Site icon Vistara News

Citadel: ರುಸ್ಸೋ ಬ್ರದರ್ಸ್ ಶೋ ಭಾರತೀಯ ಅವತರಣಿಕೆಯಲ್ಲಿ ವರುಣ್‌ ಧವನ್‌ ಜತೆ ಸಮಂತಾ

Citadel Prime Video series Citadel, to co-star opposite Varun Dhawan

ಬೆಂಗಳೂರು : ಸಿಟಾಡೆಲ್ (Citadel) ಯೂನಿವರ್ಸ್‌ನ ಭಾರತೀಯ ಕಂತು, ಪ್ರೈಮ್ ವಿಡಿಯೊ ಮತ್ತು ರುಸ್ಸೋ ಬ್ರದರ್ಸ್‌ ಜಾಗತಿಕ-ಈವೆಂಟ್ ಸಿರೀಸ್‌ನಲ್ಲಿ ವರುಣ್ ಧವನ್ ನಾಯಕ ಎಂಬ ಘೋಷಣೆ ಬೆನ್ನಲ್ಲೇ ಸಮಂತಾ ರುತ್ ಪ್ರಭು ನಾಯಕಿ ಎಂದು ಅನೌನ್ಸ್‌ ಆಗಿದೆ. ರುಸ್ಸೋ ಬ್ರದರ್ಸ್‌ನ ಅಂತಾರಾಷ್ಟ್ರೀಯ ಸರಣಿ ಸಿಟಾಡೆಲ್‌ನ ಭಾರತೀಯ ಅವತರಣಿಕೆಯಲ್ಲಿ ಪ್ರಿಯಾಂಕಾ ಚೋಪ್ರಾ ಮತ್ತು ರಿಚರ್ಡ್ ಮ್ಯಾಡೆನ್ ನಟಿಸಿದ್ದಾರೆ.

ಇದೀಗ ಪ್ರೈಮ್‌ ವಿಡಿಯೊ ತನ್ನ ಸೋಷಿಯಲ್‌ ಮೀಡಿಯಾದಲ್ಲಿ ಸಮಂತಾ ಅವರ ಫೋಟೊವನ್ನು ಹಂಚಿಕೊಂಡು ʻʻಮಿಷನ್ ಆನ್ ಆಗಿದೆ. ನಾವು ಸಿಟಾಡೆಲ್‌ನ ಭಾರತೀಯ ಕಂತುಗಾಗಿ ರೋಲಿಂಗ್ ಪ್ರಾರಂಭಿಸಿದ್ದೇವೆ” ಎಂದು ಬರೆದಿದ್ದಾರೆ. ವರುಣ್ ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರೀಸ್‌ನಲ್ಲಿ “ತಂಡಕ್ಕೆ ಸ್ವಾಗತ” ಎಂಬ ಶೀರ್ಷಿಕೆಯೊಂದಿಗೆ ಪೋಸ್ಟ್ ಅನ್ನು ರೀ ಪೋಸ್ಟ್‌ ಮಾಡಿಕೊಂಡು, ನಟಿಯನ್ನು ಟ್ಯಾಗ್ ಮಾಡಿದ್ದಾರೆ.

ಇದನ್ನೂ ಓದಿ: Samantha | ಶೂಟಿಂಗ್‌ಗೆ ಮತ್ತೆ ಮರಳಿದ ಸಮಂತಾ: ವರುಣ್ ಧವನ್ ಜತೆ ಇದ್ದ ಫೋಟೊ ವೈರಲ್‌

ಭಾರತದಿಂದ ಹೊರಗಿರುವ ಸಿಟಾಡೆಲ್ ಸಿರೀಸ್‌ ಅನ್ನು ಹೆಸರಾಂತ ರಚನೆಕಾರ ಜೋಡಿ ರಾಜ್ ಮತ್ತು ಡಿಕೆ (ರಾಜ್ ನಿಡಿಮೋರು ಮತ್ತು ಕೃಷ್ಣ ಡಿಕೆ) ಅವರು ನಿರ್ದೇಶಿಸುತ್ತಿದ್ದಾರೆ. ಈಗಾಗಲೆ ಸಿರೀಸ್‌ ನಿರ್ಮಾಣ ಕಾರ್ಯ ಪ್ರಾರಂಭಗೊಂಡಿದೆ. ಇದರ ನಂತರ, ತಂಡ ಉತ್ತರ ಭಾರತ, ಸರ್ಬಿಯಾ ಮತ್ತು ದಕ್ಷಿಣ ಆಫ್ರಿಕಾದಂತಹ ಅಂತಾರಾಷ್ಟ್ರೀಯ ಸ್ಥಳಗಳಲ್ಲಿ ಶೂಟಿಂಗ್‌ ನಡೆಸಲಿದೆ. ಜೋಡಿ ರಾಜ್ ಮತ್ತು ಡಿಕೆ ಈ ಬಗ್ಗೆ ಮಾತನಾಡಿ “ದಿ ಫ್ಯಾಮಿಲಿ ಮ್ಯಾನ್ ನಂತರ ಮತ್ತೊಮ್ಮೆ ಸಮಂತಾ ಅವರೊಂದಿಗೆ ಕೆಲಸ ಮಾಡಲು ನಾವು ಉತ್ಸುಕರಾಗಿದ್ದೇವೆʼʼ ಎಂದು ಹೇಳಿದರು.

ಸಮಂತಾ ಮಾತನಾಡಿ ʻʻಪ್ರೈಮ್ ವಿಡಿಯೊʼʼ ಮತ್ತು ರಾಜ್ – ಡಿಕೆ ಅವರು ನನ್ನನ್ನು ಸಂಪರ್ಕಿಸಿದಾಗ, ಖುಷಿಯಾಯಿತು. ದಿ ಫ್ಯಾಮಿಲಿ ಮ್ಯಾನ್‌ನಲ್ಲಿ ಈ ತಂಡದೊಂದಿಗೆ ಕೆಲಸ ಮಾಡಿದ ನಂತರ, ಇದು ನನಗೆ ಮತ್ತಷ್ಟು ಹೋಮ್ಲಿ ಎನಿಸಿದೆ. ಸಿಟಾಡೆಲ್ ಯೂನಿವರ್ಸ್, ಜಗತ್ತಿನಾದ್ಯಂತ ಸಂಪರ್ಕಗಳನ್ನು ಹೊಂದಿರುವ ಕಥಾಹಂದರ. ಮುಖ್ಯವಾಗಿ, ಭಾರತೀಯ ಕಂತುಗಳ ಸ್ಕ್ರಿಪ್ಟ್ ನಿಜವಾಗಿಯೂ ನನ್ನನ್ನು ರೋಮಾಂಚನಗೊಳಿಸಿತು. ರುಸ್ಸೋ ಬ್ರದರ್ಸ್‌ನ ಎಜಿಬಿಒ ಪರಿಕಲ್ಪನೆಯ ಭಾಗವಾಗಲು ನಾನು ರೋಮಾಂಚನಗೊಂಡಿದ್ದೇನೆ. ಈ ಯೋಜನೆಯಲ್ಲಿ ನಾನು ಮೊದಲ ಬಾರಿಗೆ ವರುಣ್ ಜತೆ ಕೆಲಸ ಮಾಡಲು ಎದುರು ನೋಡುತ್ತಿದ್ದೇನೆʼʼ ಎಂದು ನಟಿ ಹೇಳಿದರು.

ಇದನ್ನೂ ಓದಿ: Samantha: `ಪಠಾಣ್‌’ ಎಫೆಕ್ಟ್‌ನಿಂದ ಬಿಡುಗಡೆ ಮುಂದೂಡಿದ ಸಮಂತಾ ಅಭಿನಯದ ಶಾಕುಂತಲಂ?

ರಾಜ್ ನಿಡಿಮೋರು ಮತ್ತು ಕೃಷ್ಣ ಡಿಕೆ ಅವರು ತಮ್ಮ ಬ್ಯಾನರ್ ಡಿ2ಆರ್ ಫಿಲ್ಮ್ಸ್ ಅಡಿಯಲ್ಲಿ ಕಾರ್ಯಕಾರಿ ನಿರ್ಮಾಪಕರಾಗಿಯೂ ಕಾರ್ಯನಿರ್ವಹಿಸಲಿದ್ದಾರೆ. ಈ ಸರಣಿಯನ್ನು D2R ಫಿಲ್ಮ್ಸ್ ಮತ್ತು ಅಮೆಜಾನ್ ಸ್ಟುಡಿಯೋಸ್ ನಿರ್ಮಿಸಿದೆ.

Exit mobile version