Site icon Vistara News

Samantha Ruth Prabhu: ಸಮಂತಾ ಮತ್ತೆ ಮದುವೆ ಆಗ್ತಾರಾ? ಅಭಿಮಾನಿಗೆ ನಟಿಯ ನೇರ ಉತ್ತರ!

Samantha Ruth Prabhu was asked if she would ever marry again

ಬೆಂಗಳೂರು: ನಟಿ ಸಮಂತಾ ರುತ್ ಪ್ರಭು (Samantha Ruth Prabhu) ಸೋಷಿಯಲ್‌ ಮೀಡಿಯಾದಲ್ಲಿ ಆಗಾಗ ಫ್ಯಾನ್ಸ್‌ ಜತೆ ಮಾತನಾಡುತ್ತಿರುತ್ತಾರೆ. ನಟಿ ಇನ್‌ಸ್ಟಾ ಮೂಲಕ ಆಸ್ಕ್ ಮಿ ಎನಿಥಿಂಗ್ ಸೆಷನ್‌ ಇಟ್ಟುಕೊಂಡಿದ್ದರು. ಅಭಿಮಾನಿಯೊಬ್ಬರು ನಟಿಗೆ ʻನೀವು ಮತ್ತೆ ಮದುವೆಯಾಗುತ್ತೀರಾ?ʼʼ ಎಂದು ಪ್ರಶ್ನೆ ಕೇಳಿದ್ದಾರೆ. ಇದಕ್ಕೆ ಅವರು ಲಾಜಿಕ್​ ಆಗಿ ಉತ್ತರ ನೀಡಿದ್ದಾರೆ. ‘ಅಂಕಿ ಅಂಶಗಳ ಪ್ರಕಾರ ಇದೊಂದು ಕೆಟ್ಟ ಹೂಡಿಕೆ’ ಎಂದಿದ್ದಾರೆ ಸಮಂತಾ!

ನಟಿ ಸಮಂತಾ ರುತ್ ಪ್ರಭು ಸದ್ಯ ಸಿನಿಮಾದಿಂದ ಬ್ರೇಕ್‌ ಪಡೆದಿದ್ದಾರೆ. ಆಗಾಗ ಸೋಷಿಯಲ್‌ ಮೀಡಿಯಾ ಮೂಲಕ ಫ್ಯಾನ್ಸ್‌ ಜತೆ ಮಾತುಕತೆ ನಡೆಸುತ್ತಾರೆ. ಇದೀಗ ಸಮಂತಾಗೆ ಫ್ಯಾನ್ಸ್‌ವೊಬ್ಬರು ʻನೀವು ಮತ್ತೆ ಮದುವೆಯಾಗುತ್ತೀರಾ?ʼʼ ಎಂದು ಪ್ರಶ್ನೆ ಕೇಳಿದ್ದಾರೆ. ‘ಅಂಕಿ ಅಂಶಗಳ ಪ್ರಕಾರ ಇದೊಂದು ಕೆಟ್ಟ ಹೂಡಿಕೆ’ ಎಂದಿದ್ದಾರೆ ಸಮಂತಾ. ಕಾರಣವನ್ನೂ ನೀಡಿದ್ದಾರೆ. ‘ಮೊದಲ ಮದುವೆಯಲ್ಲಿ ವಿಚ್ಛೇದನದ ಸಾಧ್ಯತೆ ಶೇ.50 ಇರುತ್ತದೆ. ಎರಡು ಹಾಗೂ ಮೂರನೇ ಮದುವೆಯಲ್ಲಿ ಈ ಪ್ರಮಾಣ ಶೇ. 67 ಹಾಗೂ ಶೇ.73 ಇರುತ್ತದೆ’ ಎಂದಿದ್ದಾರೆ ಅವರು. ಈ ಮೂಲಕ ಮತ್ತೆ ಮದುವೆ ಆಗುವುದಿಲ್ಲ ಎಂದು ನೇರವಾಗಿ ಹೇಳಿದ್ದಾರೆ.

ಇದನ್ನೂ ಓದಿ: Samantha Ruth Prabhu: ಗುಡ್‌ ನ್ಯೂಸ್‌ ಕೊಟ್ಟ ಸಮಂತಾ; ಸೆಲೆಬ್ರಿಟಿಗಳಿಂದ ಶುಭ ಹಾರೈಕೆ!

ಸಮಂತಾ ಮತ್ತು ಚೈತನ್ಯ 2017ರಲ್ಲಿ ವಿವಾಹವಾಗಿದ್ದರು. ಅಕ್ಟೋಬರ್ 2021ರಲ್ಲಿ ಡಿವೋರ್ಸ್‌ ಪಡೆದರು. ನಾಗಚೈತನ್ಯ ಮತ್ತು ಸಮಂತಾ ಹಲವು ಚಿತ್ರಗಳಲ್ಲಿ ಒಟ್ಟಾಗಿ ಅಭಿನಯಿಸಿದ್ದರು. ‘ಮಜಿಲಿ‘, ‘ಓ ಬೇಬಿ‘ ಮತ್ತು ‘ಯೇ ಮಾಯಾ ಚೇಸಾವೆ‘ ಮುಂತಾದ ಹಿಟ್​ ಸಿನಿಮಾಗಳನ್ನು ನೀಡಿದ್ದಾರೆ. ಹಾಗೇ ಡೇಟಿಂಗ್‌ ಮಾಡುತ್ತಾ, ಮದುವೆಯೂ ಆದರು.

ಸಮಂತಾ ಕೊನೆಯ ಬಾರಿಗೆ ʼಖುಷಿʼ ಸಿನಿಮಾದಲ್ಲಿ ಕಾಣಿಸಿಕೊಂಡರು. ಇತ್ತೀಚೆಗೆ ಹಿಂದಿಯ ರ್‍ಯಾಪ್ ರಿಯಾಲಿಟಿ ಶೋ ಜಡ್ಜ್ ಹನಿ ಸಿಂಗ್​ ಜತೆ ಸಮಂತಾ ವೇದಿಕೆ ಹಂಚಿಕೊಂಡಿದ್ದರು. MTV ರಿಯಾಲಿಟಿ ಶೋನಲ್ಲಿ ಸಮಂತಾ ಸ್ಟೈಲಿಶ್‌ ಆಗಿ ಕಾಣಿಸಿಕೊಂಡಿದ್ದರು. ತಮ್ಮ ಬ್ಯಾನರ್ ‘ತ್ರಲಾಲಾ ಮೂವಿಂಗ್ ಪಿಕ್ಚರ್ಸ್’ ಪ್ರಾರಂಭಿಸುವುದರೊಂದಿಗೆ, ನಿರ್ಮಾಣ ಕ್ಷೇತ್ರಕ್ಕೆ ಕಾಲಿಟ್ಟಿದ್ದಾರೆ. ಮುಂದೆ, ಸಮಂತಾ ಸಿಟಾಡೆಲ್‌ನ ಭಾರತೀಯ ಆವೃತ್ತಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ, ಇದರಲ್ಲಿ ವರುಣ್ ಧವನ್ ಸಹ ನಟಿಸಿದ್ದಾರೆ. ಇದನ್ನು ರಾಜ್ ಮತ್ತು ಡಿಕೆ ನಿರ್ದೇಶಿಸಿದ್ದಾರೆ.

ಕರಣ್ ಜೋಹರ್ ಅವರ ಧರ್ಮ ಪ್ರೊಡಕ್ಷನ್ಸ್ ನಿರ್ಮಿಸುವ ಮುಂಬರುವ ಚಿತ್ರದಲ್ಲಿ ಸಮಂತಾ ರುತ್ ಪ್ರಭು ಮತ್ತು ಸಲ್ಮಾನ್ ಖಾನ್ ರೊಮ್ಯಾನ್ಸ್ ಮಾಡುವ ಸಾಧ್ಯತೆಯಿದೆ ಎಂದು ವರದಿಯಾಗಿದೆ. ಈ ಚಿತ್ರಕ್ಕಾಗಿ ನಿರ್ದೇಶಕ ವಿಷ್ಣುವರ್ಧನ್ ಅವರೊಂದಿಗೆ ಸಮಂತಾ ಮಾತುಕತೆ ನಡೆಸುತ್ತಿದ್ದಾರೆ ಎಂದು ವರದಿಯಾಗಿದೆ. ವರದಿಯ ಪ್ರಕಾರ ಈ ಸಿನಿಮಾಗೆ ಸಮಂತಾ ಜತೆಗೆ ತ್ರಿಶಾ ಮತ್ತು ಅನುಷ್ಕಾ ಶೆಟ್ಟಿ ಕೂಡ ಇರಲಿದ್ದಾರೆ ಎಂದು ಹೇಳಲಾಗಿದೆ. ಸದ್ಯಕ್ಕೆ ಚಿತ್ರತಂಡದಿಂದ ಯಾವುದೇ ಅಧಿಕೃತ ಮಾಹಿತಿ ಬಂದಿಲ್ಲ.

Exit mobile version