ಬೆಂಗಳೂರು: ಸಮಂತಾ ರುತ್ ಪ್ರಭು (Samantha Ruth Prabhu) ಮಯೋಸಿಟಿಸ್ ಕಾಯಿಲೆಯಿಂದ ಚೇತರಿಸಿಕೊಳ್ಳುತ್ತಿದ್ದಾರೆ. ಇದೀಗ ಆ್ಯಕ್ಷನ್ ಸ್ಪೈ ಥ್ರಿಲ್ಲರ್ ಸಿಟಾಡೆಲ್ ಸಿರೀಸ್ ಚಿತ್ರೀಕರಣದಲ್ಲಿದ್ದಾರೆ. ಆ್ಯಕ್ಷನ್ ಸೀಕ್ವೆನ್ಸ್‌ಗಳನ್ನು ನಿರ್ವಹಿಸಲು ಫಿಟ್ ದೇಹವನ್ನು ಹೊಂದಿರಬೇಕು. ಇದೀಗ ಸಮಂತಾ ಐಸ್ ಬಾತ್ ಫೋಟೊವನ್ನು ಇನ್‌ಸ್ಟಾದಲ್ಲಿ ಹಂಚಿಕೊಂಡು ʻʻಚಿತ್ರಹಿಂಸೆಯ ಸಮಯʼʼ ಎಂದು ಬರೆದುಕೊಂಡಿದ್ದಾರೆ. ಫೋಟೊದಲ್ಲಿ, ನಟಿ ಐಸ್ ಬಕೆಟ್‌ನಲ್ಲಿ ಸ್ನಾನ ಮಾಡುವುದನ್ನು ಕಾಣಬಹುದು.
ಸಮಂತಾ ಜಿಮ್‌ನಲ್ಲಿ ವರ್ಕೌಟ್ ಮಾಡುವ ಫೋಟೊಗಳು ಹಾಗೂ ವಿಡಿಯೊಗಳನ್ನು ಆಗಾಗ ಇನ್‌ಸ್ಟಾದಲ್ಲಿ ಹಂಚಿಕೊಳ್ಳುತ್ತಲೇ ಇರುತ್ತಾರೆ. ಕೆಲವು ದಿನಗಳ ಹಿಂದೆ ಸಿರೀಸ್‌ಗಾಗಿ ಆ್ಯಕ್ಷನ್ ದೃಶ್ಯಕ್ಕೆ ತರಬೇತಿ ಪಡೆಯುತ್ತಿರುವುದನ್ನು ಕಾಣಬಹುದು. ವರ್ಕೌಟ್ ಬಳಿಕ ಐಸ್ ಬಾತ್ ಥೆರಪಿ ದೇಹಕ್ಕೆ ತುಂಬ ಪ್ರಯೋಜನಕಾರಿ ಎಂದು ಹೇಳಲಾಗುತ್ತದೆ. ಇದರಿಂದ ಪ್ರಯೋಜನಗಳೇನೆಂಬುದು ನೋಡೋಣ.
- ಐಸ್ ಬಾತ್ ಥೆರಪಿಯು ದೇಹವನ್ನು ದೃಢಗೊಳಿಸುತ್ತದೆ.
- ವರ್ಕೌಟ್ ಬಳಿಕ ಐಸ್ ಬಾತ್ ಥೆರಪಿ ದೇಹಕ್ಕೆ ತುಂಬ ಪ್ರಯೋಜನಕಾರಿ.
- ಐಸ್ ಬಾತ್ ದೇಹವನ್ನು ತಂಪಾಗಿರುತ್ತದೆ. ಇದು ಮಾನಸಿಕ ಆರೋಗ್ಯ ಮತ್ತು ನಿದ್ರೆಯನ್ನು ಸುಧಾರಿಸುತ್ತದೆ.
- ಇದು ರಕ್ತ ಪರಿಚಲನೆ ಸುಧಾರಿಸುತ್ತದೆ ಮತ್ತು ದೇಹದಲ್ಲಿ ಆಮ್ಲಜನಕದ ಮಟ್ಟವನ್ನು ಹೆಚ್ಚಿಸುತ್ತದೆ.
- ಒತ್ತಡವನ್ನು ನಿಭಾಯಿಸುವ ಸಾಮರ್ಥ್ಯವನ್ನು ಇದು ಹೊಂದಿದೆ.
- ಸ್ನಾಯು ನೋವು ಕೂಡ ಕಡಿಮೆ ಮಾಡುತ್ತದೆ.
- ಹೃದಯರಕ್ತನಾಳದ ಕಾಯಿಲೆ ಅಥವಾ ಅಧಿಕ ರಕ್ತದೊತ್ತಡ ಹೊಂದಿರುವ ಜನ ಜಾಗರೂಕರಾಗಿರಬೇಕು.
- ವೈದ್ಯರ ಸಲಹೆಯ ಮೇರೆಗೆ ಈ ಐಸ್ ಬಾತ್ ಥೆರಪಿ ಮಾಡಬೇಕು.
ಇದನ್ನೂ ಓದಿ: Samantha Ruth Prabhu: ನಾಗಚೈತನ್ಯ ಜತೆಗೆ ವಾಸವಿದ್ದ ಮನೆಯನ್ನೇ ಭಾರಿ ಮೊತ್ತಕ್ಕೆ ಖರೀದಿಸಿದ್ರಾ ಸಮಂತಾ?
ನಟಿ ಈಗ ಸಿಟಾಡೆಲ್ ಸೀರೀಸ್‌ನ ಭಾರತೀಯ ರೂಪಾಂತರಕ್ಕಾಗಿ ಬಾಲಿವುಡ್ ಸ್ಟಾರ್ ವರುಣ್ ಧವನ್ ಅವರೊಂದಿಗೆ ಕೈಜೋಡಿಸಿದ್ದಾರೆ. ದಿ ಫ್ಯಾಮಿಲಿ ಮ್ಯಾನ್ ಚಿತ್ರವನ್ನು ನಿರ್ದೇಶಿಸಿದ ರಾಜ್ ಮತ್ತು ಡಿಕೆ ಇದನ್ನು ನಿರ್ದೇಶಿಸಲಿದ್ದಾರೆ. ಈಗಾಗಲೇ ಚಿತ್ರೀಕರಣ ಪ್ರಾರಂಭವಾಗಿದೆ. ಈ ಸಿನಿಮಾ ಜತೆಗೆ ಸಮಂತಾ ತೆಲುಗಿನಲ್ಲಿ ʼಖುಷಿʼ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ವಿಜಯ್ ದೇವರಕೊಂಡ ಜತೆ ಸಮಂತಾ ಅಭಿನಯಿಸುತ್ತಿದ್ದಾರೆ.