Site icon Vistara News

Samantha Ruth Prabhu: ಸಮಂತಾಗೆ ವಯಸ್ಸಾಗಿದೆ ಎಂದ ಚಿಟ್ಟಿಬಾಬು: ಹೊಸ ಪೋಸ್ಟ್‌ನಲ್ಲಿ ಸ್ಯಾಮ್‌ ಹೇಳಿದ್ದೇನು?

Samantha Ruth Prabhu Shares Pics From Hospital Producer Calls Her 'Old'

ಬೆಂಗಳೂರು: ತೆಲುಗು ನಿರ್ಮಾಪಕ ಚಿಟ್ಟಿಬಾಬು ಎರಡನೇ ಬಾರಿ ನಟಿ ಸಮಂತಾ (Samantha Ruth Prabhu) ಅವರನ್ನು ಗೇಲಿ ಮಾಡಿ, ನಟಿಗೆ ಸಾಕಷ್ಟು ವಯಸ್ಸಾಗಿದೆ ಎಂಬ ಹೇಳಿಕೆ ಬೆನ್ನಲ್ಲೇ ಸಮಂತಾ ತಮ್ಮ ಹಳೆಯ ಫೋಟೊಗಳನ್ನು ಇನ್‌ಸ್ಟಾದಲ್ಲಿ ಹಂಚಿಕೊಂಡಿದ್ದಾರೆ. ಮೈಯೋಸಿಟಿಸ್ ಎಂಬ ಕಾಯಿಲೆಯಿಂದ ಚೇತರಿಸಿಕೊಂಡ ಸಮಂತಾ ತಮ್ಮ ದೈನಂದಿನ ಚಟುವಟಿಕೆಗಳ ಫೋಟೊಗಳನ್ನು, ಜತೆಗೆ ತಮ್ಮ ಹಳೆಯ ಫೋಟೊಗಳನ್ನು ಹಂಚಿಕೊಂಡಿದ್ದಾರೆ.

ಸಮಂತಾ 16 ವರ್ಷದವಳಾಗಿದ್ದಾಗಿರುವ ಪೋಟೊ, ಅವರ ಪ್ರೀತಿಯ ನಾಯಿಗಳ ಫೋಟೊ, ತಾವು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಫೋಟೊ, ಆಟೋಇಮ್ಯೂನ್ ಪರಿಸ್ಥಿತಿಗಳಿಗೆ ‘ಹೈಪರ್ಬೇರಿಕ್ ಥೆರಪಿ’ ಹೇಗೆ ಬಳಸಬಹುದು ಎಂಬುದನ್ನು ಗೂಗಲ್‌ ಸರ್ಚ್‌ ಮಾಡಿರುವ ಸ್ಕ್ರೀನ್‌ಶಾಟ್ ಸಹ ಅವರು ಹಂಚಿಕೊಂಡಿದ್ದಾರೆ. ಕುದುರೆ ಸವಾರಿ ಮಾಡುತ್ತಿರುವ ಚಿತ್ರವನ್ನು ಹಂಚಿಕೊಂಡಿದ್ದಾರೆ. ಹೋಟೆಲ್‌ನಲ್ಲಿ ಫುಡ್‌ ಆನಂದಿಸುತ್ತಿರುವ, ಜಾಹೀರಾತಿಗಾಗಿ ಚಿತ್ರೀಕರಣ ಮಾಡಿರುವ, ತನ್ನ ವರ್ಕೌಟ್ ಸೆಷನ್‌ ಚಿತ್ರ, ತಮ್ಮ ಬಂಗಲೆಯ ವಿಡಿಯೊಗಳನ್ನು ರವೀಂದ್ರನಾಥ್ ಠಾಗೋರ್ ಅವರ ಕೋಟ್‌ನೊಂದಿಗೆ ಹಂಚಿಕೊಂಡಿದ್ದಾರೆ.

ʻಮರಗಳನ್ನು ನೆಟ್ಟವನು, ಅದರ ನೆರಳಿನಲ್ಲಿ ಎಂದಿಗೂ ಕುಳಿತುಕೊಳ್ಳುವುದಿಲ್ಲ. ಆದರೆ ಜೀವನದ ಅರ್ಥವನ್ನು ಅರ್ಥಮಾಡಿಕೊಳ್ಳಲು ಪ್ರಾರಂಭಿಸುತ್ತಾನೆʼʼಎಂದು ರವೀಂದ್ರನಾಥ ಠಾಗೋರ್‌ ಅವರ ಸಾಲನ್ನು ಇನ್‌ಸ್ಟಾದಲ್ಲಿ ಉಲ್ಲೇಖಿಸಿ ನಿರ್ಮಾಪಕ ಚಿಟ್ಟಿಬಾಬು ಅವರಿಗೆ ತಿರುಗೇಟು ನೀಡಿದ್ದಾರೆ.

ಪೋಸ್ಟ್‌ ವೈರಲ್‌ ಆಗುತ್ತಿದ್ದಂತೆ ಸಮಂತಾ ಅವರಿಗೆ ಅವರ ಅಭಿಮಾನಿಗಳು ಬೆಂಬಲ ಸೂಚಿಸಿ ʻʻನನ್ನ ಸ್ಯಾಮ್ ವರ್ಲ್ಡ್ ಪವರ್‌ಫುಲ್, ಸ್ಟ್ರಾಂಗ್ ಮತ್ತು ಲವ್ಲಿ ” ಎಂದು ಅಭಿಮಾನಿಯೊಬ್ಬರು ಬರೆದಿದ್ದಾರೆ. ಚಿಟ್ಟಿಬಾಬು ಅವರು ಎರಡನೇ ಬಾರಿ ಸಮಂತಾ ಅವರನ್ನು ಗೇಲಿ ಮಾಡಿದ ಕೆಲವೇ ಗಂಟೆಗಳ ನಂತರ ಸಮಂತಾ ಪೋಸ್ಟ್ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: Samantha Ruth Prabhu: ತಾರಕಕ್ಕೇರಿದ ಸಮಂತಾ- ಚಿಟ್ಟಿಬಾಬು ಜಟಾಪಟಿ: ಖಾರವಾಗಿ ಉತ್ತರ ನೀಡಿದ ನಿರ್ಮಾಪಕ!

ಸಮಂತಾ ಪೋಸ್ಟ್‌

ಚಿಟ್ಟಿಬಾಬು ಹೇಳಿದ್ದೇನು?

ತೆಲುಗು ನಿರ್ಮಾಪಕ ಚಿಟ್ಟಿಬಾಬು ʻʻಸಮಂತಾ ಅವರಿಗೆ ಈಗ 18-20 ವರ್ಷ ವಯಸ್ಸಾಗಿಲ್ಲ. ಸಾಕಷ್ಟು ವಯಸ್ಸಾಗಿದೆ. ಹಾಗಾಗಿ ಅಪ್ರತಿಮ ಸುಂದರಿ ಶಕುಂತಲಾ ಪಾತ್ರಕ್ಕೆ ಅವರು ಸೂಕ್ತ ಆಯ್ಕೆಯಲ್ಲ ಎಂದು ನಾನು ಹೇಳಿದೆ, ಅದರಲ್ಲಿ ತಪ್ಪೇನಿದೆ? ಅವರ ಗ್ಲ್ಯಾಮರಸ್‌ ದಿನಗಳು ಮುಗಿದಿವೆ. ಪೋಷಕ ಪಾತ್ರಗಳಿಗೆ ತೆರಳುವ ಸಮಯ ಬಂದಿದೆ. ಆದರೆ ಸಮಂತಾ ಈ ಸತ್ಯವನ್ನು ಒಪ್ಪಿಕೊಳ್ಳಲು ಸಿದ್ಧವಾಗಿಲ್ಲʼʼಎಂದು ಹೇಳಿಕೆ ನೀಡಿದ್ದಾರೆ.

Exit mobile version