Site icon Vistara News

Samantha Ruth Prabhu: ಒಟಿಟಿಗೆ ಬಂತು ಸಮಂತಾ ಅಭಿನಯದ `ಶಾಕುಂತಲಂ’ ಸಿನಿಮಾ

Samantha Ruth Prabhu Shaakuntalam is now streaming on OTT

ಬೆಂಗಳೂರು: ಟಾಲಿವುಡ್‌ ನಟಿ ಸಮಂತಾ ರುತ್ ಪ್ರಭು (Samantha Ruth Prabhu) ಅವರ ಇತ್ತೀಚೆಗೆ ಬಿಡುಗಡೆಯಾದ `ಶಾಕುಂತಲಂ’ ಸಿನಿಮಾ ಅಷ್ಟಾಗಿ ಯಶಸ್ಸು ಕಂಡಿಲ್ಲ. ಪ್ರೇಕ್ಷಕರ ನಿರೀಕ್ಷೆಗಳನ್ನು ಪೂರೈಸುವಲ್ಲಿ ವಿಫಲವಾಗಿದೆ. ಬಿಡುಗಡೆಯಾದ ಒಂದು ವಾರದ ನಂತರವೂ 60 ಕೋಟಿ ರೂ. ಬಜೆಟ್‌ನಲ್ಲಿ ತಯಾರಾದ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ಕೇವಲ 10 ಕೋಟಿ ರೂ.ಗಳಿಸುವಲ್ಲಿ ಯಶಸ್ವಿಯಾಗಿದೆ. ಇದೀಗ ಸಿನಿಮಾ ಸದ್ದಿಲ್ಲದೇ ಒಟಿಟಿಗೆ ಕಾಲಿಟ್ಟಿದೆ. ಈ ಚಿತ್ರವನ್ನು ‘ಅಮೇಜಾನ್​ ಪ್ರೈಂ ವಿಡಿಯೊʼ (Amazon Prime Video) ಮೂಲಕ ಸ್ಟ್ರೀಮ್​ ಮಾಡಲಾಗುತ್ತಿದೆ.

ಶಾಕುಂತಲಂ ತೆಲುಗು ಭಾಷೆಯ ಪೌರಾಣಿಕ ನಾಟಕ ಚಿತ್ರವಾಗಿದ್ದು, ಗುಣಶೇಖರ್ ಬರೆದು ನಿರ್ದೇಶಿಸಿದ್ದಾರೆ. ಚಿತ್ರವು ಏಪ್ರಿಲ್ 14ರಂದು ತೆಲುಗು, ತಮಿಳು, ಮಲಯಾಳಂ, ಕನ್ನಡ ಮತ್ತು ಹಿಂದಿಯಲ್ಲಿ ಬಿಡುಗಡೆಯಾಗಿತ್ತು. ಶಾಕುಂತಲಂ’ ಸಿನಿಮಾಗೆ ಮೊದಲ ದಿನ ಹೇಳಿಕೊಳ್ಳುವಷ್ಟು ಜನರು ಬಂದಿರಲಿಲ್ಲ. ಪೌರಾಣಿಕ ಕಥೆ ಆಗಿರುವುದರಿಂದ ಒಂದು ವರ್ಗದ ಜನರಿಗೆ ಈ ಸಿನಿಮಾ ಇಷ್ಟವಾಗಿರಲಿಲ್ಲ. ಕೆಲವರಿಂದ ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಈ ಎಲ್ಲ ಕಾರಣದಿಂದ ಸಿನಿಮಾಗೆ ಭರ್ಜರಿ ಓಪನಿಂಗ್ ಸಿಕ್ಕಿರಲಿಲ್ಲ. ಹಾಗಾಗಿ ಬಾಕ್ಸ್​ ಆಫೀಸ್​ನಲ್ಲಿ ಈ ಚಿತ್ರಕ್ಕೆ ನೀರಸ ಪ್ರತಿಕ್ರಿಯೆ ವ್ಯಕ್ತವಾಯಿತು. ಈಗ ಈ ಸಿನಿಮಾ ಒಟಿಟಿ ಅಂಗಳಕ್ಕೆ ಕಾಲಿಟ್ಟಿದೆ. ಇದೀಗ ಒಟಿಟಿ ಮೂಲಕ ಕೂಡ ಈ ಎಲ್ಲ ಭಾಷೆಯಲ್ಲೂ ‘ಶಾಕುಂತಲಂ’ ಚಿತ್ರ ವೀಕ್ಷಣೆಗೆ ಲಭ್ಯವಾಗಿದೆ.

ಇದನ್ನೂ ಓದಿ: Samantha Ruth Prabhu : ಹೈದರಾಬಾದ್‌ನಲ್ಲಿ 7.8 ಕೋಟಿ ರೂ. ಮೌಲ್ಯದ ಐಷಾರಾಮಿ ಮನೆ ಖರೀದಿಸಿದ ಸಮಂತಾ

ಟಾಲಿವುಡ್‌ ನಟ ಅಲ್ಲು ಅರ್ಜುನ್‌ ಮಗಳು ಅರ್ಹಾ ಕೂಡ ಈ ಚಿತ್ರಕ್ಕೆ ಬಣ್ಣ ಹಚ್ಚಿದ್ದಾರೆ. ನೀಲಿಮಾ ಗುಣ ಮತ್ತು ದಿಲ್ ರಾಜು ನಿರ್ಮಾಣ ಮಾಡಿದ್ದಾರೆ. ಸಚಿನ್ ಖೇಡೇಕರ್, ಅನನ್ಯ ನಾಗಲ್ಲ, ಮೋಹನ್ ಬಾಬು, ಗೌತಮಿ ಮತ್ತು ಅದಿತಿ ಬಾಲನ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

ಸಮಂತಾ ಪ್ರಸ್ತುತ ರಾಜ್ ಮತ್ತು ಡಿಕೆ ಅವರ ಮುಂಬರುವ ವೆಬ್ ಸರಣಿ ಸಿಟಾಡೆಲ್‌ನಲ್ಲಿ ಬ್ಯುಸಿಯಾಗಿದ್ದಾರೆ, ಇದರಲ್ಲಿ ವರುಣ್ ಧವನ್ ಸಹ ನಟಿಸಿದ್ದಾರೆ.

Exit mobile version