Site icon Vistara News

Samantha Ruth Prabhu: ವೀಕೆಂಡ್‌ನಲ್ಲಿ ಕುದುರೆ ಸವಾರಿ ಆನಂದಿಸುತ್ತಿರುವ ಫೋಟೊ ಹಂಚಿಕೊಂಡ ನಟಿ ಸಮಂತಾ

Samantha Ruth Prabhu shares PIC as she enjoys horse riding

ಬೆಂಗಳೂರು: ಟಾಲಿವುಡ್‌ ನಟಿ ಸಮಂತಾ ರುತ್ ಪ್ರಭು (Samantha Ruth Prabhu) ತಾವು ಜಿಮ್ ಅಲ್ಲಿ ವರ್ಕ್ ಔಟ್ ಮಾಡುವ ವಿಡಿಯೊ ಹಾಗೂ ಫೋಟೊಗಳನ್ನು ಹೆಚ್ಚಾಗಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಈಗ ವಾರಾಂತ್ಯದಲ್ಲಿ ಕುದುರೆ ಸವಾರಿ ಆನಂದಿಸುತ್ತಿರುವ ಚಿತ್ರವನ್ನು ಹಂಚಿಕೊಂಡಿದ್ದಾರೆ. ಮುಂಬರುವ ಪ್ರಾಜೆಕ್ಟ್‌ಗಳಿಗಾಗಿ ಕುದುರೆ ಸವಾರಿ ಮಾಡುತ್ತಿದ್ದಾರೆ ಎಂತಲೂ ವದಂತಿಗಳು ಹಬ್ಬಿವೆ.

ಸಮಂತಾ ಆಗಾಗ ದಿನನಿತ್ಯದ ಜೀವನದ ಗ್ಲಿಂಪ್‌ಗಳನ್ನು ಹಂಚಿಕೊಳ್ಳುತ್ತಾರೆ. ನಟಿ ಈಗ ವಾರಾಂತ್ಯದಲ್ಲಿ ಕುದುರೆ ಸವಾರಿ ಆನಂದಿಸುತ್ತಿರುವ ಚಿತ್ರವನ್ನು ಹಂಚಿಕೊಂಡಿದ್ದಾರೆ. ಕುದುರೆಯ ಮೇಲೆ ನಟಿ ಹೆಲ್ಮೆಟ್‌ನೊಂದಿಗೆ ಕಪ್ಪು ಉಡುಪು ಧರಿಸಿದ್ದರು. ರಾಶಿ ಖನ್ನಾ ಮತ್ತು ಪ್ರಜ್ಞಾ ಜೈಸ್ವಾಲ್ ಚಿತ್ರಕ್ಕೆ ಪ್ರತಿಕ್ರಿಯಿಸಿದ್ದಾರೆ,

ಸಾಹಸ ದೃಶ್ಯಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರಾ ಸಮಂತಾ

ಕೆಲವು ದಿನಗಳ ಹಿಂದೆ, ಸಮಂತಾ ರುತ್ ಪ್ರಭು ಅವರು ಸಾಹಸ ಪ್ರದರ್ಶಕ ಮತ್ತು ಸಾಹಸ ನಿರ್ದೇಶಕ ಯಾನಿಕ್ ಬೆನ್ ಅವರೊಂದಿಗೆ ಸಾಹಸ ದೃಶ್ಯಗಳನ್ನು ಅಭ್ಯಾಸ ಮಾಡುವ ವಿಡಿಯೊವನ್ನು ಹಂಚಿಕೊಂಡಿದ್ದಾರೆ. ಎಂಟು ಡಿಗ್ರಿ ಸೆಲ್ಸಿಯಸ್‌ನಲ್ಲಿ, ನಟಿ ನೈನಿತಾಲ್‌ನಲ್ಲಿ ಆ್ಯಕ್ಷನ್ ಶೂಟ್‌ಗೆ ತಯಾರಿ ನಡೆಸುತ್ತಿರುವಾಗ ಪಂಚ್‌ಗಳನ್ನು ಹೊಡೆಯುತ್ತಿರುವುದು ಕಂಡುಬರುತ್ತದೆ. ಸಮಂತಾ ಮುಂದೆ ಸಿಟಾಡೆಲ್ ಅಂತಾರಾಷ್ಟ್ರೀಯ ವೆಬ್‌ ಸಿರೀಸ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.ಇದನ್ನು ಮೂಲತಃ ನಿರ್ದೇಶಕ ಜೋಡಿಯಾದ ರುಸ್ಸೋ ಬ್ರದರ್ಸ್ ರಚಿಸಿದ್ದಾರೆ. ವರುಣ್ ಧವನ್ ಈ ಸರಣಿಯಲ್ಲಿ ಸಮಂತಾ ಎದುರು ಜೋಡಿಯಾಗಿದ್ದಾರೆ.

ಇದನ್ನೂ ಓದಿ: Samantha Ruth Prabhu: 600 ಮೆಟ್ಟಿಲು ಹತ್ತಿ ದೇವರ ಆಶೀರ್ವಾದ ಪಡೆದ ನಟಿ ಸಮಂತಾ

ಸಮಂತಾ ತಮ್ಮ ಬಹು ನಿರೀಕ್ಷಿತ ಪೌರಾಣಿಕ ಚಿತ್ರ ಶಾಕುಂತಲಂ ಬಿಡುಗಡೆಗೆ ಎದುರು ನೋಡುತ್ತಿದ್ದಾರೆ. ಚಿತ್ರವು ಫೆಬ್ರವರಿ 17 ರಂದು ಬಿಡುಗಡೆಯಾಗುವ ನಿರೀಕ್ಷೆಯಿತ್ತು ಆದರೆ ಈಗ ಏಪ್ರಿಲ್ 14ಕ್ಕೆ ಮುಂದೂಡಲಾಗಿದೆ.

Exit mobile version