Site icon Vistara News

Actress Samantha Video: ಸಮಂತಾಳ ಫಿಟ್‌ನೆಸ್‌ ಸ್ಟಂಟ್ಸ್‌ ಹೇಗಿದೆ ನೋಡಿ!

Samantha Acrobatic Skills

ಹೈದರಾಬಾದ್‌: ನಟಿ ಸಮಂತಾ ರುತ್‌ ಪ್ರಭು(Actress Samantha Video) ಅವರು ಸಿಟಾಡೆಲ್‌ (ಭಾರತದ ವರ್ಷನ್‌) ಸೀರೀಸ್‌ನ ಶೂಟಿಂಗ್‌ ಮುಗಿಸಿದ್ದಾರೆ. ಹಾಗಾಗಿ ನಟಿ ಸ್ವಲ್ಪ ದಿನಗಳ ಮಟ್ಟಿಗೆ ಕೆಲಸದಿಂದ ಬ್ರೇಕ್‌ ತೆಗೆದುಕೊಂಡಿದ್ದು, ಸದ್ಯ ಬಾಲಿಯಲ್ಲಿ ಪ್ರವಾಸ ನಡೆಸುತ್ತಿದ್ದಾರೆ. ಪ್ರವಾಸದಲ್ಲಿದ್ದರೂ ಫಿಟ್‌ನೆಸ್‌ ವಿಚಾರವನ್ನು ಮರೆಯದ ನಟಿ ಅಲ್ಲಿಯೂ ಆಕ್ರೋಬೆಟಿಕ್‌ ಸ್ಟಂಟ್‌ ಮಾಡಿದ್ದಾರೆ. ಅದರ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದು, ವೈರಲ್‌ ಆಗಿದೆ.

ಸಮಂತಾ ಜತೆ ಇನ್ನಿಬ್ಬರು ಯೋಗ ತರಬೇತಿದಾರರನ್ನು ವಿಡಿಯೊದಲ್ಲಿ ನೋಡಬಹುದು. ವಿಡಿಯೊದಲ್ಲಿ ಸಮಂತಾ ಅವರು ನೆಲದ ಮೇಲೆ ಮಲಗಿದ್ದು, ತಮ್ಮ ಕಾಲು ಮತ್ತು ಕೈಗಳಿಂದಲೇ ಯೋಗ ಇನ್‌ಸ್ಟ್ರಕ್ಟರ್‌ ಅನ್ನು ಮೇಲಕ್ಕೆ ಎತ್ತುತ್ತಾರೆ. ಅವರ ಪೂರ್ತಿ ದೇಹದ ಭಾರವನ್ನು ತಮ್ಮ ಕೈ ಕಾಲುಗಳಿಂದಲೇ ಬ್ಯಾಲೆನ್ಸ್‌ ಮಾಡುತ್ತಾರೆ. ಕೆಲವು ಸೆಕೆಂಡುಗಳ ಕಾಲ ಈ ರೀತಿಯಲ್ಲಿ ಬ್ಯಾಲೆನ್ಸ್‌ ಮಾಡಿ ನಂತರ ಅವರನ್ನು ಕೆಳಗೆ ಇಳಿಸುತ್ತಾರೆ.

ಇದನ್ನೂ ಓದಿ: Samantha Ruth Prabhu: ಶಾರ್ಟ್‌ ಹೇರ್‌ನಲ್ಲಿ ಕ್ಯೂಟಾಗಿ ಕಂಡ ಸಮಂತಾ; ಬಾಲಿಯಲ್ಲಿ ಸ್ಯಾಮ್‌ ಜಾಲಿ
ಈ ವಿಡಿಯೊವನ್ನು ನಟಿ ತಮ್ಮ ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ಹಂಚಿಕೊಂಡಿದ್ದರು. ಅದೇ ರೀತಿಯಲ್ಲಿ ಆಕ್ರೋಬೆಟಿಕ್‌ನ ಬೇರೆ ಬೇರೆ ಸ್ಟಂಟ್‌ಗಳನ್ನು ಮಾಡುವ ವಿಡಿಯೊವನ್ನೂ ನಟಿ ಸ್ಟೋರಿಯಲ್ಲಿ ಹಂಚಿಕೊಂಡಿದ್ದರು. ಪ್ರವಾಸದಲ್ಲಿದ್ದರೂ ಫಿಟ್‌ನೆಸ್‌ ಬಗ್ಗೆ ನಟಿ ತೋರುತ್ತಿರುವ ಕಾಳಜಿ ಕಂಡು ಅಭಿಮಾನಿಗಳು ನಿಬ್ಬೆರಗಾಗಿದ್ದಾರೆ. ಅವರ ಸಾಕಷ್ಟು ವಿಡಿಯೊಗಳನ್ನು ವೈರಲ್‌ ಆಗುವಂತೆ ಮಾಡಿದ್ದಾರೆ.


ಸಿಟಾಡೆಲ್‌ ಭಾರತೀಯ ವರ್ಷನ್‌ ಸೀರಿಸ್‌ನಲ್ಲಿ ಸಮಂತಾ ಸಾಹಸಮಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ನಟಿಗೆ ಬಾಲಿವುಡ್‌ ನಟ ವರುಣ್‌ ಧವನ್‌ ಅವರು ಸಾಥ್‌ ನೀಡಿದ್ದಾರೆ. ಸಿಟಾಡೆಲ್‌ ಚಿತ್ರೀಕರಣ ಪೂರ್ತಿಯಾಗುತ್ತಿದ್ದಂತೆಯೇ ತಾವು ಕೆಲ ದಿನಗಳ ಮಟ್ಟಿಗೆ ಕೆಲಸದಿಂದ ಬ್ರೇಕ್‌ ತೆಗೆದುಕೊಳ್ಳುತ್ತಿರುವುದಾಗಿ ನಟಿ ಸಾಮಾಜಿಕ ಜಾಲತಾಣಗಳಲ್ಲಿ ತಿಳಿಸಿದ್ದರು.


ಸಿಟಾಡೆಲ್‌ ಅಲ್ಲದೆ ಸಮಂತಾ ಅವರು ನಟ ವಿಜಯ್‌ ದೇವರಕೊಂಡ ಅವರ ಜತೆ ‘ಖುಷಿ’ ಸಿನಿಮಾದಲ್ಲಿಯೂ ನಟಿಸುತ್ತಿದ್ದಾರೆ. ಇದು ಭಾರತೀಯ ಸೇನೆಯ ಯೋಧ ಮತ್ತು ಕಾಶ್ಮೀರದ ಯುವತಿಯೊಬ್ಬಳ ನಡುವಿನ ನವಿರಾದ ಪ್ರೇಮಕಥೆಯಿರುವ ಸಿನಿಮಾವಾಗಿದೆ. ಈ ಸಿನಿಮಾ ಇದೇ ಸೆಪ್ಟೆಂಬರ್‌ನಲ್ಲಿ ತೆರೆ ಕಾಣಲಿದೆ. ಸಮಂತಾ ಅವರಿಗೆ ವಿಜಯ್‌ ದೇವರಕೊಂಡ ಅವರ ಜತೆ ಇದು ಎರಡನೇ ಸಿನಿಮಾವಾಗಿದೆ. ಈ ಹಿಂದೆ 2018ರಲ್ಲಿ ನಟಿ ವಿಜಯ್‌ ಅವರೊಂದಿಗೆ ‘ಮಹಾನಟಿ’ ಸಿನಿಮಾದಲ್ಲಿ ಜತೆಯಾಗಿ ಕಾಣಿಸಿಕೊಂಡಿದ್ದರು.

Exit mobile version