ಬೆಂಗಳೂರು: ನಟಿ ಸಮಂತಾ ರುತ್ ಪ್ರಭು (Samantha Ruth Prabhu) ಅಭಿನಯದ ಶಾಕುಂತಲಂ ಸಿನಿಮಾ ಏಪ್ರಿಲ್ 14ರಂದು ವಿಶ್ವಾದ್ಯಂತ ತೆರೆ ಕಂಡಿದೆ. ಆರಂಭಿಕ ವಾರಾಂತ್ಯದಲ್ಲಿ, ತಮಿಳು ಮತ್ತು ಹಿಂದಿಯಲ್ಲಿ ಡಬ್ ಮಾಡಿ ಬಿಡುಗಡೆಯಾದ ಗುಣಶೇಖರ್ ನಿರ್ದೇಶನದ ಈ ಸಿನಿಮಾ 10 ಕೋಟಿ ರೂ. ಗೂ ಅಧಿಕ ಗಳಿಕೆ ಕಾಣುವಲ್ಲಿ ಯಶಸ್ವಿಯಾಗಲಿಲ್ಲ. 50 ಕೋಟಿ ರೂ.ಗೂ ಹೆಚ್ಚು ಬಜೆಟ್‌ನಲ್ಲಿ ನಿರ್ಮಿಸಲಾದ ಚಿತ್ರಕ್ಕೆ ಕಡಿಮೆ ಓಪನಿಂಗ್ ಪಡೆದಿದೆ ಎಂದು ವರದಿಯಾಗಿದೆ. ಶಾಕುಂತಲಂ ಫಲಿತಾಂಶ ನೋಡಿ ಸಮಂತಾ ಖಿನ್ನತೆಗೆ ಒಳಗಾಗಿದ್ದಾರೆ ಎಂದು ಉಮೈರ್ ಸಂಧು ಪೋಸ್ಟ್ ಮಾಡಿದ್ದಾರೆ. ಅಷ್ಟೇ ಅಲ್ಲದೇ ಆಕೆಯನ್ನು ಫ್ಲಾಪ್ ರಾಣಿ ಎಂದೂ ಕರೆದಿದ್ದಾರೆ.
ಶಾಕುಂತಲಂನಲ್ಲಿ, ಸಮಂತಾ ಅವರು ಮೇನಕಾ ಮತ್ತು ವಿಶ್ವಾಮಿತ್ರರ ಪುತ್ರಿ ಶಕುಂತಲಾ ಪಾತ್ರವನ್ನು ನಿರ್ವಹಿಸಿದ್ದಾರೆ. ನಿರ್ದೇಶಕ ಗುಣಶೇಖರ್ ಅವರೊಂದಿಗೆ ಮೊದಲ ಬಾರಿ ನಟಿ ಕೈ ಜೋಡಿಸಿದ್ದಾರೆ. ಟ್ರೇಡ್ ವಿಶ್ಲೇಷಕ ತ್ರಿನಾಥ್ ಸಿನಿಮಾ ಕಲೆಕ್ಷನ್ ಬಗ್ಗೆ ನಿರಾಸೆಯನ್ನು ವ್ಯಕ್ತಪಡಿಸಿದ್ದಾರೆ. ಸಮಂತಾ-ನಟಿಸಿದ ಚಿತ್ರದಲ್ಲಿ ಈ ಸಿನಿಮಾ ಕಡಿಮೆ ಓಪನಿಂಗ್ ಆಗಿದೆ ಎಂದು ಹೇಳಿದ್ದಾರೆ.
ಟ್ರೇಡ್ ವಿಶ್ಲೇಷಕ ತ್ರಿನಾಥ್ ಮಾತನಾಡಿ ʻʻ”ಸಮಂತಾ ಅವರ ಸಿನಿಮಾಗಳು ಯಾವಾಗಲೂ ಉತ್ತಮವಾದ ಆರಂಭಿಕ ಪ್ರದರ್ಶನಗಳನ್ನು ದಾಖಲಿಸುವಲ್ಲಿ ಯಶಸ್ವಿಯಾಗಿತ್ತು. ಅವರ ಸಿನಿಮಾಗಳಲ್ಲಿ ಕೊನೆಯದಾಗಿ ಬಿಡುಗಡೆಯಾದ ಯಶೋದಾ ಕೂಡ ಮಿಶ್ರ ವಿಮರ್ಶೆಗಳನ್ನು ಪಡೆದಿದ್ದಾರೂ ಬಾಕ್ಸ್ ಆಫೀಸ್‌ನಲ್ಲಿ ಅಷ್ಟಾಗಿ ಕಲೆಕ್ಷನ್ ಮಾಡಿಲ್ಲ. ಶಾಕುಂತಲಂ ಸಿನಿಮಾದ ಮೊದಲ ಪ್ರದರ್ಶನಲ್ಲಿಯೇ ನೋಡುಗರಿಂದ ಅಸಮಾಧಾನ ವ್ಯಕ್ತವಾಯಿತು. ಪ್ರಪಂಚದಾದ್ಯಂತ ಮೊದಲ ದಿನ ಸುಮಾರು 5 ಕೋಟಿ ರೂ. ಗಳಿಸಿದ ನಂತರ, ಚಿತ್ರ ಮತ್ತೆ ಚೇತರಿಸಿಕೊಳ್ಳಲೇ ಇಲ್ಲ. ಆರಂಭಿಕ ವಾರಾಂತ್ಯದಲ್ಲಿ ಜಾಗತಿಕವಾಗಿ 10 ಕೋಟಿ ರೂ. ಹೆಚ್ಚು ಕಲೆಕ್ಷನ್ ಮಾಡಿಲ್ಲ’ ಎಂದು ತ್ರಿನಾಥ್ ಹೇಳಿದ್ದಾರೆ.
ತೆಲುಗು ಟ್ರೇಡ್ ಪೋರ್ಟಲ್ ಆಂಧ್ರ ಬಾಕ್ಸ್ ಆಫೀಸ್ ಏಪ್ರಿಲ್ 17ರಂದು ಟ್ವೀಟ್‌ನಲ್ಲಿ ಹಂಚಿಕೊಂಡಿದ್ದು ʻʻಶಾಕುಂತಲಂ 50 ಕೋಟಿ ರೂ. ಹೆಚ್ಚು ಬಜೆಟ್‌ನಲ್ಲಿ ನಿರ್ಮಿಸಲಾದ ಚಿತ್ರಕ್ಕೆ ಅತ್ಯಂತ ಕಡಿಮೆ ಓಪ್‌ನಿಂಗ್ʼʼಎಂದು ಬರೆದುಕೊಂಡಿದೆ.
ಇದನ್ನೂ ಓದಿ: Samantha Ruth Prabhu: ಸಮಂತಾ ಅಭಿನಯದ `ಶಾಕುಂತಲಂ’ ಸಿನಿಮಾದ ಮೊದಲ ದಿನದ ಕಲೆಕ್ಷನ್ ಎಷ್ಟು?
ಪ್ಲಾಪ್ ರಾಣಿ ಎಂದ ಉಮೈರ್ ಸಂಧು
ಶಾಕುಂತಲಂ ಚಿತ್ರದಿಂದ ನಿರ್ಮಾಪಕರು ಅಪಾರ ನಷ್ಟ ಅನುಭವಿಸಿದ್ದಾರೆ ಎಂದು ಉಮೈರ್ ಸಂಧು ಹೇಳಿದ್ದಾರೆ. ಸಮಂತಾ ಸಿನಿ ಕೆರಿಯರ್ ಮುಗಿದಿದೆ ಎಂದು ಉಮೈರ್ ಮಾಡಿರುವ ಕಾಮೆಂಟ್ಗಳು ವೈರಲ್ ಆಗುತ್ತಿವೆ. ಶಾಕುಂತಲಂ ಬಿಡುಗಡೆಯಾಗಿ 3 ದಿನವಾದರೂ ಗಮನಾರ್ಹ ಕಲೆಕ್ಷನ್ ಮಾಡಿಲ್ಲ ಎಂದು ಈ ರೀತಿ ಪ್ರತಿಕ್ರಿಯಿಸಿದ್ದಾರೆ ಎನ್ನಲಾಗುತ್ತಿದೆ.
ಶಾಕುಂತಲಂ ಫಲಿತಾಂಶ ನೋಡಿ ಸಮಂತಾ ಖಿನ್ನತೆಗೆ ಒಳಗಾಗಿದ್ದಾರೆ ಎಂದು ಉಮೈರ್ ಸಂಧು ಪೋಸ್ಟ್ ಮಾಡಿದ್ದಾರೆ. ಅಷ್ಟೇ ಅಲ್ಲದೇ ಆಕೆಯನ್ನು ಫ್ಲಾಪ್ ರಾಣಿ ಎಂದೂ ಕರೆದಿದ್ದಾರೆ.
ಉಮೈರ್ ಸಂಧು ಟ್ವೀಟ್
ತಮಿಳು, ತೆಲುಗು, ಮಲಯಾಳಂ, ಕನ್ನಡ ಮತ್ತು ಹಿಂದಿ ಸೇರಿದಂತೆ ಐದು ಭಾಷೆಗಳಲ್ಲಿ ಚಿತ್ರ ಬಿಡುಗಡೆಯಾಗಿದೆ. ಮಹಾಕವಿ ಕಾಳಿದಾಸನ ʻಅಭಿಜ್ಞಾನ ಶಾಕುಂತಲಂʼ ನಾಟಕವನ್ನು ಆಧರಿಸಿ ಚಿತ್ರ ನಿರ್ಮಾಣವಾಗಿದೆ. ಟಾಲಿವುಡ್ ನಟ ಅಲ್ಲು ಅರ್ಜುನ್ ಮಗಳು ಅರ್ಹಾ ಕೂಡ ಈ ಚಿತ್ರಕ್ಕೆ ಬಣ್ಣ ಹಚ್ಚಿದ್ದಾರೆ. ನೀಲಿಮಾ ಗುಣ ಮತ್ತು ದಿಲ್ ರಾಜು ನಿರ್ಮಾಣ ಮಾಡಿದ್ದಾರೆ. ಸಚಿನ್ ಖೇಡೇಕರ್, ಅನನ್ಯ ನಾಗಲ್ಲ, ಮೋಹನ್ ಬಾಬು, ಗೌತಮಿ ಮತ್ತು ಅದಿತಿ ಬಾಲನ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.