ಬೆಂಗಳೂರು : ನಟಿ ಸಮಂತಾ (Samantha) ಮೈಯೋಸಿಟಿಸ್ ಕಾಯಿಲೆ ನಂತರ ವರ್ಕೌಟ್ ವಿಡಿಯೊವನ್ನು ಹಂಚಿಕೊಂಡಿದ್ದಾರೆ. ಸಮಂತಾ ಜಿಮ್‌ನಲ್ಲಿ ಪುಲ್ ಅಪ್ ಮಾಡುತ್ತಿರುವ ವರ್ಕೌಟ್ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಇದೀಗ ಅವರ ಅಭಿಮಾನಿಗಳು ಸಮಂತಾ ಅವರ ಆರೋಗ್ಯಕರ ಜೀವನಶೈಲಿ ಮತ್ತು ಅವರ ದೃಢಸಂಕಲ್ಪಕ್ಕಾಗಿ ಶ್ಲಾಘಿಸಿದ್ದಾರೆ.
ʻಯಶೋದ’ ಸಿನಿಮಾದ ಸಕ್ಸಸ್ ನಂತರ ʻಶಾಕುಂತಲಂ’ ಸಿನಿಮಾ ರಿಲೀಸ್‌ಗೆ ಸಮಂತಾ ಕಾಯುತ್ತಿದ್ದಾರೆ. ಆರೋಗ್ಯದಲ್ಲಿ ಕೊಂಚ ಚೇತರಿಕೊಂಡಿರುವ ಬೆನ್ನಲ್ಲೇ ಸಿನಿಮಾ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದಾರೆ. ಈ ಹಿಂದೆ ಸಮಂತಾ ಕೂಡ ಸಾಕಷ್ಟು ಸಮಯ ಜಿಮ್‌ನಲ್ಲಿ ಕಳೆದಿದ್ದರು. ಅನಾರೋಗ್ಯದ ನಿಮಿತ್ತ ಅವರು ಸಂಪೂರ್ಣವಾಗಿ ಜಿಮ್ ತೊರೆದಿದ್ದರು. ಈಗ ಅವರು ವರ್ಕೌಟ್ ಮಾಡಲು ಮರಳಿದ್ದಾರೆ. ಈ ವಿಡಿಯೊವನ್ನು ಅವರು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: Samantha | ಶೂಟಿಂಗ್‌ಗೆ ಮತ್ತೆ ಮರಳಿದ ಸಮಂತಾ: ವರುಣ್ ಧವನ್ ಜತೆ ಇದ್ದ ಫೋಟೊ ವೈರಲ್
ʻಶಾಕುಂತಲಂʼ ಸಿನಿಮಾ ಫೆಬ್ರವರಿ 17ರಂದು ತಮಿಳು, ತೆಲುಗು, ಕನ್ನಡ, ಹಿಂದಿ ಹಾಗೂ ಮಲಯಾಳಂನಲ್ಲಿ ಬಿಡುಗಡೆಗೊಳ್ಳಲಿದೆ.
ಇದನ್ನೂ ಓದಿ: Samantha | ಶೂಟಿಂಗ್‌ಗೆ ಮತ್ತೆ ಮರಳಿದ ಸಮಂತಾ: ವರುಣ್ ಧವನ್ ಜತೆ ಇದ್ದ ಫೋಟೊ ವೈರಲ್
ಮಹಾಕವಿ ಕಾಳಿದಾಸನ ಅಭಿಜ್ಞಾನ ʻಶಾಕುಂತಲಂʼ ನಾಟಕವನ್ನು ಆಧರಿಸಿ ಚಿತ್ರ ನಿರ್ಮಾಣವಾಗಿದೆ. ರಾಜ ದುಷ್ಯಂತ ಪಾತ್ರದಲ್ಲಿ ದೇವ್ ಮೋಹನ್ ನಟಿಸಿದರೆ, ಶಾಕುಂತಲೆಯಾಗಿ ಸಮಂತಾ ಕಾಣಿಸಿಕೊಳ್ಳುತ್ತಿದ್ದಾರೆ. ಟಾಲಿವುಡ್ ನಟ ಅಲ್ಲು ಅರ್ಜುನ್ ಮಗಳು ಅರ್ಹಾ ಕೂಡ ಈ ಚಿತ್ರಕ್ಕೆ ಬಣ್ಣ ಹಚ್ಚಿದ್ದಾರೆ.
ಚಿತ್ರವನ್ನು ಗುಣಶೇಖರ್ ನಿರ್ದೇಶಿಸಿದ್ದಾರೆ. ನೀಲಿಮಾ ಗುಣ ಮತ್ತು ದಿಲ್ ರಾಜು ನಿರ್ಮಾಣ ಮಾಡಿದ್ದಾರೆ. ಸಚಿನ್ ಖೇಡೇಕರ್, ಅನನ್ಯ ನಾಗಲ್ಲ, ಮೋಹನ್ ಬಾಬು, ಗೌತಮಿ ಮತ್ತು ಅದಿತಿ ಬಾಲನ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಸಮಂತಾ ರುತ್ ಪ್ರಭು ಈಗಾಗಲೇ ಹಲವು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಸಮಂತಾ ಹಾಗೂ ವಿಜಯ್ ದೇವರಕೊಂಡ ಅಭಿನಯದ ʻಖುಷಿʼ ಚಿತ್ರ ತೆರೆಗೆ ಬರಲು ಸಜ್ಜಾಗುತ್ತಿದೆ.