Site icon Vistara News

Samantha | ಹ್ಯಾಶ್‌ ಮತ್ತು ಸಶಾ: ತಮ್ಮ ಮುದ್ದು ನಾಯಿಗಳ ಜತೆ ಇರುವ ಫೋಟೊ ಹಂಚಿಕೊಂಡ ಸಮಂತಾ!

Samantha

ಬೆಂಗಳೂರು: ಟಾಲಿವುಡ್‌ ನಟಿ ಸಮಂತಾ (Samantha) ಆಗಾಗ ತಮ್ಮ ಮುದ್ದು ನಾಯಿಗಳ ಜತೆ ಇರುವ ಫೋಟೊಗಳನ್ನು ಶೇರ್‌ ಮಾಡಿಕೊಳ್ಳುತ್ತಿರುತ್ತಾರೆ. ಈ ಸಾರಿ ಹ್ಯಾಶ್ ಮತ್ತು ಸಶಾ ನಾಯಿಗಳ ಜತೆ ಇರುವ ಫೋಟೊ ಹಂಚಿಕೊಂಡು “ಚಿಂತಿಸಬೇಡಿ ಮಮ್ಮಿ.. ನಂಗೆ ನಿಮ್ಮ ಬೆನ್ನು ಸಿಕ್ಕಿದೆʼʼ ಎಂಬ ಮುದ್ದಾದ ಶೀರ್ಷಿಕೆಯನ್ನು ಬರೆದಿದ್ದಾರೆ. ಚಿತ್ರದಲ್ಲಿ ನಟಿ ಸಮಂತಾ ಅವರು ಸೋಫಾದಲ್ಲಿ ಮಲಗಿಕೊಂಡಿದ್ದರೆ ಒಂದು ನಾಯಿ ಅವರ ತಲೆಯ ಮೇಲಿದೆ ಇನ್ನೊಂದು ಅವರ ಬೆನ್ನಿನ ಪಕ್ಕದಲ್ಲಿ ಕುಳಿತುಕೊಂಡಿದೆ.

ಸಮಂತಾ ನಟಿಸಿದ, ಇತ್ತೀಚೆಗೆ ತೆರೆಕಂಡ ʻಯಶೋದ’ ಸಿನಿಮಾ ಭರ್ಜರಿ ಸಕ್ಸಸ್ ಕಂಡಿತ್ತು. ಅದರಲ್ಲಿನ ಸಮಂತಾ ನಟನೆಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿತ್ತು. ಮೊನ್ನೆಯಷ್ಟೇ ಶಾಕುಂತಲಂ ಚಿತ್ರದ ಟ್ರೈಲರ್ ಲಾಂಚ್‌ನಲ್ಲಿ ಸಿಂಪಲ್ ಎಂಟ್ರಿ ಕೊಟ್ಟು ಅಭಿಮಾನಿಗಳ ಮೆಚ್ಚುಗೆಗೆ ಪಾತ್ರರಾಗಿದ್ದರು ಸಮಂತಾ. ಮೈಯೋಸಿಟಿಸ್ ಕಾಯಿಲೆಯಿಂದ ಬಳಲುತ್ತಿದ್ದ ನಟಿ ಸಮಂತಾ ಮತ್ತೆ ಅಭಿಮಾನಿಗಳ ಮುಂದೆ ಬಂದಿದ್ದಾರೆ. ಬ್ರೇಕ್ ತೆಗೆದುಕೊಂಡಿದ್ದ ಬಗ್ಗೆ ಟ್ರೋಲ್ ಮಾಡಿದವರಿಗೆ ಸಮಂತಾ ತಿರುಗೇಟು ನೀಡಿದ್ದಾರೆ.

ಇದನ್ನೂ ಓದಿ | Samantha Troll | ಸಮಂತಾ ಕಾಂತಿ ಕಡಿಮೆಯಾಯಿತು ಎಂದ ಟ್ರೋಲಿಗರು; ಖಡಕ್‌ ಪ್ರತಿಕ್ರಿಯೆ ಕೊಟ್ಟು, ಬಾಯಿ ಮುಚ್ಚಿಸಿದ ನಟಿ

ಗುಣಮುಖರಾಗಿ ಬಂದ ನಟಿ ಮುಖದಲ್ಲಿ ಮೊದಲಿನ ಕಳೆ ಇಲ್ಲ ಎಂದು ಕೆಲವರು ಟ್ರೋಲ್ ಮಾಡಿದ್ದಾರೆ. ಇನ್ನು ಕೆಲವರು ಸ್ಯಾಮ್ ಅನಾರೋಗ್ಯದ ಬಗ್ಗೆ ತಮಾಷೆ ಮಾಡಿದ್ದಾರೆ. ಸಮಂತಾ ಈಗ ಸ್ಟ್ರಾಂಗ್ ಇಲ್ಲ, ದುರ್ಬಲಳಾಗಿದ್ದಾರೆ ಎಂದು ಕಮೆಂಟ್ ಮಾಡಿದ್ದಾರೆ. ಶಾಕುಂತಲಂ ಟ್ರೈಲರ್‌ ಲಾಂಚ್ ಕಾರ್ಯಕ್ರಮಕ್ಕೆ ಬಂದಿದ್ದ ಸಮಂತಾ ಫೋಟೊಗಳು ಟ್ರೋಲ್ ಆಗಿದೆ. ಈ ಟ್ರೋಲ್‌ಗಳಿಗೆ ಸಮಂತಾ ಸರಿಯಾಗಿಯೇ ಉತ್ತರ ನೀಡಿದ್ದಾರೆ. ʻʻʻನನ್ನಂತೆ ನೀವೂ ಕೂಡ ತಿಂಗಳುಗಳ ಕಾಲ ಟ್ರೀಟ್ಮೆಂಟ್, ಟ್ಯಾಬ್ಲೆಟ್ ತೆಗೆದುಕೊಳ್ಳುವಂತೆ ಆಗದಿರಲಿ ಎಂದು ನಾನು ಪ್ರಾರ್ಥಿಸುತ್ತೇನೆʼʼ ಎಂದು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.

ಇದನ್ನೂ ಓದಿ | Samantha | ʻಶಾಕುಂತಲಂʼ ಟ್ರೈಲರ್ ಲಾಂಚ್ ವೇಳೆ ಚಿತ್ರತಂಡ ಬೆಂಬಲ‌ ನೆನೆದು ಕಣ್ಣೀರು ಹಾಕಿದ ಸಮಂತಾ!

Exit mobile version