ಬೆಂಗಳೂರು: ಟಾಲಿವುಡ್ ನಟಿ ಸಮಂತಾ (Samantha Ruth Prabhu) ʻಖುಷಿʼ ಸಿನಿಮಾ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಇದರ ಬೆನ್ನಲ್ಲೇ ಹೊಸ ಸುದ್ದಿಯೊಂದು ವೈರಲ್ ಆಗುತ್ತಿದೆ. ಹೊಸ ವರದಿಯ ಪ್ರಕಾರ ಸಮಂತಾ ರುತ್ ಪ್ರಭು ತಮ್ಮ ಆರೋಗ್ಯದ ಮೇಲೆ ನಿಗಾ ಇಡಲು ನಟನೆಯಿಂದ ಬ್ರೇಕ್ ತೆಗೆದುಕೊಳ್ಳಲು ನಿರ್ಧರಿಸಿದ್ದಾರೆ ಎನ್ನಲಾಗುತ್ತಿದೆ. ಮೈಯೋಸಿಟಿಸ್ ಎಂಬ ಆಟೋಇಮ್ಯೂನ್ ಕಾಯಿಲೆಯೊಂದಿಗೆ ಹೋರಾಡುತ್ತಿರುವ ನಟಿ, ನಟನೆಯಿಂದ ಒಂದು ವರ್ಷ ಬ್ರೇಕ್ ತೆಗೆದುಕೊಳ್ಳಲು ನಿರ್ಧರಿಸಿದ್ದಾರೆ. ಸಿಟಾಡೆಲ್ ಇಂಡಿಯಾ ಮತ್ತು ಖುಷಿ ಸಿನಿಮಾ ಬಳಿಕ ತೆಲುಗು, ತಮಿಳು ಅಥವಾ ಬಾಲಿವುಡ್ ಚಿತ್ರಗಳಿಗೆ ಸಹಿ ಹಾಕದಿರಲು ನಟಿ ನಿರ್ಧರಿಸಿದ್ದಾರೆ. ಹಾಗೂ ನಿರ್ಮಾಪಕರು ನೀಡಿದ ಅಡ್ವಾನ್ಸ್ ಪೇಮೆಂಟ್ ಹಿಂತಿರುಗಿಸಿದ್ದಾರೆ ಎನ್ನಲಾಗಿದೆ.
ಇಂಡಿಯಾ ಟುಡೇ ಈ ಬಗ್ಗೆ ವರದಿ ಮಾಡಿದ್ದು ʻʻಸಮಂತಾ ಕೆಲಸದಿಂದ ಒಂದು ವರ್ಷ ಬ್ರೇಕ್ ತೆಗೆದುಕೊಳ್ಳುತ್ತಾರೆ ಮತ್ತು ಯಾವುದೇ ಹೊಸ ತೆಲುಗು ಅಥವಾ ಬಾಲಿವುಡ್ ಚಿತ್ರಗಳಿಗೆ ಸಹಿ ಹಾಕುವುದಿಲ್ಲ. ಹೆಚ್ಚಿನ ಚಿಕಿತ್ಸೆಗಾಗಿ ಈ ನಿರ್ಧಾರ ತೆಗೆದುಕೊಂಡಿದ್ದಾರೆ. ಈಗಾಗಲೇ ನಿರ್ಮಾಪಕರಿಗೆ ಅಡ್ವಾನ್ಸ್ ಪೇಮೆಂಟ್ ಹಿಂತಿರುಗಿಸಿದ್ದಾರೆʼʼ ಎಂದು ವರದಿ ಮಾಡಿದೆ.
ಸಮಂತಾ ಪ್ರಸ್ತುತ ವಿಜಯ್ ದೇವರಕೊಂಡ ಅವರೊಂದಿಗೆ ಖುಷಿ ಚಿತ್ರದ ಚಿತ್ರೀಕರಣದಲ್ಲಿದ್ದಾರೆ. ಚಿತ್ರದ ಕೊನೆಯ ಶೂಟಿಂಗ್ ಶೆಡ್ಯೂಲ್ ಆಗಿದ್ದು, ಎರಡು ಅಥವಾ ಮೂರು ದಿನಗಳಲ್ಲಿ ಪೂರ್ಣಗೊಳ್ಳಲಿದೆ. ಸಿಟಾಡೆಲ್ ಸಿರೀಸ್ ಶೂಟಿಂಗ್ ಬಹುತೇಕ ಮುಗಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಖುಷಿ ಸೆಪ್ಟೆಂಬರ್‌ನಲ್ಲಿ ಬಿಡುಗಡೆಯಾಗಲಿದೆ. ಸಿಟಾಡೆಲ್ ಇಂಡಿಯಾ ಇನ್ನೂ ಬಿಡುಗಡೆ ದಿನಾಂಕವನ್ನು ಪ್ರಕಟಿಸಿಲ್ಲ. ಖುಷಿ ಸಿನಿಮಾದಲ್ಲಿ, ಸಮಂತಾ ವಿಜಯ್ ದೇವರಕೊಂಡ ಅವರೊಂದಿಗೆ ನಟಿಸಿದರೆ, ರಾಜ್ ಮತ್ತು ಡಿಕೆ ಸಿರೀಸ್ ಸಿಟಾಡೆಲ್‌ನಲ್ಲಿ ವರುಣ್ ಧವನ್ ಜತೆ ತೆರೆ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: Samantha Ruth Prabhu: ಆರೆಂಜ್ ಡ್ರೆಸ್‌ನಲ್ಲಿ ಕ್ಯೂಟ್ ಆಗಿ ಕಂಡ ಸಮಂತಾ!
ಖುಷಿ ಚಿತ್ರವನ್ನು ಶಿವ ನಿರ್ವಾಣ ನಿರ್ದೇಶಿಸುತ್ತಿದ್ದಾರೆ. ವಿಜಯ್ ದೇವರಕೊಂಡ, ಸಮಂತಾ, ಜಯರಾಮ್, ಸಚಿನ್ ಖೇಡಕರ್, ಮುರಳಿ ಶರ್ಮಾ, ಲಕ್ಷ್ಮೀ, ಅಲಿ, ರೋಹಿಣಿ, ವೆನ್ನೆಲ ಕಿಶೋರ್, ರಾಹುಲ್ ರಾಮಕೃಷ್ಣ, ಶ್ರೀಕಾಂತ್ ಅಯ್ಯಂಗಾರ್, ಶರಣ್ ಮುಂತಾದ ಅದ್ಭುತ ನಟ, ನಟಿಯರು ಈ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಈ ಚಿತ್ರಕ್ಕೆ, ಪೀಟರ್ ಹೆನ್ಸ್ ಸಾಹಸ ನಿರ್ದೇಶನ, ಪ್ರವೀನ್ ಪುಡಿ ಅವರ ಸಂಕಲನ, ಜಿ ಮುರಳಿ ಕ್ಯಾಮೆರಾ ಕೆಲಸ ಮಾಡಿದೆ. ಹೇಶಮ್ ಅಬ್ದುಲ್ ವಹಾಬ್ ಅವರ ಸಂಗೀತವಿದೆ. ಮೈತ್ರಿ ಮೂವಿ ಮೇಕರ್ಸ್ ಈ ಚಿತ್ರವನ್ನು ನಿರ್ಮಿಸುತ್ತಿದೆ. ತೆಲುಗು, ತಮಿಳು, ಮಲಯಾಳಂ ಮತ್ತು ಕನ್ನಡದಲ್ಲಿ ಚಿತ್ರ ಬಿಡುಗಡೆಯಾಗುತ್ತಿದೆ ಎಂದು ಚಿತ್ರತಂಡ ಮಾಹಿತಿ ನೀಡಿದೆ.