತ್ತು ಡಿಕೆ ನಿರ್ದೇಶಿಸಿದ್ದಾರೆ.

Exit mobile version